ಮಾಯಾಲೋಕದಲ್ಲಿ ಕೊರೊನಾ : ಈಕೆ ಸೋಂಕು ತಗುಲಿದ ಭಾರತದ ಮೊದಲ ಸೆಲೆಬ್ರಿಟಿ..!

ಪ್ರತಿ ದಿನ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಜನ ಕೊರೊನಾ ದಿಂದ ಬಚಾವ್ ಆಗೋಕೆ ಗೃಹ ಬಂದನದಲ್ಲಿದ್ದಾರೆ. ಈ ಕೊರೊನಾ ಸೋಂಕು ಅದ್ಯಾವ ಮಟ್ಟಿಗೆ ಹರಡುತ್ತಿದೆ ಅಂದ್ರೆ ಸೆಲೆಬ್ರಿಟಿಗಳನ್ನೂ ಬಿಟ್ಟಿಲ್ಲ. ಅಷ್ಟಕ್ಕೂ ಸೋಂಕು ತಗುಲಿದ ಆ ಸೆಲೆಬ್ರೆಟಿ ಯಾರು ಗೊತ್ತಾ..?

ಈ ಬಗ್ಗೆ ಟ್ವೀಟ್ ಮಾಡಿದ ಕನಿಕಾ ” ನನ್ನ ಕುಟುಂಬ ಪ್ರತ್ಯೇಕ ಪಟ್ಟಿದ್ದೇವೆ. 10 ದಿನಗಳ ಹಿಂದೆ ಸ್ರೀನಿಂಗ್ ಒಳಗಾಗಿದ್ದೆ. ಆದ್ರೆ ಇಲ್ಲಿಗೆ ಬಂದ ಬಳಿಕ ನನಗೆ ಲಕ್ಷಣಗಳು ಕಂಡು ಬಂದಿದೆ” ಎಂದಿದ್ದಾರೆ.

ಬಾಲಿವುಡ್ ನ ಬಹುಬೇಡಿಕೆಯ ಗಾಯಕಿ ಕನಿಕಾ ಕಪೂರ್. ನಿನ್ನೆ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಗೆ ಕೊರೋನಾ ಸೋಂಕು ಇರುವ ವಿಚಾರ ದೃಢಪಟ್ಟಿತ್ತು. ಅವರು ಇತ್ತೀಚೆಗೆ ಲಕ್ನೊದ ಆಪ್ತರ ನಿವಾಸದಲ್ಲಿ ಹೋಳಿ ಹಬ್ಬದ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದರು. ಆ ಪಾರ್ಟಿಗೆ ರಾಜಸ್ತಾನ ಮಾಜಿ ಮುಖ್ಯಮಂತ್ರಿ, ರಾಜಕಾರಣಿ ವಸುಂಧರಾ ರಾಜೇ ಮತ್ತು ಅವರ ಪುತ್ರ ಸಂಸದ ದುಶ್ಯಂತ್ ಸಿಂಗ್ ಸೇರಿದಂತೆ ಹಲವರು ಆಗಮಿಸಿ ಒಟ್ಟೊಟ್ಟಿಗೆ ನಿಂತು ಫೋಟೋಗಳನ್ನು ತೆಗೆಸಿಕೊಂಡಿದ್ದರು.

ಪಾರ್ಟಿ ಮುಗಿಸಿಕೊಂಡು ದುಶ್ಯಂತ್ ಸಿಂಗ್ ಸಂಸತ್ತು ಕಲಾಪದಲ್ಲಿ ಕಳೆದ ವಾರ ಭಾಗಿಯಾಗಿದ್ದರು. ಆಗ ಇವರ ಸಂಪರ್ಕಕ್ಕೆ ಹಲವು ರಾಜ್ಯಸಭಾ ಮತ್ತು ಲೋಕಸಭಾ ಸದಸ್ಯರು ಬಂದಿದ್ದಾರೆ. ನಿನ್ನೆ ಕನಿಕಾಗೆ ಕೊರೋನಾ ದೃಢಪಟ್ಟ ನಂತರ ಇದೀಗ ದುಶ್ಯಂತ್ ಸಿಂಗ್ ಮತ್ತು ವಸುಂಧರಾ ರಾಜೆ ಕೂಡ ಮನೆಯಲ್ಲಿ ಸ್ವಯಂ ನಿರ್ಬಂಧ ವಿಧಿಸಿ ಉಳಿದುಕೊಂಡಿದ್ದಾರೆ. ತಮಗೆ ಸೋಂಕು ಇರುವ ಬಗ್ಗೆ ಸ್ವತ: ಕನಿಕಾ ಅವರೇ ತಮ್ಮ ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.

ಲಂಡನ್ ಪ್ರವಾಸ್ ಮುಗಿಸಿ ಇವರು 10 ದಿನಗಳ ಹಿಂದೆ ಭಾರತಕ್ಕೆ ಮರಳಿದ್ರು. ನಾಲ್ಕು ದಿನದಿಂದ ಜ್ವರದ ಲಕ್ಷಣಗಳು ಕಾಣಿಸಿಕೊಂಡ ಪರಿಣಾಮ ಪರೀಕ್ಷೆ ಗೆ ಒಳಪಟ್ಟಿದ್ರು. ಆಗ ಕೋವಿಡ್ 19 ದೃಢಪಟ್ಟಿದೆ. ಆದರೆ ಕನಿಕಾ ಅವರು ಲಂಡನ್ ನಿಂದ ವಿಮಾನದಲ್ಲಿ ಲಕ್ನೊ ನಿಲ್ದಾಣಕ್ಕೆ ಬಂದಿಳಿದಾಗ ಕೊರೋನಾ ವೈರಸ್ ತಪಾಸಣೆಯ ಶಿಷ್ಠಾಚಾರಗಳನ್ನು ತಿಳಿದಿದ್ದರೂ ಅದನ್ನು ಮಾಡಿಸಿಕೊಳ್ಳಲಿಲ್ಲ. ಕೊರೋನಾ ಲಕ್ಷಣಗಳು ಕಂಡುಬಂದಿದ್ದರೂ ಕೂಡ ಪಾರ್ಟಿಗಳಲ್ಲಿ ಭಾಗಿಯಾಗಿ ಸಾರ್ವಜನಿಕರ ಜೊತೆ ಬೆರೆತಿದ್ದಾರೆ ಎಂದು ದೂರಲಾಗುತ್ತಿದೆ.

ಈ ಬಗ್ಗೆ ಮಾತನಾಡಿದ ಕನಿಕಾ ” ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ತಕ್ಷಣ ನಾನು ತಪಾಸಣೆಗೊಳಗಾಗಿದ್ದೆ. ನಾನು ಯಾವುದೇ ನಿರ್ಲಕ್ಷ್ಯ ಮಾಡಿಲ್ಲ. ಅಲ್ಲಿ ಸಿಎಂಒ ಅವರನ್ನು ಕರೆದು ನನ್ನನ್ನು ತಪಾಸಣೆ ಮಾಡಿ ಎಂದಿದ್ದೆ. ನಿಲ್ದಾಣದಲ್ಲಿ ಎಲ್ಲಾ ಅರ್ಜಿಗಳನ್ನು ತುಂಬಿದ್ದೇನೆ” ಎನ್ನುತ್ತಾರೆ.

ಇನ್ನು ಸತ್ಯವನ್ನು ಮರೆಮಾಚಿ ಸಾರ್ವಜನಿಕರನ್ನು ಅಪಾಯಕ್ಕೆ ತಳ್ಳಿದ ಆರೋಪದ ಮೇಲೆ ಕನಿಕಾ ಕಪೂರ್ ವಿರುದ್ಧ ಕೇಸು ದಾಖಲಾಗಿದ್ದು ನಿನ್ನೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕನಿಕಾ ಅವರು ಭೇಟಿ ಮಾಡಿದ್ದ ಸ್ಥಳಗಳಾದ ಲಕ್ನೊ, ನೊಯ್ಡಾ ಮತ್ತು ಕಾನ್ಪುರಗಳಲ್ಲಿ ಸ್ಥಳಗಳನ್ನು ಸ್ವಚ್ಛಗೊಳಿಸುವಂತೆ ಆದೇಶ ನೀಡಿದ್ದಾರೆ.

ಸದ್ಯ ಇವರಿಗೆ ಲಕ್ನೋದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾ ತಗಲಿದ ಭಾರತದ ಮೊದಲ ಸೆಲೆಬ್ರೆಟಿ ಇವರಾಗಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights