ಜಾರಕಿಹೊಳಿ ಸೋದರರನ್ನು ‘ಸಾಹುಕಾರ’ ಎನ್ನುವ ಸುದ್ದಿ ವಾಹಿನಿಗಳಿಗೆ ನೋಟೀಸ್‌!

ಮಾಜಿ ಸಚಿವ, ಹಾಲಿ ಶಾಸಕ ರಮೇಶ್‌ ಜಾರಕಿಹೊಳಿ ಅವರದ್ದು ಎಂದು ಹೇಳಲಾದ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿ ಮಾಡುತ್ತಿರುವ ಸುದ್ದಿ ವಾಹಿನಿಗಳು, ಜಾರಕಿಹೊಳಿ ಕುಟುಂಬದ ಸಹೋದರರನ್ನು ಸಾಹುಕಾರ ಎಂಬ ಶೀರ್ಷಿಕೆಯೊಂದಿಗೆ ಬಿಂಬಿಸುತ್ತಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಅಲ್ಲದೆ, ಸಾಹುಕಾರ ಎಂಬ ಹೆಸರಿನೊಂದಿಗೆ ಸುದ್ದಿ ಪ್ರಸಾರ ಮಾಡುತ್ತಿರುವ ಸುದ್ದಿವಾಹಿನಿಗಳಿಗೆ ನೋಟೀಸ್‌ ಕೂಡ ನೀಡಲಾಗಿದೆ.

ಬೆಳಗಾವಿಯ ಸ೦ತೋಷ ಸಿದ್ದಯ್ಯಾ ಪೂಜಾರಿ, ಕೆದಾರಿ ರಾಮಪ್ಪ ಪವಾರ, ಮಹ್ಮದ್‌ ಫಾರುಕ ಅಬ್ದುಲ್‌ ರೆಹಮಾನ್‌, ಪೀರಜಾದೆ, ಬಾಬು ಹಸನಸಾಬ ಮುಲ್ಲಾ ಎ೦ಬುವವರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇವರೆಲ್ಲರ ಪರವಾಗಿ ವಕೀಲ ಸಿ ಬಿಗಿಡ್ಡವರ ಎ೦ಬುವರು ಏಷ್ಯಾನೆಟ್‌ ಸುವರ್ಣ ನ್ಯೂಸ್‌, ನ್ಯೂಸ್‌ 18, ಟಿವಿ9, ದಿಗ್ವಿಜಯ, ಪ್ರಜಾ, ಪವರ್‌, ಟಿವಿ 5. ನ್ಯೂಸ್‌ ಫಸ್ಟ್‌ ಸೇರಿದಂತೆ ಹಲವು ಸುದ್ದಿವಾಹಿನಿಗಳಿಗೆ ನೋಟೀಸ್‌ ಜಾರಿಗೊಳಿಸಿದ್ದಾರೆ.

ನೋಟೀಸ್‌ನಲ್ಲೇನಿದೆ?

“ರಮೇಶ್‌ ಜಾರಕಿಹೊಳಿ, ಸತೀಶ್‌ ಜಾರಕಿಹೊಳಿ, ಬಾಲಚ೦ದ್ರ ಜಾರಕಿಹೊಳಿ ಅವರ ಕುರಿತು ಸುದ್ದಿಗಳನ್ನು ಬಿತ್ತರಿಸುವ ಸ೦ದರ್ಭದಲ್ಲಿ ಸಾಹುಕಾರ, ಗೋಕಾಕ ಸಾಹುಕಾರ, ಬೆಳಗಾವಿ. ಸಾಹುಕಾರ ಎಂದು ಸ೦ಬೋಧಿಸುತ್ತಿರುವುದು ನಮ್ಮ ಮನಸ್ಸಿಗೆ ತು೦ಬಾ ನೋವು ಹಾಗೂ ಖೇದ ಉ೦ಟು ಮಾಡಿದೆ. ಈ ಪದಗಳನ್ನು ವೈಭವೀಕರಿಸುತ್ತಿರುವುದು ನಮಗೆ ಮಾನಸಿಕ ಹಿ೦ಸೆ ಹಾಗೂ ತೇಜೋವಧೆ ಆಗುತ್ತಿದೆ: ಎ೦ದು ನೋಟೀಸ್‌ನಲ್ಲಿ ಹೇಳಲಾಗಿದೆ.

“ಸಾಹುಕಾರ’ ಎ೦ಬ ಪದದ ಅರ್ಥ ಸಾಲದ ರೂಪದಲ್ಲಿ ಹಣ ನೀಡುವವರು ಅಥವಾ ಸಾಲ ಕೊಡುವವರು ಎ೦ದು ಅರ್ಥವಾಗುತ್ತದೆ.ಆದ್ದರಿ೦ದ ಗೋಕಾಕ್‌ನಲ್ಲಿ ಅಥವಾ ಬೆಳಗಾವಿಯಲ್ಲಿ ಅವರು ಯಾರಿಗೂ ಯಾವತ್ತೂ ಸಾಲ ವಗೈರೆ ಕೊಟ್ಟಿಲ್ಲ. ಅವರ ಹತ್ತಿರ ನಾವು ಯಾವುದೇ ಸಾಲ ವಗೈರೆ ಪಡೆದುಕೊ೦ಡಿಲ್ಲ. ಆದ್ದರಿ೦ದ ಅವರ ಹೆಸರಿನ ಮು೦ದೆ ಸಾಹುಕಾರ, ಗೋಕಾಕ ಸಾಹುಕಾರ, ಬೆಳಗಾವಿ ಸಾಹುಕಾರ ಎ೦ಬ ಪದಗಳನ್ನು ಬಳಸುವುದು ಅನಾವಶ್ಯಕ ಎ೦ದೂ ನೋಟೀಸ್‌ನಲ್ಲಿ ವಿವರಿಸಲಾಗಿದೆ.

ನೋಟೀಸ್‌ ತಲುಪಿದ ಕೂಡಲೇ ತಮ್ಮ ಮಾಧ್ಯಮದಲ್ಲಿ ಜಾರಕಿಹೊಳಿ ಸೋದರರನ್ನು ಸಾಹುಕಾರ, ಗೋಕಾಕ ಸಾಹುಕಾರ, ಬೆಳಗಾವಿ ಸಾಹುಕಾರ ಎ೦ಬ ಪದಗಳನ್ನು ಬಳಸಿದ್ದಲ್ಲಿ ತಮ್ಮ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲು ನನ್ನ ಕಕ್ಕಿದಾರರಿಗೆ ಸಲಹೆ ನೀಡಬೇಕಾಗುತ್ತದೆ ಎ೦ದು ವಕೀಲ ಸಿ ಬಿ ಗಿಡ್ಡವರ ಅವರು ಮಾಧ್ಯಮಗಳ ಮುಖ್ಯಸ್ತರಿಗೆ ನೋಟೀಸ್‌ನಲ್ಲಿ ತಿಳಿಸಿದ್ದಾರೆ.

ಜಮೀನ್ನಾರಿ ಪದ್ಧತಿ, ಮಹಲ್ವ್ಹಾರಿ ಪದ್ಧತಿ, ರೈತವಾರ ಪದ್ಧತಿ, ಸಾಹುಕಾರಿ ಪದೃಶಿ, ಜೀತ ಪದ್ಧತಿ ಇವೆಲ್ಲವೂ ರದ್ದಾಗಿ ಎಲ್ಲರೂ ಸಮಾನರು, ಎಲ್ಲರಿಗೂ ಸಮಾನ ಹಕ್ಕು ಲಭಿಸಿದೆ. ಹೀಗಾಗಿ ಎಲ್ಲರನ್ನೂ ಸಮಾನವಾಗಿ ಕಾಣುವುದು ಹಾಗೂ ಎಲ್ಲರನ್ನೂ ಅವರವರ ಹೆಸರಿನಿ೦ದ ಸ೦ಬೋಧಿಸುವುದು ಮಾಧ್ಯಮಗಳ ಸ೦ವಿಧಾನಿಕ ಕರ್ತವ್ಯ. ಆದರೆ ನಿಮ್ಮ ವಾಹಿನಿಯಲ್ಲಿ ಹಲವು ಬಾರಿ ಜಾರಕಿಹೊಳಿ ಸೋದರರನ್ನು ಸಂಬೋಧಿಸುವ ಸಂದರ್ಭದಲ್ಲಿ ಅನಾವಶ್ಯಕವಾಗಿ ಸಾಹುಕಾರ ಎ೦ದು ವೈಭವೀಕರಿಸಲಾಗುತ್ತಿದೆ. ಇದು ಮಾಧ್ಯಮ ಸಮೂಹಕ್ಕೆ ಶೋಭೆ ತರುವ೦ತದ್ದಲ್ಲ ಎ೦ದು ನೋಟೇಸ್‌ನಲ್ಲಿ ಹೇಳಲಾಗಿದೆ.

ಯಾರದ್ದೊ ಪ್ರತಿಷ್ಠೆ ಹೆಚ್ಚಿಸಲು ಇನ್ಯಾರಿಗೋ ಮನ ನೋಯಿಸುವ ರೀತಿಯಲ್ಲಿ ಪದಬಳಕ ಮಾಡುವುದು ಹಾಗೂ ವರದಿಗಳನ್ನು, ವಾರ್ತೆಗಳನ್ನು ಬಿತ್ತರಿಸಬಾರದು. ಹಾಗೆಯೇ ಯಾವುದೇ ಪದ ಬಳಕೆ ಮಾಡುವ ಮುನ್ನ ಅವರ ಪೂರ್ವಪರ ಇತಿಹಾಸ ತಿಳಿದುಕೂ೦ಡು ಸಾಕ್ಟ್ಯಾಧಾರ ಪಡೆದುಕೊ೦ಡು ಪದ ಪ್ರಯೋಗ ಮಾಡಬೇಕೇ ಹೊರತು ಅದು ಇನ್ನೊಬ್ಬರ ಮನನೋಯಿಸುವ ಕೃತ್ಯ ಆಗಬಾರದು. ಈ ರೀತಿಯಾದ೦ತಹ ಪದ ಬಳಕೆ ನಮ್ಮ ಕಕ್ಷಿದಾರರ ಸಮೂಹ ಭಾವನೆಗಳಿಗೆ ಧಕ್ಕೆ ಉ೦ಟು ಮಾಡಿದೆ ಎಂದು ನೋಟೀಸ್‌ ಮೂಲಕ ಸುದ್ದಿವಾಹಿವಿಗಳ ಮುಖ್ಯಸ್ಥರನ್ನು ಎಚ್ಚರಿಸಿದೆ.

ಇದನ್ನೂ ಓದಿ:  ಬೆಳಗಾವಿ ಉಪಚುನಾವಣೆ ಉಸ್ತುವಾರಿಯಿಂದ ಜಾರಕಿಹೊಳಿಗೆ ಕೋಕ್: ರೇಸ್ ನಲ್ಲಿ ಘಟಾನುಘಟಿಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights