ಪಾಕ್‌ ಹಿಂದೂ ನಿರಾಶ್ರಿತರಿಗೆ ಆಹಾರ ಕಿಟ್, ಮಕ್ಕಳಿಗೆ ಕ್ರಿಕೆಟ್‌ ಕಿಟ್‌ ವಿತರಿಸಿದ ಶಿಖರ್ ಧವನ್‌

ಟೀಂ ಇಂಡಿಯಾ ಸ್ಟಾರ್ ಕ್ರಿಕೆಟರ್ ಶಿಖರ್ ಧವನ್ ದೆಹಲಿಯ ಮಜ್ಲಿಸ್ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ಇರುವ ಪಾಕಿಸ್ತಾನ ಹಿಂದೂ ನಿರಾಶ್ರಿತರ ಶಿಬಿರಕ್ಕೆ ತೆರಳಿ ಅವರಿಗೆ ಅಗತ್ಯ ಹಾಸಿಗೆ, ಇ-ಶೌಚಾಲಯಗಳನ್ನು ನೀಡಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

ಶಿಬಿರದಲ್ಲಿ ವಾಸವಿದ್ದ ಮಕ್ಕಳಿಗೆ ಉಚಿತ ಕ್ರಿಕೆಟ್ ಕಿಟ್ ವಿತರಿಸಿದರು. ಅಲ್ಲದೆ ಭವಿಷ್ಯದಲ್ಲಿ ಸಹ ತಾವು ಅವರಿಗೆ ಸಹಾಯ ನೀಡುವ ಭರವಸೆ ಕೊಟ್ಟಿದ್ದಾರೆ.ಪಾಕಿಸ್ತಾನದಿಂದ ಬಂದ ಸಾಕಷ್ಟು ಹಿಂದೂ ನಿರಾಶ್ರಿತರು ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರನ್ನು ದೆಹಲಿ ರೈಡಿಂಗ್ ಕ್ಲಬ್ ಫೌಂಡೇಶನ್ ನೋಡಿಕೊಳ್ಳುತ್ತದೆ.

ಧವನ್ ತಮ್ಮ ಈ ಅಚ್ಚರಿಯ ಭೇಟಿಯ ಚಿತ್ರಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.

https://twitter.com/SDhawan25/status/1279374416980217856?ref_src=twsrc%5Etfw%7Ctwcamp%5Etweetembed%7Ctwterm%5E1279374416980217856%7Ctwgr%5E&ref_url=https%3A%2F%2Fwww.kannadaprabha.com%2Fcricket%2F2020%2Fjul%2F05%2Fshikhar-dhawan-meets-pakistani-hindu-refugees-in-delhi-donates-crickets-kits-and-bedding-essentials-422961.html

“ನಾನಿಂದು ನನ್ನ ಮುಂಜಾನೆಯನ್ನು ಮಜ್ಲಿಸ್ ಮೆಟ್ರೋ ನಿಲ್ದಾಣದ ಬಳಿ ತಂಗಿರುವ ಪಾಕ್ ಹಿಂದೂ ನಿರಾಶ್ರಿತರೊಂದಿಗೆ ಕಳೆದು ಆನಂದ ಅನುಭವಿಸಿದೆ. ಅವರು ನನಗೆ ನೀಡಿದ ಸ್ವಾಗತಕ್ಕೆ ಕೃತಜ್ಞರಾಗಿರಬೇಕು” ಎಂದು ಧವನ್ ಟ್ವೀಟ್ ಮಾಡಿದ್ದಾರೆ.

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ದೇಶಾದ್ಯಂತ ಲಕ್ಷಾಂತರ ದೀನದಲಿತ ಜನರು ಸಮಸ್ಯೆಗೆ ತುತ್ತಾಗಿದ್ದಾರೆ. ಈ ಸಮಯದಲ್ಲಿ ಧವನ್ ಸಾಮಾಜಿಕ ಕಳಕಳಿ ತೋರುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights