ದೇಶದಲ್ಲಿ ಒಂದೇ ದಿನ 4.01 ಲಕ್ಷ ಕೊರೊನಾ ಕೇಸ್ : 4,187 ಜನ ಬಲಿ..!

ದೇಶದಲ್ಲಿ ಒಂದೇ ದಿನ 4.01 ಲಕ್ಷ ಕೊರೊನಾ ಕೇಸ್ ದಾಖಲಾಗಿದ್ದು 4,187 ಜನ ಬಲಿಯಾಗಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಯಲ್ಲಿ 4.01 ಲಕ್ಷ (4,01,078) ಹೊಸ ಕರೋನವೈರಸ್ ಪ್ರಕರಣಗಳು ದಾಖಲಾಗಿದ್ದು, ಈ ಮೂಲಕ ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 2.18 ಕೋಟಿಗೆ ತಲುಪಿದೆ. ಶನಿವಾರ 4,187 ಜನರು ಸೋಂಕಿಗೆ ಬಲಿಗಿ ದೇಶದಲ್ಲಿ ಈವರೆಗೆ ಸಾವಿನ ಸಂಖ್ಯೆ 2.38 ಲಕ್ಷಕ್ಕೆ ಏರಿಕೆಯಾಗಿದೆ.

ಸಾಂಕ್ರಾಮಿಕ ರೋಗದ ಪ್ರಾರಂಭದ ನಂತರ ಇದು ಅತಿ ಹೆಚ್ಚು ಸಾವಿನ ಸಂಖ್ಯೆ ಇದಾಗಿದೆ. 4.01 ಲಕ್ಷ ಹೊಸ ಪ್ರಕರಣಗಳ ಪೈಕಿ ಮಹಾರಾಷ್ಟ್ರ (54,022), ಉತ್ತರ ಪ್ರದೇಶ (27,763), ಕೇರಳ, ಕರ್ನಾಟಕ (48,781), ತಮಿಳುನಾಡು (26,465) ಪ್ರಕರಣಗಳು ದಾಖಲಾಗಿವೆ.

ದೇಶದಲ್ಲಿ ಒಟ್ಟು 2,18,92,676 ಪ್ರಕರಣಗಳು ದಾಖಲಾಗಿದ್ದು, ಒಟ್ಟು 1,79,30,960 ಜನ ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ 2,38,270 ಕ್ಕೆ ಏರಿಕೆಯಾಗಿದೆ. ಒಟ್ಟು  37,23,446 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಈವರೆಗೆ ದೇಶದಲ್ಲಿ  ಒಟ್ಟು 16,73,46,544 ವ್ಯಾಕ್ಸಿನೇಷನ್ ನೀಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights