ದಕ್ಷಿಣ ಆಫ್ರಿಕಾ ಫಸ್ಟ್ ಕ್ಲಾಸ್ ಕ್ರಿಕೆಟಿಗ ಸೋಲೋ ಎನ್‍ಕ್ವಿನಿಗೆ ಕೊರೊನಾ ಪಾಸಿಟಿವ್..!

ವಿಶ್ವದಾದ್ಯಂತ ಕೊರೊನಾ ಸೋಂಕು ಕಾಡ್ಗಿಚ್ಚಿನಂತೆ ಹರಡುತ್ತಿದ್ದು, ದಕ್ಷಿಣ ಆಫ್ರಿಕಾ ಫಸ್ಟ್ ಕ್ಲಾಸ್ ಕ್ರಿಕೆಟಿಗ ಸೋಲೋ ಎನ್‍ಕ್ವಿನಿ ಅವರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ.

ಹೌದು.. ಈಗಾಗಲೇ ಪಾಕ್ ಕ್ರಿಕೆಟಿಗ ಜಾಫರ್ ಸರ್ಫರಾಜ್, ಸ್ಕಾಟ್‌ಲೆಂಡ್ ನ ಮಜಿದ್ ಹಕ್ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಸದ್ಯ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಸೋಲೋ ಎನ್‍ಕ್ವಿನಿಗೆ ಸೋಂಕು ತಾಗಿದ್ದು ಕೊರೊನಾ ಪಾಸಿಟಿವ್ ಬಂದ ಮೂರನೇ ಕ್ರಿಕೆಟಿಗನಾಗಿದ್ದಾರೆ. ಈಗಾಗಲೇ ಗಿಲ್ಲನ್ ಬಾರ್ರೆ ಸಿಂಡ್ರೋಮ್ ಎಂಬ ಅಪರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಸೋಲೋ ಎನ್‍ಕ್ವಿನಿ ಅವರ ಸ್ಥಿತಿ ಕೊರೊನಾ ವೈರಸ್ ನಿಂದಾಗಿ ಸದ್ಯ ಗಂಭೀರವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಬಗ್ಗೆ ಟ್ವೀಟ್ ಮಾಡಿದ ಸೋಲೋ, ‘ ಕಳೆದ ವರ್ಷದಿಂದ ನನಗೆ ಜಿಬಿಎಸ್ ಸಮಸ್ಯೆ ಕಾಣಿಸಿಕೊಂಡು ಈ ರೋಗದಿಂದ ಚೇತರಿಕೆ ಕಂಡಿದ್ದೆ. ಆದರೆ ಇದರೊಂದಿಗೆ ನನಗೆ ಟಿಬಿ, ಮೂತ್ರಪಿಂಡ ಸಮಸ್ಯೆಗಳು ಕಾಣಿಸಿಕೊಂಡಿವೆ. ಸದ್ಯ ಕೊರೊನಾ ವೈರಸ್ ಕೂಡ ಪಾಸಿಟಿವ್ ಬಂದಿದೆ. ನನಗೆ ಈ ರೀತಿ ಏಕೆ ಆಗುತ್ತಿದೆ ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಜಿಬಿಎಸ್‍ಗೆ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಕೆಲ ವಾರಗಳ ಕಾಲ ಕೋಮಾ ಸ್ಥಿತಿಗೆ ತಲುಪಿದಿದ್ದರು.

2012ರಲ್ಲಿ ದಕ್ಷಿಣ ಆಫ್ರಿಕಾ ಅಂಡರ್-19 ತಂಡದ ಸಾರಥ್ಯವನ್ನು ಸೋಲೋ ಎನ್‍ಕ್ವಿನಿ ವಹಿಸಿದ್ದರು. ಅಲ್ಲದೇ ಈ ಹಿಂದೆ ದಕ್ಷಿಣ ಆಫಿಕಾ ಈಸ್ಟರ್ನ್ ಪ್ರಾವಿನ್ಸ್, ವಾರಿಯರ್ಸ್ ಫ್ರಾಂಚೈಸಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಸದ್ಯ ಸೋಲೋ ಎನ್‍ಕ್ವಿನಿ ಶೇರ್ ಕ್ಲಬ್ ತಂಡದ ಪರ ಆಡುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights