ಕೃತಕ ಹಲ್ಲು ನುಂಗಿ ಮಹಿಳೆ ಸಾವು : ರೋಗಿಗೆ ಆತಂಕಪಡಬೇಡಿ ಎಂದಿದ್ದ ವೈದ್ಯರಿಗೆ ಕಾದಿತ್ತು ಅಚ್ಚರಿ!

ಆಕಸ್ಮಿಕವಾಗಿ ನೀರಿನೊಂದಿಗೆ ಕೃತಕ ಹಲ್ಲು ನುಂಗಿ ಮಹಿಳೆ ಸಾವನ್ನಪ್ಪಿದ ಘಟನೆ ಚೆನ್ನೈನಲ್ಲಿ ನಡೆದಿದೆ.

ಜುಲೈ 4 ರಂದು ನೀರು ಕುಡಿಯುತ್ತಿದ್ದಾಗ ವಲಸರಾವಕ್ಕಂನ 43 ವರ್ಷದ ಎಸ್ ರಾಜಲಕ್ಷ್ಮಿ ತನ್ನ ಮೂರು ಕೃತಕ ಹಲ್ಲುಗಳಲ್ಲಿ ಒಂದನ್ನು ನುಂಗಿದ್ದಾಳೆ. ಬಳಿಕ ತಲೆತಿರುಗುವಿಕೆ ಮತ್ತು ವಾಕರಿಕೆಯಿಂದಾಗಿ ರಾಜಲಕ್ಷ್ಮಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವೈದ್ಯರು ಆತಂಕಪಡುಹಾಗಿಲ್ಲ ಎಂದು ಹೇಳಿ ಆಕೆಯನ್ನು ಕಳುಹಿಸಿದ್ದಾರೆ.

ಮರುದಿನ ಆಕೆ ಮೂರ್ಚೆ ಹೋಗಿ ಆಸ್ಪತ್ರೆಗೆ ಸಾಗಿಸುವಾಗಲೇ ಮೃತಪಟ್ಟಿದ್ದಾಳೆ. ಶವವನ್ನು ಶವಪರೀಕ್ಷೆಗಾಗಿ ಪೊಲೀಸರು ಕಳುಹಿಸಿದ್ದಾರೆ. ಕ್ರಿಮಿನಲ್ ಪ್ರೊಸೀಜರ್ ಸಂಹಿತೆಯ ಸೆಕ್ಷನ್ 174 (ಅಸ್ವಾಭಾವಿಕ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏಳು ವರ್ಷಗಳ ಹಿಂದೆ ರಾಜಲಕ್ಷ್ಮಿಯ ಕೃತಕ ಹಲ್ಲು ಹಾಕಿಸಿಕೊಂಡಿದ್ದರು, ಅವು ಸಡಿಲವಾಗಬಹುದೆಂದುಪೊಲೀಸರು ಶಂಕಿಸಿದ್ದಾರೆ.

ರಾಜಲಕ್ಷ್ಮಿ ಅವರಿಗೆ ಪತಿ ಸುರೇಶ್ (48) ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights