ಫ್ಯಾಕ್ಟ್‌ಚೆಕ್: ಆದಿವಾಸಿ ಮಹಿಳೆ ರಾಷ್ಟ್ರಪತಿ ಹುದ್ದೆಗೇರಿದರೆ ಮೀಸಲಾತಿ ತೆಗೆಯಬೇಕೆಂದು ಅಂಬೇಡ್ಕರ್‌ ಹೇಳಿಲ್ಲ

“ಆದಿವಾಸಿ ಮಹಿಳೆಯೊಬ್ಬರು ಭಾರತ ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನಕ್ಕೇರಿದ ಮರುಗಳಿಗೆಯಿಂದಲೇ ಭಾರತದಲ್ಲಿ ಮೀಸಲಾತಿಯನ್ನು ತೆಗೆಯಬೇಕು, ಮತ್ತು ಮೀಸಲಾತಿ ಅವಶ್ಯಕತೆ ಇರುವುದಿಲ್ಲ ಎಂದು ಸಂವಿಧಾನ ಶಿಲ್ಪಿ  ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್‌  ಹೇಳಿದ್ದಾರೆ” ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ವೊಂದು ಹರಿದಾಡುತ್ತಿದೆ. ಮೀಸಲಾತಿ ಕುರಿತು ಅಂಬೇಡ್ಕರ್ ಈ ರೀತಿ ಹೇಳಿದ್ದಾರೆಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

 

ಜುಲೈ 18ರಂದು ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ  ಎನ್‌ಡಿಎ (NDA) ಕೂಟದ ಅಭ್ಯರ್ಥಿ ಜಾರ್ಖಂಡ್‌ ರಾಜ್ಯದ ಮಾಜಿ ರಾಜ್ಯಪಾಲೆ, ಓರಿಸ್ಸಾ ಮೂಲದ ದ್ರೌಪದಿ ಮುರ್ಮುರವರನ್ನು ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬೆನ್ನಲ್ಲೆ ಈ ಚರ್ಚೆ ಆರಂಭವಾಗಿದೆ.

ಅಂಬೇಡ್ಕರ್ ಹೀಗೆ ಹೇಳಿಲ್ಲ :

ಸಂವಿಧಾನ ರಚಿಸುವವರಿಗೆ, ಕಾನೂನು ಮಾಡುವವರಿಗೆ ಈ ದೇಶದ ಅಸಮಾನತೆ, ಜಾತಿಪದ್ದತಿ, ಅಸ್ಪೃಶ್ಯತೆ ಆಚರಣೆಯಂತಹ ಪರಿಸ್ಥಿತಿಯ ತಿಳಿವಳಿಕೆ ಇದ್ದದ್ದರಿಂದಲೇ ಪರಿಶಿಷ್ವ ವರ್ಗ, ಪರಿಶಿಷ್ವ ಜಾತಿಯವರೂ ಇತರ ಮೇಲುವರ್ಗ, ಮೇಲುಜಾತಿಯವರ ಸರಿಸಮಕ್ಕೆ ಬರುವುದಕ್ಕೆ ಅನುಕೂಲವಾಗಬಹುದಾದಂಥ ಕಾನೂನುಗಳನ್ನು ಮಾಡಿದರು. ಮೀಸಲಾತಿಯ ಹಕ್ಕು ಸಹ ಅಂಥ ಉದ್ದೇಶದಿಂದಲೇ ಜಾರಿಯಾಯಿತು. ಸಂವಿಧಾನ ಮತ್ತು ಮೀಸಲಾತಿ ಸಮರ್ಪಕವಾಗಿ ಜಾರಿಯಾದರೆ ಅದನ್ನು ಬಹಳ ವರ್ಷ ಮುಂದುವರೆಸುವ ಅಗತ್ಯವಿಲ್ಲ ಎಂದು ಅಂಬೇಡ್ಕರ್‌ರವರು ಹೇಳಿದ್ದು ನಿಜ. ಆದರೆ ಇಂದಿಗೂ ದಲಿತರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳಲ್ಲಿ ನಿರೀಕ್ಷಿತ ಬದಲಾವಣೆ ಕಾಣದೇ ಇರುವುದರಿಂದ ಈ ಹಕ್ಕು ಇನ್ನೂ ಕೆಲವು ಕಾಲ ಮುಂದುವರೆಸುವುದು ಸೂಕ್ತ ಎಂದು ಸರಕಾರ ಮತ್ತು ಜನತೆಯ ಪ್ರತಿನಿಧಿಗಳು ಭಾವಿಸಿ ಅದಕ್ಕೆ ಅನುಗುಣವಾಗಿ ತೀರ್ಮಾನ ಕೈಗೊಂಡರು. ಆದರೆ ಆದಿವಾಸಿ ಮಹಿಳೆ ಭಾರತದ ರಾಷ್ಟ್ರಪತಿಯಾದಾಗ ಮೀಸಲಾಗಿ ತೆಗೆಯಬೇಕೆಂದು ಅಂಬೇಡ್ಕರ್ ಎಲ್ಲಿಯೂ ಹೇಳಿಲ್ಲ.

ಮೀಸಲಾತಿ ಸಂವಿಧಾನದ ಹಕ್ಕು ಮಾತ್ರವಲ್ಲ,  ಮಾನವ ಹಕ್ಕು ಕೂಡ ಹೌದು. ಭಾರತದಲ್ಲಿ ಮೀಸಲಾತಿಯನ್ನು ವ್ಯಾಖ್ಯಾನಿಸುವ ನಿಟ್ಟಿನಲ್ಲಿ ನಾವೆಲ್ಲರೂ ಎಡವಿದ್ದೇವೆ. ಸಂವಿಧಾನದಲ್ಲಿ ಮೀಸಲಾತಿ ಕುರಿತು ಸ್ಪಷ್ಟವಾಗಿ ಹೇಳಿದ್ದರೂ ಅದನ್ನು ಕಾರ್ಯಗತಗೊಳಿಸುವಾಗ ಬೇಕಾದ ಬದ್ದತೆ ನಮ್ಮ ಸಮಾಜದಲ್ಲಿ ಇತ್ತೆ? ಎಂದು ನಾವೆಲ್ಲರೂ ಪ್ರಶ್ನಿಸಿಕೊಳ್ಳಬೇಕಿದೆ.

ಒಟ್ಟಾರೆಯಾಗಿ ಹೇಳುವುದಾದರೆ “ಆದಿವಾಸಿ ಮಹಿಳೆಯೊಬ್ಬರು ಭಾರತ ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನಕ್ಕೇರಿದ ಮರುಗಳಿಗೆಯಿಂದಲೇ ಭಾರತದಲ್ಲಿ ಮೀಸಲಾತಿಯನ್ನು ತೆಗೆಯಬೇಕು, ಮತ್ತು ಮೀಸಲಾತಿ ಅವಶ್ಯಕತೆ ಇರುವುದಿಲ್ಲ” ಎಂದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. BR ಅಂಬೇಡ್ಕರ್‌ರವರು ಹೇಳಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿ: ಪತ್ರಕರ್ತ ಜುಬೇರ್ ಬಂಧನ : BJP ಯ ದಮನಕಾರಿ ನೀತಿಗೆ ಖಂಡನೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights