ಕಾರವಾರ ಬಂದರು ವಿಸ್ತರಣೆಗೆ ಮೀನುಗಾರರ ವಿರೋಧಕ್ಕೆ ರಾಜಕೀಯ ಲೇಪನ…

ಸಾಗರಮಾಲಾ ಯೋಜನೆಯಡಿ ಕಾರವಾರ ಬಂದರು ವಿಸ್ತರಣೆಗೆ ಮೀನುಗಾರರು ವಿರೋಧ ಪಡಿಸಿ ಹೋರಾಟ ನಡೆಸುತ್ತಿರುವಾಗಲೆ ಇದಕ್ಕೆ ರಾಜಕೀಯ ಲೇಪನ ಶುರುವಾಗಿದೆ…

ಮೀನುಗಾರರ ಸಾಗರಮಾಲ ವಿರೋಧದ ಹೋರಾಟಕ್ಕೆ ಮೀನುಗಾರರ ಬೆಂಬಲಕ್ಕೆ ಈಗ ಸತೀಶ್ ಸೈಲ್ ಸೇರಿದಂತೆ ಆನಂದ್ ಅಸ್ನೋಟಿಕರ್ ಹೋರಾಟದಲ್ಲಿ ಬಂದು ಸಾಗರಮಾಲಾ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ರು..ಆದ್ರೆ ಈಗ ಇದು ರಾಜಕೀಯವಾಗಿ ಪರ ವಿರೋಧ ಪ್ರಾರಂಭವಾಗಿದೆ..

ಈಗಾಗಲೆ ಬಂದರು ವಿಸ್ತರಣೆ ಯೋಜನೆಗೆ ಶಾಸಕಿ ರೂಪಾಲಿ ನಾಯ್ಕ್ ಮುಖ್ಯ ಕಾರಣ ಎಂದು ರೂಪಾಲಿ ವಿರುದ್ದ ಇಲ್ಲಿನ ಮೀನುಗಾರರು ಆರೋಪ ಮಾಡಿ ಹೋರಾಟಕ್ಕೆ ಇಳಿದಿದ್ದಾರೆ ಈ ಹೊತ್ತಲ್ಲೆ ರೂಪಾಲಿ ಮಾಜಿ‌ ಶಾಸಕ ಸತೀಶ್ ಮತ್ತು ಆನಂದ್ ಮೀನುಗಾರರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದರು ಈಗ ಮೀನುಗಾರರ ಹೋರಾಟ ರಾಜಕೀಯ ನಾಯಕರ ಕೆಸರೆರಚಾಟಕ್ಕೆ ವೇದಿಕೆಯಂತಾಗಿದೆ…

ಶಾಸಕಿ ರೂಪಾಲಿ ಆರೋಪಕ್ಕೆ ಕೆಂಡಾಮಂಡಲ ಸತೀಶ್ ಸೈಲ್

ಸಾಗರಮಾಲಾ ಯೋಜನೆಯ ವಿರುದ್ಧ ೨೦೧೮ರಲ್ಲೇ ಬೃಹತ್ ಪ್ರತಿಭಟನೆ ನಡೆಸಿದ್ದೆ. ಆದರೆ, ಬಿಜೆಪಿಯವರಿಗೆ ಪಾಪ ಇದು ಗೊತ್ತಿಲ್ಲ. ಯಾರ ಮೇಲಾದರೂ ಗೂಬೆ ಕೂರಿಸುವ ಮುನ್ನ ಯೋಚನೆ ಮಾಡಬೇಕು ಎಂದು ಮಾಜಿ ಶಾಸಕ ಸತೀಶ್ ಸೈಲ್ ಹೇಳಿದ್ದಾರೆ…

ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ನನ್ನ ವಿರುದ್ಧ ಟೀಕೆ ಟಿಪ್ಪಣಿಗಳನ್ನು ನೀಡುತ್ತಿದ್ದಾರೆ. ಕೊಡಲಿ ಅಂತಲೇ ಸುಮ್ಮನಿದ್ದೆ. ಕಾರವಾರ ಬಂದ್‌ನ ನಂತರ ಉತ್ತರ ಕೊಡೋಣ ಎಂದಿದ್ದೆ. ಸಾಗರಮಾಲಾ ಯೋಜನೆ ಕೇಂದ್ರ ಸರ್ಕಾರದ್ದು. ಇದನ್ನು ಮಾಡುವಾಗ ಸ್ಥಳೀಯ ಶಾಸಕರ ಅಥವಾ ಇನ್ಯಾರದ್ದೋ ಗಮನಕ್ಕೆ ತಂದು ಮಾಡುವುದಲ್ಲ. ಇದು ಸರ್ಕಾರದ ಮಟ್ಟದಲ್ಲಿ ಆಗುವುದು. ಕಾಮಗಾರಿ ಸಮಯದಲ್ಲಿ ಶಾಸಕರ ಗಮನಕ್ಕೆ ಬರುತ್ತದೆ ಎಂದು ಹೇಳಿದರು.

೨೦೧೭ರ ಸಮಯದಲ್ಲಿ ಈ ಯೋಜನೆ ಮಂಜೂರಾಗಿದೆ ಆಗಿದೆ. ಈ ಯೋಜನೆಗಾಗಿ ೨೦೦೭ರಿಂದ ಕಾರವಾರ ಬಂದರಿನ ಬಗ್ಗೆ ಹಲವಾರು ಅಧ್ಯಯನಗಳು ನಡೆದಿವೆ. ಆದರೆ, ಈಗ ಬಿಜೆಪಿಯವರು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ೨೦೧೮ರಲ್ಲಿ ಶಾಸಕನಾಗಿದ್ದಾಗ ಕಾಮಗಾರಿಯ ಬಗ್ಗೆ ನನಗೆ ಗೊತ್ತಾಗಿತ್ತು. ಮೀನುಗಾರ ಮುಖಂಡರಾದ ಗಣಪತಿ ಮಾಂಗ್ರೆ, ಗಣಪತಿ ಉಳ್ವೇಕರ್, ಕೆ.ಟಿ.ತಾಂಡೇಲ ಅವರನ್ನು ಎಂಟು ತಿಂಗಳ ಹಿಂದೆ ಭೇಟಿಯಾಗಿ ಈ ಬಗ್ಗೆ ಮಾತನಾಡಿದ್ದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು, ಸಾರ್ವಜನಿಕರ ಅಹವಾಲು ಕರೆಯಬೇಕು ಎಂದು ಚರ್ಚೆ ನಡೆಸಿದ್ದೆ. ಫೆ.೨೮, ೨೦೧೮ರಲ್ಲಿ ಬೃಹತ್ ಪ್ರತಿಭಟನೆ ಕೂಡ ಮಾಡಿದ್ದೆವು ಎಂದು ತಿಳಿಸಿದರು.

ಅಂದು ಪ್ರತಿಭಟನೆಯ ಸಮಯದಲ್ಲಿ ಮೂರ್ನಾಲ್ಕು ಸಾವಿರ ಜನ ಸೇರಿದ್ದರು. ಅಹವಾಲು ಸಭೆಯಲ್ಲಿ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಮೀನುಗಾರರ ಕಷ್ಟವನ್ನು ಜಿಲ್ಲಾಡಳಿತ ಅರಿಯಬೇಕಿದೆ. ಕಡಲತೀರದಲ್ಲಿ ಯಾವುದೇ ಮಾರಕ ಯೋಜನೆಗೆ ಜನರು ಒಪ್ಪುವುದಿಲ್ಲ. ಜಿಲ್ಲಾಡಳಿತ ಅರಿತು ಈ ಹೋರಾಟಕ್ಕೆ ಬೆಂಬಲಿಸಿ, ಕಾಮಗಾರಿಗೆ ತಡೆ ನೀಡಬೇಕು ಎಂದು ಅಂದೇ ನನ್ನ ಹೇಳಿಕೆ ನೀಡಿದ್ದೆ. ಆಡಳಿತ ಪಕ್ಷದ ಶಾಸಕನಾಗಿಯೂ ಅಂದು ವಿರೋಧಿಸಿದ್ದೆ. ಆದರೆ, ಬಿಜೆಪಿಯವರಿಗೆ ಪಾಪ ಇದು ಗೊತ್ತಿಲ್ಲ ಎಂದು ರೂಪಾಲಿಗೆ ಟಾಂಗ್ ಕೊಟ್ರು..

ಏಕಾಏಕಿ ಬೆಂಗಳೂರಲ್ಲಿ ಪ್ರೆಸ್ ಮೀಟ್ ಮಾಡೋದಲ್ಲ. ಇಲ್ಲಿ ಬಂದು ಪ್ರೆಸ್‌ಮೀಟ್ ಮಾಡಲಿ. ನಾನೂ ಬರುತ್ತೇನೆ ಎಂದು ಸಾವಲೆಸೆದ್ರು…

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights