ಸಿಡಿ ಯುವತಿ ಮನೆಯಲ್ಲಿ ಲಕ್ಷ ಲಕ್ಷ ಹಣ ಪತ್ತೆ ಹಚ್ಚಿದ ಎಸ್ಐಟಿ..!
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ಮುಂದುವರೆದಿದ್ದು ಸಿಡಿ ಯುವತಿ ಮನೆಯಲ್ಲಿ ಎಸ್ಐಟಿ ಲಕ್ಷ ಲಕ್ಷ ಹಣ ಪತ್ತೆ ಹಚ್ಚಿದೆ.
ಹೌದು.. ನಿನ್ನೆ ಬೆಳಗಾವಿಯ ಯುವತಿ ಮನೆ ಮೇಲೆ ರೇಡ್ ಮಾಡಿದ ಎಸ್ಐಟಿ ಮನೆ ಮಾಲೀಕರನ್ನು ವಿಚಾರಣೆ ಮಾಡಿದ್ದಾರೆ. ಮನೆ ಮಾಲೀಕರ ಪ್ರಕಾರ ಯುವತಿ ಸಿಡಿ ಬಿಡುಗಡೆಯಾದ ಕೆಲ ದಿನಗಳ ನಂತರ ಯುವತಿ ಕರೆ ಮಾಡಿ ಕ್ಷಮೆ ಕೇಳಿದ್ದಳು ಎನ್ನುವ ಮಾಹಿತಿಯನ್ನು ಎಸ್ಐಟಿ ಕಲೆ ಹಾಕಿದೆ. ಇದರ ಜೊತೆಗೆ ಮನೆಯಲ್ಲಿ 9.2ಲಕ್ಷ ಹಣ ಪತ್ತೆಯಾಗಿರುವುದು ಹಲವಾರು ಅನುಮಾನಗಳಿಗೆ ಗುರಿ ಮಾಡಿದೆ. ಇದರ ತನಿಖೆ ಕೂಡ ಎಸ್ಐಟಿ ನಡೆಸಿದೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಿಡಿಯಲ್ಲಿರುವ ಯುವತಿ ವಾಸವಿದ್ದ ಮನೆಗೆ ಎಸ್ಐಟಿ ತಂಡ ದಿಢೀರ್ ಭೇಟಿ ನೀಡಿತ್ತು. ಎಸಿಪಿ ಧರ್ಮೇಂದ್ರ ನೇತೃತ್ವದ ಎಸ್ಐಟಿ ತಂಡದಿಂದ ಆಕೆಯ ಮನೆಯಲ್ಲಿ ಪರಿಶೀಲನೆ ನಡೆಸಲಾಗಿತ್ತು. ಯುವತಿ ವಾಸವಿದ್ದ ಮನೆಯಲ್ಲಿ ಪರಿಶೀಲನೆ ನಡೆಸಲಾಗಿತ್ತು. ಸಿಡಿಯಲ್ಲಿರುವ ಯುವತಿಯನ್ನು ಯಾರಾದರೂ ಇತ್ತೀಚಿಗೆ ಮತ್ತೆ ಸಂಪರ್ಕಿಸಿದ್ದರಾ? ಆಕೆ ಇಲ್ಲಿದ್ದ ಸಂದರ್ಭದಲ್ಲಿ ಬೇರೆ ಯಾರಾದರೂ ಇಲ್ಲಿ ಭೇಟಿ ನೀಡುತ್ತಿದ್ದರಾ? ಎಂಬ ಬಗ್ಗೆ ಕಟ್ಟಡದ ಮಾಲೀಕರ ಬಳಿ ಪ್ರಶ್ನೆ ಮಾಡಲಾಗಿದೆ.
ಜೊತೆಗೆ ಯುವತಿ ಕುಟುಂಬಸ್ಥರು ಕೂಡ ಯುವತಿ ಕಾಣೆಯಾಗಿದ್ದಾಳೆಂದು ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಎಸ್ಐಟಿ ದಿಢೀರನೆ ಮನೆಗೆ ಭೇಟಿ ನೀಡಿದೆ. ನಿನ್ನೆ ಗಂಗಾನಗರದಲ್ಲಿ ಯುವತಿ ವಾಸವಿದ್ದ ಮನೆಗೆ ಭೇಟಿ ನೀಡಿದ್ದ ಎಸ್ಐಟಿ ತಂಡ ಸಂಜೆಯಿಂದ ರಾತ್ರಿ 10 ಗಂಟೆಯವರೆಗೂ ಪರಿಶೀಲನೆ ನಡೆಸಿತ್ತು. ಯುವತಿ ವಾಸವಾಗಿದ್ದ ಪಕ್ಕದ ಮನೆಯವರನ್ನೂ ವಿಚಾರಣೆ ನಡೆಲಾಗಿದೆ.