ಡಿವೈಎಸ್ ಪಿ ಲಕ್ಷ್ಮಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ : ಸಾವಿಗೆ ಕಾರಣ ಗೆಳೆತನವೋ? ಸಿರಿತನವೋ?

ಬೆಂಗಳೂರು ಡಿವೈಎಸ್ ಪಿ ಆತ್ಮಹತ್ಯೆ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ಸಾಕಷ್ಟು ವಿಚಾರಗಳನ್ನು ಬಯಲಿಗಳಿಯುತ್ತಿದೆ. ಮೊನ್ನೆ ರಾತ್ರಿ (ಡಿ16) ಲಕ್ಷ್ಮಿ ನಾಗರಬಾವಿಯ ಗೆಳೆಯನ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಇದು ಆತ್ಮಹತ್ಯೆ ಎಂದು ಒಪ್ಪದ ತಂದೆ ಮನು ಮತ್ತು ಪತಿ ನವೀನ್ ಮೇಲೆ ಆರೋಪ ಮಾಡಿದ್ದರು.

ತಂದೆ ದೂರಿನ ಬಳಿಕ ತನಿಖೆಯಲ್ಲಿ ಹಲವಾರು ವಿಚಾರಗಳು ಬಯಲಾಗಿವೆ. ಡಿವೈಎಸ್ ಪಿ ಲಕ್ಷ್ಮಿ ಹಾಗೂ ಪತಿ ನವೀನ್ ಸಂಸಾರ ಮೊದಮೊದಲು ಚೆನ್ನಾಗೇ ಇತ್ತು. ಕೆಲವು ವರ್ಷಗಳ ಹಿಂದೆ ಲಕ್ಷ್ಮಿಗೆ ಬಿಬಿಎಂಪಿ ಜೆಸಿಯೊಂದಿಗೆ ಗೆಳೆತನ ಕುದುರಿದೆ. ಆರ್.ಆರ್. ನಗರ ಜೆಸಿಯಾಗಿದ್ದ ವ್ಯಕ್ತಿ ಜೊತೆ ಲಕ್ಷ್ಮಿ ಒಡನಾಟ ಇತ್ತು. ಕ್ರಮೇಣ ಜೆಸಿ, ಲಕ್ಷ್ಮಿಯನ್ನ ಬಿಬಿಎಂಪಿ ಹುತ್ತಿಗೆದಾರ ಮನುಗೆ ಪರಿಚಯಿಸಿದ್ದ. ಅಲ್ಲದೆ ಲಕ್ಷ್ಮಿ- ನವೀನ್ ಸಂಸಾರ ಸರಿಮಾಡುವಂತೆ ಜೆಸಿ ಹೇಳಿದ್ದ. ಆದರೆ ಮನು ಮಾತ್ರ ಸಂಸಾರ ಸರಿಮಾಡುವ ಬದಲು ಸಂಸಾರಕ್ಕೆ ಹುಳಿ ಹಿಂಡಿದ್ದ.

ಲಕ್ಷ್ಮಿ ಸಂಸಾರ ಸರಿ ಮಾಡುವ ಬದಲಿಗೆ ಆಕೆಯೊಂದಿಗೆ ಹೆಚ್ಚು ಸಲಿಗೆಯಿಂದಿದ್ದ. ಆಕೆಯೊಂದಿಗೆ ಪಾರ್ಟಿ, ಗೆಳೆತನ ಹೆಚ್ಚಾಗಿತ್ತು. ಲಾಕ್ ಡೌನ್ ಸಮಯದಲ್ಲಿ ಆತನ ಗೆಳೆತನ ಇನ್ನೂ ತೀರಾ ಹೆಚ್ಚಾಗಿತ್ತು. ಹೀಗೆ ಫುಲ್ ಕ್ಲೋಸ್ ಆದ ಲಕ್ಷ್ಮಿ ಮನು ಫೋನ್ ಪಿಕ್ ಮಾಡದೇ ಮಾತನಾಡದೇ ಇದ್ದಾಗಲೆಲ್ಲಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮೊನ್ನೆ ಪಾರ್ಟಿಯಲ್ಲೂ ಇದೇ ನಡೆದಿದೆ ಎನ್ನಲಾಗುತ್ತಿದೆ. ಮನುವಿನೊಂದಿಗೆ ಜಗಳ ಆಗಿರಬಹುದು ಎಂಬ ಆರೋಪವಿದೆ.

ಮತ್ತೊಂದು ಕಡೆ ಲಕ್ಷ್ಮಿ ಸಿಕ್ಕಾಪಟ್ಟೆ ಮದ್ಯಪಾನ ಮಾಡ್ತಾಯಿದ್ರು. ಆಕೆ ಕುಡಿತದ ಚಟಕ್ಕೆ ಬಲಿಯಾಗಿದ್ದಾಳೆ. ಕುಡಿತದ ಅಮಲಿನಲ್ಲಿ ಇಂಥ ಕೆಲಸಕ್ಕೂ ಕೈಹಾಕಿರಬಹುದು ಎನ್ನಲಾಗುತ್ತಿದೆ.

ಇನ್ನೂ ಲಕ್ಷ್ಮಿ ಪತಿ ನವೀನ್ ಕೂಡ ಇದೇ ಆರೋಪ ಮಾಡುತ್ತಿದ್ದಾರೆ. ಲಕ್ಷ್ಮಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವುದೇ ಕಾರಣಗಳಿರಲಿಲ್ಲ. ಆಕೆ ಒಳ್ಳೆ ಉದ್ಯೋಗ ಹೊಂದಿದ್ದಳು. ಆರ್ಥಿಕವಾಗಿಯೂ ಯಾವುದೇ ಸಮಸ್ಯೆಗಳಿರಲಿಲ್ಲ. ಸ್ವಲ್ಪ ಮುಂಗೋಪಿ ಹೀಗಾಗಿ ನನ್ನ ಅವಳ ಮಧ್ಯೆ ಆಗಾಗ ಜಗಳ ಬರುತ್ತಿತ್ತು. ಆತ್ಮಹತ್ಯೆಗೂ ಮುನ್ನ ಆಕೆ ನನ್ನೊಂದಿಗೆ ಮಾತನಾಡಿದ್ದಾಳೆ. ಆಗ ಚೆನ್ನಾಗಿಯೇ ಮಾತನಾಡಿದ್ದಾಳೆ. ಆತ್ಮಹತ್ಯೆಯ ಅಥವಾ ಬೇಸರದ ಮಾತಗಳು ಆಕೆ ಆಡಲಿಲ್ಲ ಎಂದಿದ್ದಾರೆ.

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ತೊರಲಹಟ್ಟಿ ಗ್ರಾಮದಲ್ಲಿ ಲಕ್ಷ್ಮಿ ಅಂತ್ಯಕ್ರಿಯೆ ಮಾಡಲಾಗಿದೆ. ಪೊಲೀಸರು ಕುಶಾಲು ತೋಪು ಹಾರಿಸಿ ಸರ್ಕಾರಿ ಗೌರವ ಸಲ್ಲಿಸಿದರು. ಸದ್ಯ ಪ್ರಕರಣದ ತನಿಖೆಯನ್ನು ಪೊಲೀಸರು ಇನ್ನಷ್ಟು ಚುರುಕುಗೊಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights