ದೇಶದಲ್ಲಿ 1.27 ಲಕ್ಷ ಹೊಸ ಕೊರೊನಾ ಕೇಸ್ : 2,795 ಜನ ಬಲಿ..!

ದೇಶದಲ್ಲಿ ಹೊಸದಾಗಿ 1.27 ಲಕ್ಷ ಕೊರೊನಾ ಕೇಸ್ ದಾಖಲಾಗಿದ್ದು ಇದು 54 ದಿನಗಳಲ್ಲಿ ದಾಖಲಾದ ಅತ್ಯಂತ ಕಡಿಮೆ ಕೊರೊನಾ ಪ್ರಕರಣಗಳ ಸಂಖ್ಯೆಯಾಗಿದೆ. ಕಳೆದ 24 ಗಂಟೆಗಳಲ್ಲಿ 2,795 ಸಾವುಗಳು ವರದಿಯಾಗಿವೆ.

ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಪ್ರಕಾರ, ದೇಶದ ಕೊರೊನಾ ಸಕ್ರಿಯ ಪ್ರಕರಣಗಳು 43 ದಿನಗಳ ನಂತರ 20 ಲಕ್ಷಕ್ಕಿಂತ ಕಡಿಮೆಯಾಗಿದೆ. ದೈನಂದಿನ ಕೋವಿಡ್ -19 ಪ್ರಕರಣಗಳು ಮಾತ್ರವಲ್ಲ, ಐದು ವಾರಗಳಲ್ಲಿ ಭಾರತವು ಅತಿ ಕಡಿಮೆ ಸಾವುಗಳನ್ನು ಕಂಡಿದೆ. ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ 43 ದಿನಗಳ ನಂತರ 20 ಲಕ್ಷಕ್ಕಿಂತ ಕಡಿಮೆಯಾಗಿದೆ. ದೇಶದಲ್ಲಿ ಸದ್ಯ 18,95,520 ಸಕ್ರಿಯ ಪ್ರಕರಣಗಳಿವೆ.

ಒಂದೇ ದಿನದಲ್ಲಿ 2,55,287 ಸೋಂಕಿತರು ಚೇತರಿಸಿಕೊಂಡಿದ್ದಾರೆ. 1.27 ಲಕ್ಷ ಕೋವಿಡ್ ಪ್ರಕರಣಗಳಲ್ಲಿ ತಮಿಳುನಾಡಿನಲ್ಲಿ 27,936 ಪ್ರಕರಣಗಳು, ಕರ್ನಾಟಕದಲ್ಲಿ 16,604 ಪ್ರಕರಣಗಳು, ಮಹಾರಾಷ್ಟ್ರದಲ್ಲಿ 15,077 ಪ್ರಕರಣಗಳು, ಕೇರಳದಲ್ಲಿ 12,300 ಪ್ರಕರಣಗಳು ಮತ್ತು ಪಶ್ಚಿಮ ಬಂಗಾಳದಲ್ಲಿ 10,137 ಪ್ರಕರಣಗಳು ದಾಖಲಾಗಿವೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪ್ರಕಾರ ಇದುವರೆಗೆ ಒಟ್ಟು 34,67,92,257 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಅದರಲ್ಲಿ ನಿನ್ನೆ 19,25,374 ಮಾದರಿಗಳನ್ನು ಪರೀಕ್ಷಿಸಲಾಗಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights