ಪರಿಹಾರ ಸಾಮಗ್ರಿ ಕಳವು ಆರೋಪ; ಸುವೆಂದು ಅಧಿಕಾರಿ ವಿರುದ್ಧ FIR; ಆಪ್ತನ ಬಂಧನ!

ಯಾಶ್ ಚಂಡಮಾರುತದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಪರಿಹಾರ-ನೆರವು ನೀಡುವುದಕ್ಕಾಗಿ ಕಂಥಿ ಪುರಸಭೆಯಲ್ಲಿ ಸಂಗ್ರಹಿಸಲಾಗಿದ್ದ ಪರಿಹಾರ ಸಾಮಗ್ರಿಗಳು ಕಳುವಾಗಿವೆ ಎಂದು ಆರೋಪಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಮತ್ತು ಅವರ ಸಹೋದರರ ವಿರುದ್ದ ಎಫ್‌ಐಆರ್ ದಾಖಲಿಸಲಾಗಿದೆ.

ಕಾಂತಿ ಪುರಸಭೆಯ ಆಡಳಿತ ಮಂಡಳಿಯ ಸದಸ್ಯ ರತ್ನದಿಪ್ ಮನ್ನಾ ಅವರು ಜೂನ್ 1 ರಂದು ಕಾಂತಿ ಪೊಲೀಸ್ ಠಾಣೆಯಲ್ಲಿ ಸುವೆಂದು ಮತ್ತು ಅವರ ಸಹೋದರ,ಮಾಜಿ ಪುರಸಭೆಯ ಮುಖ್ಯಸ್ಥ ಸೌಮೆಂಡು ಅಧಿಕಾರಿಯ ವಿರುದ್ಧ ದೂರು ನೀಡಿದ ನಂತರ ಪ್ರಕರಣ ದಾಖಲಿಸಲಾಗಿದೆ.

ಸುವೆಂದು ಮತ್ತು ಅವರ ಸಹೋದರನ ಸೂಚನೆಯ ಮೇರೆಗೆ 2 ಲಕ್ಷ ಮೌಲ್ಯದ ಸರ್ಕಾರದ ಟ್ರಪಲ್‌ಅನ್ನು ಪುರಸಭೆ ಕಚೇರಿ ಗೊಡೌನ್‌ನಿಂದ ತೆಗೆದುಕೊಂಡು ಹೋಗಲಾಗಿದೆ ಎಂದು ದೂರಿನಲ್ಲಿ ಮನ್ನಾ ಆರೋಪಿಸಿದ್ದಾರೆ.

ಇದಲ್ಲದೆ, ವಂಚನೆ ಆರೋಪದ ಮೇಲೆ ಸುಜಿತ್ ಡೇ ಎಂಬುವವರು ಸುವೇಂದು ಆಧಿಕಾರಯ ಆಪ್ತನ ವಿರುದ್ದ ನೀಡಿದ್ದ ದೂರುನ ಆಧಾರದ ಮೇಲೆ ಮಾಣಿಕ್ತಾಲ್ ಪೊಲೀಸರು ಸುವೇಂದು ಅವರ ಆಪ್ತ ರಾಖೇಲ್ ಬೇರಾ ಅವರನ್ನು ಕೋಲ್ಕತಾ ಪೊಲೀಸರು ಬಂಧಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಕೊಲ್ಕತ್ತಾ ಪೊಲೀಸ್ ಮೂಲಗಳ ಪ್ರಕಾರ, ಬಂಧಿತ ಆರೋಪಿ ರಾಖೇಲ್ ಬೇರಾ ಅವರು 2019 ರ ಜುಲೈ ಮತ್ತು ಸೆಪ್ಟೆಂಬರ್ ನಡುವೆ ಚಂಚಲ್ ನಂದಿ ಮತ್ತು ಇತರರೊಂದಿಗೆ ಕ್ರಿಮಿನಲ್ ಪಿತೂರಿ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ಸರ್ಕಾರಿ ಉದ್ಯೋಗ ಕೊಡಿಸುವ ನೆಪದಲ್ಲಿ ಜನರನ್ನು ಮೋಸ ಮಾಡುವ ದಂಧೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ದೂರುದಾರ ಸುಜಿತ್ ಡೇ ಉದ್ಯೋಗ ಹುಡುಕಿಕೊಂಡು ಇಬ್ಬರನ್ನೂ ಸಂಪರ್ಕಿಸಿದ್ದನು., ಇಬ್ಬರೂ ನೀರಾವರಿ ಮತ್ತು ಜಲ ಸಂಪನ್ಮೂಲ ಸಚಿವಾಲಯದಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿ, 2 ಲಕ್ಷ ರೂ. ಪಡೆದಿದ್ದರು ಎಂದು ಆರೋಪಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights