FACT CHECK | ರಾಹುಲ್ ಗಾಂಧಿಯ ವಿಡಿಯೋವನ್ನು ಕೊಹ್ಲಿ ನೋಡುತ್ತಿದ್ದಾರೆ ಎಂದು ಎಡಿಟ್ ಮಾಡಿದ ಫೋಟೊ ಹಂಚಿಕೆ

ಭಾರತ ಕ್ರಿಕೆಟ್‌ನ ಸೂಪರ್ ಸ್ಟಾರ್ ಎಂದೆ ಹೆಸರಾದ ವಿರಾಟ್ ಕೊಹ್ಲಿ ಆಟದ ವಿರಾಮದ ವೇಳೆ ತಮ್ಮ ಮೊಬೈಲ್ ಫೋನ್‌ನಲ್ಲಿ ರಾಹುಲ್ ಗಾಂಧಿ ಅವರ ಪತ್ರಿಕಾಗೋಷ್ಠಿಯನ್ನು ವೀಕ್ಷಿಸುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

https://twitter.com/SevadalGN/status/1771160679447400845

ವಿಶ್ವದ ಎಲ್ಲಾ ವಿದ್ಯಮಾನಗಳನ್ನು ತಿಳಿಯುವ ತುಡಿತ ಹೊಂದಿರುವ ಕೊಹ್ಲಿ, ಐಪಿಎಲ್ 2024 ಪಂದ್ಯದ ವಿರಾಮದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪತ್ರಿಕಾಗೋಷ್ಠಿಯನ್ನು ವೀಕ್ಷಿಸುತ್ತಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. 

 

ಹಾಗಿದ್ದರೆ ಈ ವಿಡಿಯೊದಲ್ಲಿ ಮಾಡಿದ ಪ್ರತಿಪಾದನೆಯಂತೆ ವಿರಾಟ್ ಕೊಹ್ಲಿ ನಿಜಾಗಿಯೂ ರಾಹುಲ್ ಗಾಂಧಿ ಅವರ ಪತ್ರಿಕಾಗೋಷ್ಠಿಯನ್ನು ವೀಕ್ಷಿಸಿದ್ದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಳಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಮಾರ್ಚ್ 21, 2024 ರಂದು @BluntIndianGal ಎಂಬ X ಖಾತೆಯಲ್ಲಿ ಹಂಚಿಕೊಂಡ ವಿಡಿಯೋವೊಂದು ಲಭ್ಯವಾಗಿದೆ.

https://twitter.com/BluntIndianGal/status/1770747777980531199

@BluntIndianGal ಖಾತೆಯಿಂದ ಹಂಚಿಕೊಳ್ಳಲಾದ ಪೋಸ್ಟ್ ನಲ್ಲಿರುವ ಫೋಟೊವನ್ನು ವೈರಲ್ ಚಿತ್ರಕ್ಕೆ ಹೋಲಿಸಿದಾಗ ವಿರಾಟ್ ಕೋಹ್ಲಿ ತಮ್ ಮೊಬೈಲ್‌ನಲ್ಲಿ ರಾಹುಲ್ ಗಾಂಧಿಯ ವಿಡಿಯೋವನ್ನು ವೀಕ್ಷಿಸುತ್ತಿರುವಂತೆ ಎಡಿಟ್ ಮಾಡಲಾಗಿದೆ. ಜಿಯೋ ಜಾಹೀರಾತಿನ ಚಿತ್ರೀಕರಣ ಪ್ರಾರಂಭವಾಗುವ ಮೊದಲು ವಿರಾಟ್ ಕೊಹ್ಲಿ ಕೂಲ್‌ಆಗಿ ತಮ್ಮ ಮೊಬೈಲ್‌ಅನ್ನು ನೋಡುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಮೂಲ ಫೋಟೊವನ್ನು ಹಂಚಿಕೊಳ್ಳಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಕೋಹ್ಲಿ ಮೋದಿಯವರ ಭಾಷಣ ನೋಡುತ್ತಿದ್ದಾರೆ ಎಂದು ಕೆಲವರು ಹಂಚಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಇದೊಂದು ಫೇಕ್‌ ಪೋಸ್ಟ್‌ ಎಂಬುದು ದೃಢವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ವಿರಾಟ್ ಕೋಹ್ಲಿ, ರಾಹುಲ್ ಗಾಂಧಿ ವಿಡಿಯೋವನ್ನು ವೀಕ್ಷಿಸುತ್ತಿರುವ ಚಿತ್ರವನ್ನು ಮೂಲಚಿತ್ರದೊಂದಿಗೆ ಹೋಲಿಸಿದಾಗ, ವೈರಲ್ ಚಿತ್ರದಲ್ಲಿ ರಾಹುಲ್ ಗಾಂಧಿಯವರ ಪತ್ರಿಕಾಗೋಷ್ಠಿಯ ಸ್ಟಿಲ್ ಅನ್ನು ಡಿಜಿಟಲ್ ಆಗಿ ಸೇರಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮುಸ್ಲಿಂ ವ್ಯಕ್ತಿ ಶಾಲಾ ವಿದ್ಯಾರ್ಥಿಗೆ ಕಿರುಕುಳ ನೀಡುವ ವಿಡಿಯೋ ಭಾರತದ್ದಲ್ಲ, ಬಾಂಗ್ಲಾದೇಶದ್ದು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights