ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಿಳೆ; ಐವರಿಗೆ ಅಂಗಾಂಗ ದಾನ!

ಅಪಘಾತಕ್ಕೀಡಾಗಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಮಹಿಳೆಯ ಅಂಗಾಂಗಗಳನ್ನು ಐವರು ರೋಗಿಗಳಿಗೆ ದಾನ ಮಾಡಲಾಗಿದ್ದು, ಆಕೆ ಸಾವಿನಲ್ಲಿಯೂ ಸಾರ್ಥಕತೆಯನ್ನು ಮೆರೆದಿದ್ದಾಳೆ.

ಬೆಂಗಳೂರಿನ ಯಲಹಂಕಾದ ಮಹಿಳೆಯೊಬ್ಬರು ಡಿಸೆಂಬರ್‌ 13 ರಂದು ರಸ್ತೆ ಅಫಘಾತಕ್ಕೆ ಒಳಗಾಗಿದ್ದರು. ಅವರನ್ನು ಬೆಂಗಳೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ತಲೆಗೆ ಹೆಚ್ಚಿನ ಪೆಟ್ಟುಬಿದ್ದಿದ್ದರಿಂದ ಕೃತಹ ಉಸಿರಾಟದ ಸಂಪರ್ಕ ಕಲ್ಪಿಸಿ, ಚಿಕಿತ್ಸೆ ನೀಡಲಾಗಿತ್ತು. ಆದರೂ ಆಕೆಯ ಆರೋಗ್ಯದಲ್ಲಿ ಯಾವುದೇ ಚೇತರಿಕೆಯಾಗಿರಲಿಲ್ಲ.

ಮಹಿಳೆಯ ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯವಾಗಿದ್ದು, ಆಕೆ ಉಳಿಯುವುದಿಲ್ಲ ಎಂದು ವೈದ್ಯರು ಹೇಳಿದ ನಂತರ, ಆಕೆಯ ಮನೆಯವರು ವೈದ್ಯರ ಸಲಹೆಯ ಮೇರೆಗೆ ಆಕೆಯ ಅಂಗಾಗಳನ್ನು ಐವರು ರೋಗಿಗಳಿಗೆ ದಾನ ಮಾಡಿದ್ದಾರೆ.

ಮೃತಪಟ್ಟ 49 ವರ್ಷದ ಮಹಿಳೆಯ ಅಂಗಾಗಳನ್ನು ದಾನ ಮಾಡಲಾಗಿದ್ದು, ಒಲ ಮೂತ್ರಪಿಂಡವನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿಯೇ ದಾಖಲಾಗಿದ್ದ ಒಬ್ಬ ರೋಗಿಗೆ ನೀಡಲಾಗಿದ್ದು,  ಬಿಜಿಎಸ್ ಆಸ್ಪತ್ರೆಗೆ ಯಕೃತ್, ಅಪೋಲೋ ಆಸ್ಪತ್ರೆಗೆ ಎಡ ಮೂತ್ರಪಿಂಡ, ಜಯದೇವ ಆಸ್ಪತ್ರೆಗೆ ಹೃದಯ, ನಾರಾಯಣ ನೇತ್ರಾಲಯಕ್ಕೆ ಕಣ್ಣುಗಳನ್ನು ದಾನ ಮಾಡಿದ್ದಾರೆ.

ಅಪಘಾತಕ್ಕೀಡಾಗಿ ಮೆದುಳಿನ ನಿಷ್ಕ್ರಿಯತೆಯಿಂದ ಸಾವನ್ನಪ್ಪಿದ ಮಹಿಳೆ, ಇತರ ಐವರು ರೋಗಿಗಳು ಆಯೋಗ್ಯವಾಗಿರಲು ನೆರವಾಗಿದ್ದು, ತನ್ನ ಸಾವಿನಲ್ಲೂ ಜೀವದ ಸಾರ್ಥಕತೆ ಮೆರೆದಿದ್ದಾಳೆ.


ಇದನ್ನೂ ಓದಿ: ಡಿವೈಎಸ್ ಪಿ ಲಕ್ಷ್ಮಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ : ಸಾವಿಗೆ ಕಾರಣ ಗೆಳೆತನವೋ? ಸಿರಿತನವೋ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights