ಬಂಡೆಯ ಅಂಚಿನಲ್ಲಿ ಸ್ವಿಂಗ್ ಮಾಡುವಾಗ ತುಂಡಾದ ಸರಪಳಿ : ಮುಂದೇನಾಯ್ತು ನೋಡಿ..
ಮಹಿಳೆಯರಿಬ್ಬರೂ ಎತ್ತರದ ಬಂಡೆಯ ತುದಿಯಲ್ಲಿ ಜೋಕಾಲಿ ಆಡುವಾಗ ಹಗ್ಗ ತುಂಡಾದ ವೀಡಿಯೋ ಸೋಷಿಯಲ್ ಮೀಡಿಯದಲ್ಲಿ ವೈರಲ್ ಆಗಿದೆ.
ರಷ್ಯಾದ ರಿಪಬ್ಲಿಕ್ ಆಫ್ ಡಾಗೆಸ್ತಾನ್‌ನ ಸುಲಕ್ ಕ್ಯಾನ್ಯನ್‌ನಲ್ಲಿ ಈ ಘಟನೆ ನಡೆದಿದೆ. ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಇಬ್ಬರು ಮಹಿಳೆಯರು ಬಂಡೆಯ ಅಂಚಿನಲ್ಲಿರುವ ಸ್ವಿಂಗ್ ರೈಡ್ ತೆಗೆದುಕೊಳ್ಳುವುದನ್ನು ಕಾಣಬಹುದು. ಅವರು ತಮ್ಮ ಆಸನಗಳಲ್ಲಿ ಕುಳಿತುಕೊಂಡ ನಂತರ, ಹಿಂದಿನಿಂದ ಒಬ್ಬ ವ್ಯಕ್ತಿ ಸ್ವಿಂಗ್ ಅನ್ನು ತಳ್ಳುವುದನ್ನು ಕಾಣಬಹುದು. ಅವರು ಆರಂಭದಲ್ಲಿ ಜಾಯ್‌ರೈಡ್ ಅನ್ನು ಆನಂದಿಸುತ್ತಾರೆ. ಬಳಿಕ ಸ್ವಿಂಗ್‌ನ ಸರಪಳಿಗಳು ತುಂಡಾಗಿ 6300 ಅಡಿ ಬಂಡೆಯ ಅಂಚಿನಲ್ಲಿರುವ ಸ್ವಿಂಗ್‌ನಿಂದ ಬಂಡೆಯ ಕೆಳಗೆ ಇಬ್ಬರು ಬೀಳುತ್ತಾರೆ. ಅದೃಷ್ಟವಶಾತ್ ಮಹಿಳೆಯರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ.
ವೀಡಿಯೊವನ್ನು ಇಲ್ಲಿ ನೋಡಿ:
Moment two women fell off a 6000-Ft cliff swing over the Sulak Canyon in Dagestan, Russia.
Both women landed on a narrow decking platform under the edge of the cliff & miraculously survived with minor scratches.
Police have launched an investigation. pic.twitter.com/oIO9Cfk0Bx— UncleRandom (@Random_Uncle_UK) July 14, 2021
ಮಹಿಳೆಯರು ಭಯಭೀತರಾಗಿದ್ದು ಗಂಭೀರವಾದ ಗಾಯಗಳಾಗಲಿಲ್ಲ. ಸ್ವಿಂಗ್ ಗರಿಷ್ಠ ಎತ್ತರದಲ್ಲಿರುವಾಗ ಅವರು ಜಾರಿಬಿದ್ದರೆ ಏನಾಗಬಹುದೆಂದು ಊಹಿಸಿಕೊಳ್ಳುವುದು ಸಾಧ್ಯವಿಲ್ಲ.
ಡಾಗೆಸ್ತಾನ್‌ನ ಪ್ರವಾಸೋದ್ಯಮ ಸಚಿವಾಲಯ ಸ್ವಿಂಗ್ ‘ಸುರಕ್ಷತಾ ಮಾನದಂಡಗಳನ್ನು ಪೂರೈಸಲಿಲ್ಲ, ಇದರಿಂದಾಗಿ ಮಹಿಳೆಯರು ಬಿದ್ದರು’ ಎಂದು ದೂರಿದೆ.