ಜಿಂದಾಲ್‌ಗೆ 3 ಕೋಟಿ ಅನರ್ಹ ಲಾಭ; 81 ಹೆಕ್ಟೇರ್ ಅರಣ್ಯೇತರ ಭೂಮಿಯನ್ನೂ ಬಿಟ್ಟಿದೆ ಸರ್ಕಾರ!

ಗಣಿ ಗುತ್ತಿಗೆ ಪ್ರದೇಶಗಳ ಮ೦ಜೂರಾತಿಯಲ್ಲಿ ಸಿ೦ಹಪಾಲು ಪಡೆದಿರುವ ಜಿ೦ದಾಲ್‌ ಕ೦ಪನಿಯು 81.29 ಹೆಕ್ಕೇರ್‌ ಅರಣ್ಯೇತರ ಭೂಮಿಯನ್ನು ಮರಳಿಸಿಲ್ಲ. ಕೋಟ್ಯ೦ತರ ಮೊತ್ತದ ಬಾಕಿ ಉಳಿಸಿಕೊ೦ಡಿರುವ ಅರಣ್ಯೀಕರಣ ಶುಲ್ಕವನ್ನೂ ರಾಜ್ಯ ಸರ್ಕಾರ ವಸೂಲಿ ಮಾಡಿಲ್ಲ. ಗಣಿಗಾರಿಕೆಗಾಗಿ ಬಳಸಲಾಗುತ್ತಿರುವ ಅರಣ್ಯ ಪ್ರದೇಶಕ್ಕೆ. ಪರಿಹಾರಕ ಅರಣ್ಯೀಕರಣ ಶುಲ್ಕಗಳನ್ನು ಪಾವತಿಸಿಕೊಳ್ಳಲು ಪ್ರಧಾನ ಮುಖ್ಯ ಸ೦ರಕ್ಷಣಾಧಿಕಾರಿಯೂ ಕ್ರಮ ಕೈಗೊಳ್ಳಲಿಲ್ಲ ಎ೦ಬ ಅ೦ಶವನ್ನು ಸಿಎಜಿ ವರದಿ ಹೊರಗೆಡವಿದೆ.

ಆರ್ಥಿಕ ಮತ್ತು ರಾಜಸ್ವ ವಲಯಗಳಿಗೆ ಸ೦ಬಂಧಿಸಿದ೦ತೆ ಮಾರ್ಚ್‌ 2019 ಅಂತ್ಯಕ್ಕೆ ಸಿಎಜಿ ನೀಡಿರುವ ವರದಿಯು ಗಣಿ, ಭೂ ವಿಜ್ನಾನ ಇಲಾಖೆ ಮತ್ತು ಅರಣ್ಯ ಇಲಾಖೆಯ ಕರ್ತವ್ಯ ಲೋಪವನ್ನು ತೆರೆದಿಟ್ಟಿದೆ. 81 ಹೆಕ್ಟೇರ್‌ ಅರಣ್ಯ ಭೂಮಿಯನ್ನು ವಾಪಸ್‌ ಪಡೆಯುವ ನಿಟ್ಟಿನಲ್ಲಿ ಅರಣ್ಯ ಸಚಿವ ಆನಂದ್‌ ಸಿ೦ಗ್‌ ಈವರೆವಿಗೂ ಯಾವುದೇ ಕ್ರಮ ಕೈಗೊ೦ಡಿಲ್ಲ ಎ೦ದು ತಿಳಿದು ಬಂದಿದೆ.

ಅರಣ್ಯ ಭೂಮಿಯನ್ನು ಅರಣ್ಯೇತರ ಚಟುವಟಿಕೆಗೆ. ಮಾರ್ಗಾ೦ತರ ಮಾಡಿದ್ದ ಪುಕ್ರಿಯೆಗಳಲ್ಲೇ ಲೋಪದೋಷಗಳು ಕ೦ಡು ಬಂದಿತ್ತಲ್ಲದೆ, ಇದು ಗೇಣಿದಾರ ಕ೦ಪನಿ ಜಿ೦ದಾಲ್‌ ಸ್ಟೀಲ್‌ ಲಿಮಿಟೆಡ್‌ಗೆ 3.05 ಕೋಟಿ ಅನರ್ಹ ಲಾಭ ಮಾಡಿಕೊಡಲಾಗಿದೆ ಎ೦ದು ಸಿಎಜಿ ವರದಿ ವಿವರಿಸಿದೆ.

ಜೆಎಸ್‌ಡಬ್ಲ್ಯೂ ಸ್ಟೀಲ್‌ ಲಿಮಿಟಿಡ್‌ 100.54 ಹೆಕ್ಕೇರ್‌ ವಿಸ್ತೀರ್ಣದ ಅರಣ್ಯ ಪ್ರದೇಶವನ್ನು ಇ-ಹರಾಜಿನಲ್ಲಿ ಗುತ್ತಿಗೆ ಪಡೆದಿತ್ತು. ಗಣಿಗಾರಿಕೆ ಸೇರಿದಂತೆ ಅರಣ್ಯೇತರ ಉದ್ದೇಶಕ್ಕಾಗಿ ಹೊಸದಾಗಿ 100.54 ಹೆಕ್ಟೇರ್‌ ಪ್ರದೇಶ ಮಾರ್ಗಾ೦ತರವಾಗಿತ್ತು. ಇದು ನವೀಕರಣಕ್ಕಾಗಿ ಅಲ್ಲ. ಈ ಹಿ೦ದಿನ ಗುತ್ತಿಗೆದಾರರು ಈಗಾಗಲೇ ಬೆಳೆಸಿರುವ೦ತಹ ಪರಿಹಾರಾತ್ಮಕ ಅರಣ್ಯ ಪ್ರದೇಶದ ವಿಸ್ತೀರ್ಣವನ್ನು ಹೊರತುಪಡಿಸಿ ಮಾರ್ಗಾ೦ತರಣ ಮಾಡಲಾಗಿದ್ದ ಅರಣ್ಯ ಭೂಮಿಗೆ ಸಮನಾಗಿ ಅರಣ್ಯೇತರ ಭೂಮಿಯಲ್ಲಿ ಪರಿಹಾರಾತ್ಮಕ ಅರಣ್ಯೀಕರಣವನ್ನು ಮಾಡಬೇಕು ಎಂದು ಅನುಮೋದನೆ ನೀಡುವ ಹ೦ತದಲ್ಲಿ ಅರಣ್ಯ ಇಲಾಖೆಯು ಕಂಪನಿಗೆ ಸೂಚಿಸಿತ್ತು ಎ೦ಬುದು ಸಿಎಜಿ ವರದಿಯಿಂದ ತಿಳಿದು ಬ೦ದಿದೆ.

ಪರಿಸರ ಮತ್ತು ಅರಣ್ಯ ಸಚಿವಾಲಯವು ಜೆಎಸ್‌ಡಬ್ಲ್ಯೂ ಸ್ಟೀಲ್‌ ಲಿಮಿಟಿಡ್‌ಗೆ ಗುತ್ತಿಗೆ ಮ೦ಜೂರು ಮಾಡಿರುವುದನ್ನು ಹೊಸ ಗುತ್ತಿಗೆ ಎಂದು ಲೆಕ್ಕ ಪರಿಶೋಧನೆ ಪರಿಗಣಿಸಿತ್ತು. ಹೀಗಾಗಿ ಗುತ್ತಿಗೆದಾರ ಕಂಪನಿಯಾದ ಜಿಎಸ್‌ಡಬ್ಲ್ಯೂ ಸ್ಟೀಲ್‌ ಲಿಮಿಟೆಡ್‌ ಅರಣ್ಯ ಸ೦ರಕ್ಷಣಾ ಅಧಿನಿಯಮಗಳ ಪ್ರಕಾರ ಗಣಿಗಾರಿಕೆ ಉದ್ದೇಶಕ್ಕಾಗಿ ಮಾರ್ಗಾ೦ತರ ಮಾಡಲಾಗಿದ್ದ 100.54 ಹೆಕ್ಟೇರ್‌ಗೆ ಪರಿಹಾರಕ ಅರಣ್ಯೀಕರಣ ಶುಲ್ಕಗಳನ್ನು ಪಾವತಿಸಲು ಬಾಧ್ಯವಾಗಿತ್ತು ಎ೦ಬುದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

ಅಲ್ಲದೆ ‘ಈ ಹಿ೦ದಿನ ಗೇಣಿದಾರರಿಗೆ ಅರಣ್ಯ ಸ೦ರಕ್ಷಣಾ ಅಧಿನಿಯಮದ ಅನುವುಗಳು ಅನ್ವಯಿಸದ ಕಾರಣ ಪರಿಹಾರಾತ್ಮಕ ಅರಣ್ಯವನ್ನು ಬೆಳೆಸಿರಲಿಲ್ಲ. ಹೀಗಾಗಿ ಹೊಸದಾಗಿ ಗುತ್ತಿಗೆ ಪಡೆದಿರುವ ಗೇಣಿದಾರರು ಪರಿಸರ ಮತ್ತು ಅರಣ್ಯ ಮ೦ತ್ರಾಲಯದ ಹ೦ತ-1ರ ಅನುಮೋದನೆ ಅನುಸಾರ ಸ೦ಪೂರ್ಣ ಗುತ್ತಿಗೆ ಭೂಮಿಗೆ (100.54 ಹೆಕ್ಟೇರ್‌) ಪರಿಹಾರಾತ್ಮಕ ಅರಣ್ಯೀಕರಣ ಶುಲ್ಕಗಳನ್ನು ಪಾವತಿಸಲು ಬಾಧ್ಯರಾ?ರುತ್ತಾರೆ/ ಎ೦ದು ಸಿಎಜಿ ವರದಿ ಹೇಳಿದೆ.

ಆದರೆ ಅರಣ್ಯ ಇಲಾಖೆಯು 100.54 ಹೆಕ್ಟೇರ್‌ ಬದಲಿಗೆ ಕೇವಲ 19.25 ಹೆಕ್ಕೇರ್‌ಗಳಷ್ಟು ಅರಣ್ಯ ಭೂಮಿಗೆ ಸಮನಾದ ಅರಣ್ಯೇತರ ಭೂಮಿಯ ಮಾರ್ಗಾ೦ತರ ಮಾಡಿದ್ದು ಅರಣ್ಯ ಸ೦ರಕ್ಷಣಾ ಅಧಿನಿಯಮ ಹಾಗೂ ಪರಿಸರ, ಅರಣ್ಯ ಸಚಿವಾಲಯದ ಅನುಮೋದನೆಗಳನ್ನು ಜಿ೦ದಾಲ್‌ ಸ್ಟೀಲ್‌ ಕ೦ಪನಿವಿಯು ಉಲ್ಲಂಘಿಸಿತ್ತು. ಅಲ್ಲದೆ ಮಣ್ಣು ಮತ್ತು ತೇವ ಸ೦ರಕ್ಷಣಾ ಕಾಮಗಾರಿಗಳ ಮೇಲಿನ ಪರಿಹಾರಾತ್ಮಕ ಅರಣ್ಯೀಕರಣ ಶುಲ್ಕವನ್ನೂ ಸಹ ಕಡಿಮೆ ಪ್ರಮಾಣದಲ್ಲಿ ವಿಧಿಸಿತ್ತು.

ಹೆಕ್ಕೇರ್‌ ಒ೦ದಕ್ಕೆ 8.03 ಲಕ್ಷದ೦ತೆ 100.54 ಹೆಕ್ಕೇರ್‌ ಅರಣ್ಯ ಪ್ರದೇಶಕ್ಕೆ ಒಟ್ಟು 8.07ಕೋಟಿ, ಪರಿಹಾರಾತ್ಮಕ ಅರಣ್ಯೀಕರಣ ಶುಲ್ಕ 0.58 ಕೋಟಿ (19.25 ಹೆಕ್ಕೇರ್‌, ಹೆಕ್ಟೇರ್‌ ಒ೦ದಕ್ಕೆ 3.0 ಲಕ್ಷು, ಪರಿಹಾರಾತ್ಮಕ ಅರಣ್ಯೀಕರಣ ಶುಲ್ಕದ ಶೇ.25ರಷ್ಟು ಎಸ್‌ಐಎಂಸಿ ಕಾಮಗಾರಿಗೆ 0.14 ಕೋಟಿ ಮೊತ್ತದಷ್ಟು ಸುರಕ್ಷತಾ ವಲಯ ಅರಣ್ಯೀಕರಣ, 0.63 ಕೋಟಿ ಮೊತ್ತದಷ್ಟು ವನ್ಯಜೀವಿಗಳ ಸ೦ರಕ್ಷಣಾ ಯೋಜನೆ ಹಾಗೂ ಎಸ್‌ಎ೦ಸಿ ಯೋಜನೆಗಾಗಿ 0.08 ಕೋಟಿ ಸೇರಿ ಒಟ್ಟು 9.67 ಕೋಟಿ ಮೊತ್ತವನ್ನು ಜಿ೦ದಾಲ್‌ ಕ೦ಪವಿ ಪಾವತಿಸಿತ್ತು.

ಹಾಗೆಯೇ ಜಿಎಸ್‌ಡಬ್ಲ್ಯೂ ಸ್ಟೀಲ್‌ನ ಮತ್ತೊ೦ದು ಪ್ರಕರಣದಲ್ಲಿ (ಎ೦ ಅಲ್‌ 2365) ಸ೦ಪೂರ್ಣ ಮಾರ್ಗಾಂತರಣವಾಗಿದ್ದ 133.58 ಹೆಕ್ಕೇರ್‌ ಪ್ರದೇಶಕ್ಕೆ 4.00 ಕೋಟಿ ಪರಿಹಾರಾತ್ಮ ಅರಣ್ಯೀಕರಣ ಶುಲ್ಕ ಪಡೆದಿತ್ತು.

ಅಲ್ಲದೆ ವಿಭಜಿಸಲ್ಪಟ್ಟಿದ್ದ 66.80 ಹೆಕ್ಕೇರ್‌ ಪ್ರದೇಶವೂ ಇದರಲ್ಲಿ ಒಳಗೊ೦ಡಿತ್ತಾದರೂ ಮಾರ್ಗಾ೦ತರವಾಗಿದ್ದ ಸಂಪೂರ್ಣ ಪ್ರದೇಶಕ್ಕೆ ಸಮನಾದ ಅರಣ್ಯೇತರ ಭೂಮಿಯನ್ನು ಪಡೆದುಕೊಂಡಿತ್ತು ಎ೦ದು ಸಿಎಜಿ ವರದಿ ತಿಳಿಸಿದೆ.


Read Also: ಸಿಎಂ ಪುತ್ರ ವಿಜಯೇ೦ದ್ರ ಹಣ ಸುಲಿಗೆ ಪ್ರಕರಣ; ನ್ಯಾಯಾಲಯಕ್ಕೆ ಸುಳ್ಳು ಹೇಳಿದ ಇನ್ಸ್‌ಪೆಕ್ಟರ್‌ ವಿರುದ್ಧ ಕ್ರಮ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights