ರಾಜ್ಯದ ಸೋಂಕಿತರ ಸಂಖ್ಯೆಯಲ್ಲಿ ಮಹಾರಾಷ್ಟ್ರದಿಂದ ಬಂದವರೇ ಹೆಚ್ಚು

ಏಪ್ರಿಲ್ ಮೊದಲ ವಾರದವರೆಗೆ, ಕರ್ನಾಟಕಕ್ಕೆ ಕೊರೊನಾ ತಂದವರು ತಬ್ಲಿಘಿ ಜಮಾಅತ್ ಪಾಲ್ಗೊಂಡಿದ್ದರು, ಮುಸ್ಲೀಮರು ಕೊರೊನಾ ಹರಡಲು ಶುರುಮಾಡಿಕೊಂಡಿದ್ದಾರೆ ಎಂದೆಲ್ಲಾ ಮಾಧ್ಯಮಗಳೂ ಹಾಗೂ ಬಿಜೆಪಿ ಬೆಂಬಲಿಗರು ಸುದ್ದಿ ಹಬ್ಬಿಸಿದ್ದರು. ಇದರಿಂದಾಗಿ ಜನಸಾಮಾನ್ಯರಲ್ಲಿ ಮುಸ್ಲೀಂ ವಿರೋಧಿ ಭಾವ ಒಂದು ಹಂತಕ್ಕೆ ಬೆಳೆದೇ ಇತ್ತು.  ಆದರೆ, ಈಗ ಸಂಗತಿ ಬೇರೆಯೇ ಆಗಿದೆ.

ತಬ್ಲಿಗಿ ಜಮಾಅತ್‌ನಲ್ಲಿ ಪಾಲ್ಗೊಂಡಿದ್ದವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು ಸತ್ಯವೇ ಆದರೂ, ಆದನ್ನು ತಬ್ಲಿಗಿ ವೈರಸ್‌ ಎಂದೇ ಬಿಂಬಿಸಿ ಒಂದು ಧರ್ಮದ ವಿರುದ್ಧ ದ್ವೇಷ ಬೆಳೆಸಲು ಬಳಸಿಕೊಳ್ಳಲಾಗಿತ್ತು. ಆದರೆ, ಏಪ್ರಿಲ್‌ 12 ನಂತರ ಸೋಂಕಿತರ ಪ್ರೌವೃತ್ತಿ ಬದಲಾಗಿದೆ. ತಬ್ಲಿಗಿ ಜಮಾಅತ್‌ನಲ್ಲಿ ಪಾಲ್ಗೊಂಡವರ ಸಂಖ್ಯೆಗಿಂತ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಂಧವರಲ್ಲಿ ಸೋಂಕಿನ ಸಂಖ್ಯೆ ದುಪ್ಪಟ್ಟು ಹೆಚ್ಚಾಗಿದೆ.

ತಬ್ಲೀಘಿ ಜಮಾಅತ್ ಪಾಲ್ಗೊಂಡಿದ್ದವರು ಮತ್ತು ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದವರಲ್ಲಿ ಇದೂವರೆಗೆ 118 ಜನರಲ್ಲಿ ಸೋಂಕು ದೃಢಪಟ್ಟಿದೆ. ಆದರೆ, ಮೇ 01 ರಿಂದ ಇಲ್ಲಿಯವರೆಗೆ ಮಹಾರಾಷ್ಟ್ರದಿಂದ ಬಂದಿರುವ 1,040 ಜನರಲ್ಲಿ 500 ಕ್ಕೂ ಹೆಚ್ಚು ಜನರಲ್ಲಿ ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರದಿಂದ ಹಿಂದಿರುಗಿದವರಲ್ಲಿ ಮೊದಲ ಪ್ರರಕಣ ದೃಢಪಟ್ಟಿದ್ದು ಏಪ್ರಿಲ್‌ 12 ರಂದು. ವಿಜಯಪುರದ 60 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದ್ದು, ಆಕೆ 29 ಜನರಿಗೆ ಸೋಂಕು ಹರಡಿದ್ದಾರೆ.

ಮಂಡ್ಯ ಜಿಲ್ಲೆಗೆ ಹೆಚ್ಚು ಜನರು ಮುಂಬೈನಿಂದ ಮರಳಿದ್ದು, ಏಪ್ರಿಲ್‌ 27 ರಂದು ಮೊದಲ ಪ್ರಕರಣ ದಾಖಲಾಗಿತ್ತು. ನಂತರದಲ್ಲಿ, ಇದೂವರೆಗೆ 201 ಪ್ರಕರಣಗಳು ಮಂಡ್ಯದಲ್ಲಿ ದಾಖಲಾಗಿದ್ದು, ಅವರಲ್ಲಿ ಮುಂಬೈನಿಂದ ಬಂದಿರುವ ಸೋಂಕಿತರ ಸಂಖ್ಯೆ ಶೇ.90 ರಷ್ಟಿದ್ದಾರೆ.

ಗುರುವಾರ, ಮಂಡ್ಯದಲ್ಲಿ 16 ಪ್ರಕರಣಗಳು ಆಕ್ಟಿವ್‌ ಆಗಿದ್ದು, ಇದು ಬೆಂಗಳೂರಿನ ಪ್ರಕರಣಗಳಿಗಿಂತಲೂ(176) ಹೆಚ್ಚಾಗಿದೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ ಮರಳುತ್ತಿರುವವರಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ರಾಜ್ಯದ ಆರೋಗ್ಯಾಧಿಕಾರಿಗಳು ಆತಂಕದಲ್ಲಿದ್ದಾರೆ.

ಏಪ್ರಿಲ್ ಅಂತ್ಯದ ವರೆಗೂ ಒಂದೇ ಒಂದು ಪ್ರಕರಣಗಳು ದಾಖಲಾಗದೇ ಇದ್ದ ಹಾವೇರಿ, ಯಾದಗಿರಿ, ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಈಗ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಗುರುವಾರ ಪತ್ತೆಯಾಗಿರುವ ಒಟ್ಟು 143 ಪ್ರಕರಣಗಳಲ್ಲಿ 96 ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.

143 ಹೊಸ ಪ್ರಕರಣಗಳು 

ಗುರುವಾರ, ರಾಜ್ಯದಲ್ಲಿ 143 ಹೊಸ ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ 121 ಪ್ರಕರಣಗಳು ಅಂತರರಾಜ್ಯಗಳಿಂದ ಬಂದವರಾಗಿದ್ದಾರೆ. 143 ಸೋಂಕಿತರಲ್ಲಿ 43 ಮಂದಿ ಅಪ್ರಾಪ್ತ ವಯಸ್ಕರಾಗಿದ್ದರು.

ಸೋಂಕಿತರಲ್ಲಿ 96 ಮಂದಿ ಮಹಾರಾಷ್ಟ್ರದಿಂದ ಮರಳಿದವರು, ಆರು ಮಂದಿ ತಮಿಳುನಾಡಿನವರು, ಮೂವರು ಜಾರ್ಖಂಡ್, ತೆಲಂಗಾಣದಿಂದ ಐದು, ರಾಜಸ್ಥಾನದಿಂದ ಇಬ್ಬರು, ಛತ್ತೀಸ್‌ಘಡ ಮತ್ತು ಕೇರಳದಿಂದ ತಲಾ ಒಬ್ಬರು ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಮರಳಿದ 07 ಮಂದಿ ಇದ್ದಾರೆ.

ಇದೂವರೆಗೂ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1,605ಕ್ಕೆ ಏರಿಕೆಯಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights