ರೈತ ಹೋರಾಟ: ಟಿಕ್ರಿ ಗಡಿಯಲ್ಲಿ ರೈತ ಮಹಿಳೆಯರ ಕೂಗು!
ಸರ್ದಾರನಿ ಎಂದು ಸಿಂಹಿಣಿ ಎಂದೇ ಬಣ್ಣಿಸಲಾಗುತ್ತದೆ. ಅಂಥ ದಿಟ್ಟ, ಹೋರಾಟದ ಕೆಚ್ಚಿನ ಮಹಿಳೆಯರು ಟಿಕ್ರಿ ಗಡಿಯಲ್ಲಿ ಬುಧವಾರ ಕಾಣಿಸಿಕೊಂಡರು.
ಒಂದೆಡೆ ಮಳೆ, ಇನ್ನೊಂದು ವಯಸ್ಸು.. ಎರಡೂ ಅವರನ್ನು ಸರ್ಕಾರದ ದಮನಕಾರಿ ನಡೆಯನ್ನು ಧಿಕ್ಕರಿಸುವುದಕ್ಕೆ ಅಡ್ಡಿಯಾಗಲಿಲ್ಲ.
ಪಂಜಾಬಿನ ಭಟಿಂಡಾ ಜಿಲ್ಲೆಯಿಂದ ಟ್ರ್ಯಾಕ್ಟರ್, ಟ್ರ್ಯಾಲಿಗಳಲ್ಲಿ ಬಂದ 50ಕ್ಕೂ ಹೆಚ್ಚು ಹಿರಿಯ ಮಹಿಳೆಯರು ಮೋದಿ ವಿರುದ್ಧ, ಕೃಷಿ ವಿರೊಧಿ ನೀತಿಗಳ ವಿರುದ್ಧ ಘೋಷಣೆ ಕೂಗುತ್ತಾ ಟಿಕ್ರಿಯಲ್ಲಿ ಮೆರವಣಿಗೆ ನಡೆಸಿದರು. ತಮ್ಮ ಹಕ್ಕು ಪಡೆದೇ ಮರಳುತ್ತೇವೆ ಎಂದು ಘೋಷಿಸಿದರು.
ಸುರಿಯುತ್ತಿರುವ ಮಳೆಯಲ್ಲೇ ಹೋರಾಟ ಮುನ್ನಡೆಸಿದ್ದ ಈ ಮಹಿಳೆಯರನ್ನು ಮಾಸ್ ಮೀಡಿಯಾ ಫೌಂಡೇಷನ್ ಪ್ರತಿನಿಧಿಗಳು ಮಾತನಾಡಿಸಿದಾಗ,’ ರೈತ ಮಕ್ಕಳಿಗೆ ಮಳೆಯಿಂದ ಯಾವ ತೊಂದರೆ?’ ಎಂದು ತಮ್ಮ ಉತ್ಸಾಹವನ್ನು ಪ್ರದರ್ಶಿಸಿದರು.
ಸುಮಾರು 2,000 ರೈತ ಮಹಿಳೆಯರು ಟಿಕ್ರಿಗಡಿಯಲ್ಲಿ ನಡೆಯುತ್ತಿರುವ ರೈತ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.
ಟಿಕ್ರಿಯಲ್ಲಿ ನೆರೆದಿರುವ ರೈತ ಹೋರಾಟದಲ್ಲಿ ತೊಡಗಿರುವ ರೈತರಿಗೆ ಊಟದ ವ್ಯವಸ್ಥೆ ಅಬಾಧಿತವಾಗಿ ನಡೆಯುತ್ತಿದೆ. ಇದನ್ನು ಪಂಜಾಬಿನಿಂದ ಬಂದವರಷ್ಟೇ ನೆರವಿನ ಹಸ್ತ ಚಾಚುತ್ತಿಲ್ಲ. ಉತ್ತರ ಪ್ರದೇಶದ ಘೋರಖ್‌ಪುರದಿಂದ ಮಹಿಳೆಯರ ಗುಂಪು, ಇಡೀ ದಿನ ಚಪಾತಿ ಹಾಗೂ ಇತರ ಆಹಾರ ಖಾದ್ಯಗಳನ್ನು ಸಿದ್ಧಪಡಿಸುತ್ತಾ, ಹೋರಾಟಗಾರರಿಗೆ ಬಡಿಸುತ್ತಿದ್ದರು. ದಣಿವರಿಯದೇ ರೈತರಿಗೆ ಎಲ್ಲ ಹೊತ್ತಿನಲ್ಲೂ ಊಟ ಲಭ್ಯವಾಗುವಂತೆ ನೋಡಿಕೊಳ್ಳುತ್ತಿದ್ದಾರೆ.
Read Also: ರೈತ ವಿರೋಧಿ ಕೃಷಿ ನೀತಿಗಳು: ಪ್ರಧಾನಿ ಮೋದಿ V/S ಮುಖ್ಯಮಂತ್ರಿ ಮೋದಿ!