ಪ್ರವಾಸಿಗರಿಗೆ ಬನ್ನೇರುಘಟ್ಟ ಪಾರ್ಕ್ ಅಧಿಕಾರಿಗಳಿಂದ ನ್ಯೂ ಇಯರ್ ಶಾಕ್..

ಪ್ರಕೃತಿ, ವನ್ಯಜೀವಿಗಳ ಜೊತೆ ನ್ಯೂ ಇಯರ್ ಸೆಲೆಬ್ರೆಷನ್ ಮಾಡುವ ಪ್ರವಾಸಿಗರಿಗೆ ಪಾರ್ಕ್ ಅಧಿಕಾರಿಗಳ ಶಾಕ್. ಹೌದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳು ದರ ಪರಿಷ್ಕರಣೆ ಮಾಡಿದ್ದು, ಮೃಗಾಲಯ, ಚಿಟ್ಟೆ ಪಾರ್ಕ್ ಮತ್ತು ಸಫಾರಿ ಪ್ರವೇಶ ದರ ಹೆಚ್ಚಸಲಾಗಿದ್ದು, ಪ್ರವಾಸಿಗರು ಬೇಸರಗೊಂಡಿದ್ದಾರೆ.

ಬೆಂಗಳೂರು ನಗರಕ್ಕೆ ಸಮೀಪದಲ್ಲಿದೆ. ಜೊತೆಗೆ ಕುಟುಂಬದೊಂದಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಅಪರೂಪದ ವನ್ಯಜೀವಿಗಳಗಳನ್ನು ಕಣ್ತಂಬಿಕೊಂಡು ನ್ಯೂ ಇಯರ್ ಏಂಜಾಯ್ ಮಾಡಲು ಆಗಮಿಸಿದ್ದ ಪ್ರವಾಸಿಗರಿಗೆ ಉದ್ಯಾನವನದ ಆಡಳಿತ ಮಂಡಳಿ ದರ ಏರಿಕೆ ಶಾಕ್ ನೀಡಿದೆ. ಹೌದು ಮೃಗಾಲಯ ಪ್ರವೇಶಕ್ಕೆ 100 ರೂ, ಚಿಟ್ಟೆ ಪಾರ್ಕ್ ವೀಕ್ಷಣೆಗೆ 50, ಸಫಾರಿ ವೀಕ್ಷಣೆಗೆ 350 ರೂ ದರ ಪರಿಷ್ಕರಣೆ ಮಾಡಿದೆ. ಈ ಹಿಂದೆ ಮೃಗಾಲಯ ಪ್ರವೇಶಕ್ಕೆ 80, ಚಿಟ್ಟೆಪಾರ್ಕ್ 30, ಸಫಾರಿ 280 ದರ ವಿಧಿಸಾಗುತ್ತಿತ್ತು. ಆದ್ರೆ ಇದೀಗ ದಿಢೀರ್ ಏರಿಕೆ ಸರಿಯಲ್ಲ ಎಂದು ಪ್ರವಾಸಿ ಗೌತಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೂ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಮಧ್ಯಮ ವರ್ಗದ ಜನ ಹೆಚ್ಚಾಗಿ ಭೇಟಿ ನೀಡ್ತಾರೆ. ಹಾಗಾಗಿ ದರ ಏರಿಕೆ ಮಾಡಿರುವುದು ಸರಿಯಲ್ಲ. ಸಾಧ್ಯವಾದರೆ ದರ ಕಡಿಮೆ ಮಾಡಬೇಕು. ಸದ್ಯ ಪ್ರವಾಸಿಗರಿಗೆ ಸೂಕ್ತ ಮೂಲಭೂತ ಸೌಲಭ್ಯಗಳು ಇಲ್ಲ. ಮೂಲಭೂತ ಸೌಕರ್ಯ ಕಲ್ಪಿಸದೇ ದರ ಏರಿಕೆ ಮಾಡಿರುವುದು ಸರಿಯಲ್ಲ. ದರ ಕಡಿಮೆ ಮಾಡಬೇಕು ಎಂದು ಪ್ರವಾಸಿ ದಿವ್ಯಾ ಉದ್ಯಾನವನದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಒಟ್ನಲ್ಲಿ ನ್ಯೂ ಇಯರ್ ಸೆಲೆಬ್ರೆಷನ್ ಹಿನ್ನೆಲೆ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಆಗಮಿಸಿದ್ದ ಪ್ರವಾಸಿಗರಿಗೆ ದರ ಶಾಕ್ ನೀಡಿದ್ದು, ಇದರ ನಡುವೆಯು ಪ್ರವಾಸಿಗರು ಮಾತ್ರ ಪಾರ್ಕ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು, ನೀವು ಸಹ ಹೊಸ ವರ್ಷ ಅಡಚಣೆಗೆ ಪಾರ್ಕ್ಗೆ ಭೇಟಿ ನೀಡುವ ಅಗಿದ್ದರೆ ನಿಮ್ಮ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights