2 ಶರ್ಟ್‌ ಕದ್ದಿದ್ದಕ್ಕೆ 20 ವರ್ಷ ಜೈಲು ಶಿಕ್ಷೆ: ಕಪ್ಪು ವರ್ಣೀಯ ಎಂಬುದೇ ಇಂಥ ಶಿಕ್ಷೆಗೆ ಕಾರಣ?

ಬಟ್ಟೆ ಅಂಗಡಿಯೊಂದರಲ್ಲಿ ಎರಡು ಶರ್ಟ್‌ಗಳನ್ನು ಕದ್ದಿದ್ದಕ್ಕಾಗಿ ವ್ಯಕ್ತಿಯೊಬ್ಬ 20 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದು, ಆತ ಬಿಡುಗಡೆಯಾಗು ಹೊತ್ತಿಗೆ ತನ್ನ ಪತ್ನಿ ಮತ್ತು ಮಗನನ್ನು ಕಳೆದುಕೊಂಡಿರುವ ಘಟನೆ ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ನಡೆಸಿದೆ.

ಆಫ್ರಿಕನ್-ಅಮೆರಿಕನ್ ಆಗಿದ್ದ ಕಡು ಬಡವ ಫ್ರಾಂಕ್ ಎಂಬಾತ ಹೊಟ್ಟೆ ಪಾಡಿಗಾಗಿ ಸಣ್ಣ-ಪುಟ್ಟ ಕಳ್ಳತನವನ್ನು ಮಾಡುತ್ತಿದ್ದ. ಈತ ಸೂಪರ್ ಮಾರ್ಕೆಟ್, ಬಟ್ಟೆ ಶಾಪ್​ಗಳಲ್ಲಿ ಒಂದೆರೆಡು ವಸ್ತುಗಳನ್ನು ಕಳವು ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಒಮ್ಮೆ ಈತ ಅಂಗಡಿಯೊಂದರಲ್ಲಿ 2 ಅಂಗಿಗಳನ್ನು ಕದ್ದು, ಸಿಕ್ಕಿಬಿದ್ದಿದ್ದ. ಅದಕ್ಕಾಗಿ ಆತನಿಗೆ ಸ್ಥಳೀಯ ಕೋರ್ಟ್‌ನಲ್ಲಿ 23 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಶಿಕ್ಷೆ ಪ್ರಮಾಣವನ್ನು ಪ್ರಶ್ನಿಸಿ ಫ್ರಾಂಕ್‌ ಕೋರ್ಟ್‌ ಮೆಟ್ಟಿಲೇರಿದ್ದ, ಕಾನೂನು ಹೋರಾಟದಿಂದಾಗಿ ಕೋರ್ಟ್‌ ಆತನಿಗೆ 3 ವರ್ಷಗಳ ಶಿಕ್ಷೆಯನ್ನು ಕಡಿತಗೊಳಿಸಿತ್ತು. ಈಗಾಗಿ ಆತ 20 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದಾನೆ.

ಫ್ರಾಂಕ್​ಗೆ ಪತ್ನಿ, ಒಬ್ಬ ಮಗನಿದ್ದ ಎಂದು ಹೇಳಲಾಗಿದ್ದು, ಈತ ತನ್ನ ಶಿಕ್ಷೆಯನ್ನು ಮುಗಿಸಿ ಹೊರ ಬರುವ ವೇಳೆಗೆ ಇಬ್ಬರೂ ಮರಣಹೊಂದಿದ್ದರು ಎಂದು ತಿಳಿದು ಬಂದಿದೆ.

ಫ್ರಾಂಕ್​ ಅನ್ನು 2000 ಇಸವಿಯ ಸೆಪ್ಟೆಂಬರ್​ನಲ್ಲಿ ಬಂಧಿಸಲಾಗಿತ್ತು. ಆಗ 47 ವರ್ಷದ ಫ್ರಾಂಕ್​ಗೆ ಅಲ್ಲಿನ ಕೋರ್ಟ್ 23 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿತ್ತು. ಬಡ ಕುಟುಂಬ ಫ್ರಾಂಕ್​ಗಾಗಿ ಉತ್ತಮ ಕಾನೂನು ಸೌಲಭ್ಯ ನೀಡಲು ಸಾಧ್ಯವಾಗಲಿಲ್ಲ. ಇದರಿಂದ ಫ್ರಾಂಕ್ ಜೈಲಿನಲ್ಲೇ ತಮ್ಮ ಜೀವನವನ್ನು ಕಳೆಯಬೇಕಾಯಿತು.

ಆತ ಕಪ್ಪು ವರ್ಣೀಯ ಎಂಬ ಕಾರಣದಿಂದಾಗಿಯೇ ಈ ಪ್ರಮಾಣದ ಶಿಕ್ಷೆ ವಿಧಿಸಲಾಗಿತ್ತು. ಬಿಳಿಯರಿಗೆ ಇದೇ ರೀತಿ ಕಠಿಣ ಶಿಕ್ಷೆಗಳನ್ನು ನೀಡಿದ ಉದಾಹರಣೆಗಳೇ ಇಲ್ಲ. ನ್ಯಾಯ ಎಂಬುವುದು ವರ್ಣದ ಮೇಲೆ ನಿರ್ಧಾರವಾಗಬಾರದು ಎಂದು ಆತ ಆಕ್ರೋಶ ವ್ಯಕ್ತಡಿಸಿದ್ದರು.

23 ವರ್ಷಗಳ ಶಿಕ್ಷೆಯನ್ನು ಕಡಿತಗೊಳಿಸುವಷ್ಟರಲ್ಲಿ ಫ್ರಾಂಕ್ 20 ವರ್ಷಗಳ ಕಾಲ ಜೈಲಿನಲ್ಲಿ ಕಳೆದಾಗಿತ್ತು. ಕೇವಲ 3 ವರ್ಷಗಳ ಶಿಕ್ಷೆಯಿಂದ ಮಾತ್ರ ಪಾರಾಗಿದ್ದಾರೆ. ಫ್ರಾಂಕ್ ಜೈಲಿನಿಂದ ಬಿಡುಗಡೆ ಆಗುವಷ್ಟರಲ್ಲಿ ಆತನ ಪತ್ನಿ, ಮಗ, ಇಬ್ಬರು ಸೋದರರು ಮೃತಪಟ್ಟಿದ್ದರು.

ಇದನ್ನೂ ಓದಿ:ಷೇರುಪೇಟೆಯನ್ನೇ ಬುಡಮೇಲು ಮಾಡಿದ್ದ‌ ಹಡಗು ಮುಟ್ಟುಗೋಲು; 916 ಮಿಲಿಯನ್‌ ಡಾಲರ್‌ ದಂಡ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights