ಕರ್ನಾಟಕ ಲಾಕ್ ಡೌನ್ ನಡುವೆಯೂ ಜನರ ಓಡಾಟ : ಕೊರೊನಾ ಸೋಂಕಿತರ ಸಂಖ್ಯೆ 38ಕ್ಕೇರಿಕೆ!

ಕರ್ನಾಟಕ ಲಾಕ್ ಡೌನ್ ನಡುವೆಯೂ ಜನ ಓಡಾಡುವುದನ್ನ ಬಿಟ್ಟಿಲ್ಲ. ಮಾರುಕಟ್ಟೆಗಳಿಗೆ ತೆರಳುವುದು. ಗುಂಪು ಗುಂಪಾಗಿ ಸೇರುವುದು. ಮೂಜು ಮಸ್ತಿ ಮಾಡುವುದು ಕಂಡುಬರುತ್ತಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 38ಕ್ಕೇರಿಕೆಯಾಗಿದೆ.

ಹೌದು.. ಬೆಂಗಳೂರು ನಲ್ಲಿ 5 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಬೆಂಗಳೂರಿನಲ್ಲಿ ಒಟ್ಟು 24 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದರೇ, ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.

ಕರ್ನಾಟಕದಲ್ಲಿ ಇಂದಿನಿಂದ 31 ರವೆಗೆರೆ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ. ಹೀಗಿದ್ದೂ ಜನ ಯುಗಾದಿ ಹಬ್ಬದ ಮೂಡ್ ನಲ್ಲಿ ತರಕಾರಿ ಖರೀದಿಯಲ್ಲಿ ತೊಡಗಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಇಂದು ಬೆಂಗಳೂರಿನ ಐವರಿಗೆ ಕೊರೊನಾ ಸೋಂಕು ಪತ್ತೆಯಾಗಿರುವುದು ದೃಢ ಪಟ್ಟಿದೆ. ಈ ಮೂಲಕ ಬೆಂಗಳೂರಿನಲ್ಲಿ ಒಟ್ಟು 24ಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ..

ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಸರ್ಕಾರದ ನಿಯಮಗಳನ್ನು ಪಾಲಿಸುತ್ತಿರುವವರಲ್ಲೂ ಆತಂಕ ಶುರುವಾಗಿದೆ. ಶನಿವಾರ 5, ಭಾನುವಾರ 6, ಸೋಮವಾರ 7 ಜನರಿಗೆ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿತ್ತು. ಈ ಬಳಿಕ, ಇಂದು ಮಂಗಳವಾರ 5 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದ ದೃಢಪಟ್ಟಿದೆ. ಹೀಗಾಗಿ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.

ಹೀಗೆ ಸರ್ಕಾರದ ಆದೇಶ ಪಾಲಿಸದೇ ಹೋದರೇ ಕೊರೊನಾ ಸೋಂಕಿತರು ತಮ್ಮ ದೇಹದಿಂದ ನಿಮ್ಮ ದೇಹಕ್ಕೆ ಸೋಂಕು ಹರಡಲು ಮನೆ ಬಾಗಿಲಿಗೇ ಬಂದು ಕಾದು ಕುಳಿತರೂ ಆಶ್ಚರ್ಯಪಡಬೇಕಾಗಿಲ್ಲ. ಹೀಗಾಗಿ ಸೋಂಕು ತಡೆಯುವುದು ಸರ್ಕಾರದ ಜವಬ್ದಾರಿ ಮಾತ್ರವಲ್ಲ ನಮ್ಮ ನಿಮ್ಮೆಲ್ಲರ ಜವಬ್ದಾರಿ. ಇದಕ್ಕೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights