ನುಗ್ಗೆ ಸೊಪ್ಪಿನಿಂದ 300 ಕಾಯಿಲೆಗಳು ದೂರ… ಅವು ಏನು ಎಂದು ತಿಳಿದುಕೊಳ್ಳೋಣ…!

ನುಗ್ಗೆ ಸೊಪ್ಪನ್ನು ಬಹಳಷ್ಟು ಮಂದಿ ತುಂಬಾ ಇಷ್ಟದಿಂದ ತಿನ್ನುತ್ತಾರೆ. ಸಾರಿನಲ್ಲಿ ಇವನ್ನು ಹಾಕಿಕೊಂಡು ತಿಂದರೂ, ಪಲ್ಯ ಮಾಡಿಕೊಂಡು ತಿಂದರೂ, ಹೇಗೆ ತಿಂದರೂ ರುಚಿ ಮಾತ್ರ ಅದ್ಭುತವಗಿ ಇರುತ್ತದೆ. ಅನೇಕ ಮಂದಿ ಚಪ್ಪರಿಸಿಕೊಂಡು ನುಗ್ಗೆಕಾಯಿಯನ್ನು ತಿನ್ನುತ್ತಾರೆ. ಹೇಗೆ ತಿಂದರೂ ನುಗ್ಗೆ ಕಾಯಿಯಿಂದ ನಮಗೆ ಆರೋಗ್ಯ ಪ್ರಯೋಜನಗಳು ಸಾಕಷ್ಟಿವೆ. ನುಗ್ಗೆಕಾಯಿ ಮಾತ್ರ ಅಲ್ಲದೆ ನುಗ್ಗೆ ಸೊಪ್ಪು ಸಹ ನಮಗೆ ಸಾಕಷ್ಟು ಉಪಯೋಗಕ್ಕೆ ಬರುತ್ತದೆ. ನುಗ್ಗೆ ಸೊಪ್ಪನ್ನು ನಿತ್ಯ ಖಾಲಿ ಹೊಟ್ಟೆಯಲ್ಲಿ ತಿನ್ನುತ್ತಿದ್ದರೂ ಅಥವಾ ನುಗ್ಗೆ ಸೊಪ್ಪನ್ನು ಒಣಗಿಸಿ ಪುಡಿ ಮಾಡಿಕೊಂಡು ಆ ಪುಡಿಯನ್ನು ನಿತ್ಯ ತಿಂದರೂ ಅದರಿಂದ ಅನೇಕ ಅದ್ಭುತ ಫಲಿತಾಂಶಗಳನ್ನು ಪಡೆಯಬಹುದು. ಅವು ಏನು ಎಂಬುದನ್ನು ಈಗ ತಿಳಿದುಕೊಳ್ಳೋಣ.

1. ಹಾಲಿಗಿಂತಲೂ 17 ಪಟ್ಟು ಹೆಚ್ಚು ಕ್ಯಾಲ್ಸಿಯಂ ನಮಗೆ ನುಗ್ಗೆ ಸೊಪ್ಪಿನ ಮೂಲಕ ಸಿಗುತ್ತದೆ. ಇದರಿಂದ ಮೂಳೆಗಳು ದೃಢವಾಗಿ ಬದಲಾಗುತ್ತವೆ. ಬೆಳೆಯುವ ಮಕ್ಕಳಿಗೆ ಇದು ಒಳ್ಳೆಯದು. ದಂತಗಳು ದೃಢವಾಗಿ ತಯಾರಾಗುತ್ತವೆ.

2. ನುಗ್ಗೆ ಸೊಪ್ಪಿನಲ್ಲಿ ಪ್ರೊಟೀನ್ ಸಹ ಹೆಚ್ಚಾಗಿ ಇರುತ್ತದೆ. ಮಾಂಸ ತಿನ್ನದವರು ನುಗ್ಗೆ ಸೊಪ್ಪಿನ ಪಲ್ಯ ಮಾಡಿಕೊಂಡು ತಿಂದರೆ ಅದರಿಂದ ದೇಹಕ್ಕೆ ಪ್ರೊಟೀನ್ ಚೆನ್ನಾಗಿ ಲಭಿಸುತ್ತದೆ. ದೇಹಕ್ಕೆ ಪೋಷಣೆ ಸೂಕ್ತ ರೀತಿಯಲ್ಲಿ ಲಭಿಸುತ್ತದೆ.

3. ಬಾಳೆಹಣ್ಣಿಗಿಂತಲೂ 15 ಪಟ್ಟು ಅಧಿಕ ಪೊಟ್ಯಾಷಿಯಂ ನಮಗೆ ನುಗ್ಗೆ ಸೊಪ್ಪಿನ ಮೂಲಕ ಸಿಗುತ್ತದೆ. ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ರಕ್ತ ಸಂಚಲನೆ ಸಹ ಉತ್ತಮವಾಗುತ್ತದೆ.

4. ನಿತ್ಯ 7 ಗ್ರಾಂ ನುಗ್ಗೆ ಸೊಪ್ಪಿನ ಪುಡಿಯನ್ನು ಮೂರು ತಿಂಗಳ ಕಾಲ ರೆಗ್ಯುಲರ್ ಆಗಿ ತೆಗೆದುಕೊಂಡರೆ ಶೇ.13.5ರಷ್ಟು ಬ್ಲಡ್ ಶುಗರ್ ಲೆವೆಲ್ಸ್ ಕಡಿಮೆಯಾಗುತ್ತವೆ ಎಂದು ಸಂಶೋಧನೆಯಲ್ಲಿ ಗೊತ್ತಾಗಿದೆ. ಇವುಗಳಲ್ಲಿ ಇರುವ ಕ್ಲೊರೊಜೆನಿಕ್ ಆಸಿಡ್ ಮೂಲಕ ಬ್ಲಡ್ ಶುಗರ್ ಲೆವೆಲ್ಸನ್ನು ನಿಯಂತ್ರಣದಲ್ಲಿಡುತ್ತದೆ. ಇದರಿಂದ ಮಧುಮೇಹ ಇರುವವರಿಗೆ ನುಗ್ಗೆ ಸೊಪ್ಪು ಒಳ್ಳೆಯ ಔಷಧ ಎಂದು ಹೇಳಬಹುದು.

5. ಐದು ರೀತಿಯ ಕ್ಯಾನ್ಸರ್‌ಗಳಿಗೆ ನುಗ್ಗೆ ಸೊಪ್ಪು ಒಳ್ಳೆಯ ಔಷಧಿಯಾಗಿ ಕೆಲಸ ಮಾಡುತ್ತದೆ. ಲಂಗ್, ಲಿವರ್, ಒವೇರಿಯನ್, ಮೆಲನೋವಾದಂತಹ ಕ್ಯಾನ್ಸರ್‌ಗಳನ್ನು ನಿರೋಧಿಸುವ ಶಕ್ತಿ ಇವಕ್ಕೆ ಇದೆ ಎಂದು ಇತ್ತೀಚಿನ ಸಂಶೋಧನೆಯಲ್ಲಿ ಗೊತ್ತಾಗಿದೆ. ಆಂಟಿ ಟ್ಯೂಮರ್‍ ಆಗಿಯೂ ನುಗ್ಗೆ ಸೊಪ್ಪು ಕೆಲಸ ಮಾಡುತ್ತದೆ.

6. ಥೈರಾಯಿಡನ್ನು ಸಮತೋಲನವಾಗಿರಿಸುವ ಸಹಜವಾದ ಔಷಧಿ ನುಗ್ಗೆ ಸೊಪ್ಪು. ನುಗ್ಗೆ ಸೊಪ್ಪಿನಲ್ಲಿ ಎ, ಸಿ ವಿಟಮಿನ್‌ಗಳು, ಕ್ಯಾಲ್ಸಿಯಂ, ಫಾಸ್ಪರಸ್, ಐರನ್ ಸಹ ಹೆಚ್ಚಾಗಿ ಇರುತ್ತದೆ.

7. ನುಗ್ಗೆ ಸೊಪ್ಪಿನ ರಸವನ್ನು ನಿತ್ಯ ಕುಡಿದರೆ ದೃಷ್ಟಿ ಮಾಂದ್ಯ, ಇರುಳು ಗುರುಡುತನ ಕಡಿಮೆಯಾಗುತ್ತದೆ. ನುಗ್ಗೆ ಸೊಪ್ಪಿನಲ್ಲಿ ಅಮಿನೋ ಆಮ್ಲಗಳು ಇರುವ ಕಾರಣ ಪ್ರೋಟೀನ್ ಲೋಪದಿಂದ ಬರುವ ಆರೋಯ ಸಮಸ್ಯೆಗಳಿಂದ ಹೊರಬರಬಹುದು.

8. ಗರ್ಭಿಣಿಯರಿಗೆ, ಬಾಣಂತಿಯರಿಗೆ ನುಗ್ಗೆ ಸೊಪ್ಪಿನ ರಸ ತುಂಬಾ ಒಳ್ಳೆಯದು. ಅವರಿಗೆ ಅಗತ್ಯವಾದಷ್ಟು ಕ್ಯಾಲ್ಸಿಯಂ, ಐರನ್, ವಿಟಮಿನ್‌ಗಳು ಹೇರಳವಾಗಿ ಲಭಿಸುತ್ತವೆ. ತಾಯಂದಿರ ಜತೆಗೆ, ಹಾಲುಕುಡಿಯುವ ಮಕ್ಕಳು ಸಹ ಆರೋಗ್ಯವಾಗಿ ಇರುತ್ತಾರೆ.

9. ನುಗ್ಗೆ ಸೊಪ್ಪಿನ ರಸ ರಕ್ತಹೀನತೆಯನ್ನು ನಿವಾರಿಸುತ್ತದೆ. ನುಗ್ಗೆ ಎಲೆಯ ರಸವನ್ನು ಹಾಲಿನಲ್ಲಿ ಬೆರೆಸಿ ಮಕ್ಕಳಿಗೆ ನೀಡಿದರೆ ಮೂಳೆಗಳು ದೃಢವಾಗುತ್ತವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights