ಕೊರೊನಾ 2ನೇ ಅಲೆಯಿಂದ ಥಿಯೇಟರ್ಗಳಲ್ಲಿ ಶೇ.50ರಷ್ಟು ಸಿನಿಮಾ ವೀಕ್ಷಣೆಗೆ ಅವಕಾಶ?

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಬಿಬಿಎಂಪಿ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಹಳೆ ನಿಯಮಗಳನ್ನು ಮತ್ತೆ ಜಾರಿಗೆ ತರಲು ಬಿಬಿಎಂಪಿ ಮುಂದಾಗಿದ್ದು ಸಿನಿಮಾ ಥಿಯೇಟರ್ ಗಳಲ್ಲಿ ಶೇ.50 ರಷ್ಟು ಜನರಿಗೆ ಮಾತ್ರ ಸಿನಿಮಾ ನೋಡಲು ಅವಕಾಶ ನೀಡಬೇಕು ಎಂದು ಬಿಬಿಎಂಪಿ ಸರ್ಕಾರಕ್ಕೆ ಮನವಿ ಮಾಡಿದೆ.

ಹೀಗಾಗಿ ಸಿನಿಮಾ ರಂಗ ಆತಂಕಗೊಂಡಿದೆ. ಕೊರೊನಾ ಕೇವಲ ಥಿಯೇಟರ್ ಗಳಲ್ಲಿ ಮಾತ್ರ ಹರಡುತ್ತಾ..? ಕೊರೊನಾ ವಿಚಾರದಲ್ಲಿ ಯಾಕೆ ಸಿನಿಮಾವನ್ನೇ ಟಾರ್ಗೇಟ್ ಮಾಡುತ್ತಿದ್ದಾರೆ? ಈಗಾಗಲೇ ಕಳೆದ ವರ್ಷದಲ್ಲಿ ಸಿನಿಮಾ ರಂಗಕ್ಕೆ ಆಗಿರುವ ನಷ್ಟವನ್ನು ಸರಿದೂಗಿಸಲು ಮೂರು ನಾಲ್ಕು ವರ್ಷ ಬೇಕು. ಹೀಗಿರುವಾಗ ಮತ್ತೆ ಶೇ.50 ರಷ್ಟು ವೀಕ್ಷಣೆ ಮಾಡಿದರೆ ಸಿನಿಮಾ ರಂಗ ಸಂಪೂರ್ಣವಾಗಿ ಕುಸಿದು ಹೋಗುತ್ತದೆ ಎಂದು ಸ್ಟಾರ್ ನಟರು ಆತಂಕ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಪೊಗರು, ರಾಬರ್ಟ್ ಹೀಗೆ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾಗಿ ಭಾರಿ ಸದ್ದು ಮಾಡಿವೆ. ಜನ ಆತಂಕವಿಲ್ಲದೆ ಮುಂಜಾಗೃತಿಯಿಂದ ಸಿನಿಮಾಗಳ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಇನ್ನೂಮುಂದೆ ಪುನಿತ್ ರಾಜ್ ಕುಮಾರ್ ಅವರ ಜೇಮ್ಸ್ ಸಿನಿಮಾ, ಕಿಚ್ಚಾ ಸುದೀಪ್ ಅವರ ‘ ವಿಕ್ರಾಂತ್ ರೋಣ’ , ಶಿವರಾಜ್ ಕುಮಾರ್ ಅವರ’ ಭಜರಂಗಿ 2′ ಹೀಗೆ ಸಾಲು ಸಾಲು ಬಹುನಿರೀಕ್ಷಿತ ಸ್ಟಾರ್ ನಟರ ಸಿನಿಮಾಗಳು ತೆರೆಕಾಣಲು ಸಿದ್ದವಾಗಿವೆ. ಹೀಗಿರುವಾಗ ಮತ್ತೆ ಕೊರೊನಾ 50% ರೂಲ್ಸ್ ಜಾರಿಗೆ ಬಂದಿರೆ ಸಿನಿಮಾಗಳು ನಿರೀಕ್ಷೆ ಹುಸಿಯಾಗುವುದು ಗ್ಯಾರೆಂಟಿ. ಹೀಗಾಗಿ ನಿರ್ಮಾಪಕರು, ನಿರ್ದೇಶಕರು ಹಾಗೂ ನಟ-ನಟಿಯರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

“ಕೊರೊನಾ ಬಗ್ಗೆ ಎಚ್ಚರವಹಿಸಲಿ. ಮಾಸ್ಕ್ ಧರಿಸೋಣ, ಸಾನಿಟೈಸರ್ ಮಾಡೋಣ, ಸ್ವಚ್ಚತೆ ಕಾಪಾಡೋಣ ಆದರೆ 50% ಮಾತ್ರ ಸಿನಿಮಾ ವೀಕ್ಷಣೆ ಮಾಡುವುದು ಬೇಡ. ದಯವಿಟ್ಟು ಶೇ.100 ರಷ್ಟು ಸಿನಿಮಾ ವೀಕ್ಷಣೆಗೆ ಅವಕಾಶ ನೀಡಬೇಕು” ಎಂದು ಪುನೀತ್ ಮನವಿ ಮಾಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights