ಲಾಡ್ಜ್ ಗೆ ನುಗ್ಗಿದ ಜೀಪ್ : ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ
ಅದು ಬೆಳಗಿನ ಜಾವ. ಬೇಡ ಬೇಡ ಅಂದ್ರೆ ಪರಿವಿಲ್ಲದೇ ನಿದ್ರಿಸೋ ಸಮಯ. ಈ ಸಮಯದಲ್ಲಿ ಹತ್ತಿರದಲ್ಲಿ ಗುಡ್ಡವೊಂದು ಕುಸಿದಂತಾ ಶಬ್ದ ಬಂದರೆ ಹೇಗಿರಬೇಡ. ಒಂದು ಕ್ಷಣ ಎದೆ ಬಡಿತವೇ ನಿಂತು ಹೋದಂತ ಭಾಸವಾಗುವುದಿಲ್ಲವೇ. ಇದರಂತ ಅನುಭವ ಲಾಡ್ಜ್ ವೊಂದರಲ್ಲಿ ಮಲಗಿದ ಸಿಬ್ಬಂದಿಗಳಿಗೆ ಆಗಿದೆ.
ಹೌದು.. ಚಿಕ್ಕಮಗಳೂರು ನಗರದ ಐ ಜಿ ರಸ್ತೆಯಲ್ಲಿರುವ ದಿ ಲೋಟಸ್ ಲಾಡ್ಜ್ ಗೆ ಜೀಪ್ ವೊಂದು ನುಗ್ಗಿ ಅವಾಂತರವೇ ಸೃಷ್ಟಿ ಮಾಡಿದೆ. ಅಲ್ಲೇ ಮಲಗಿದ್ದ ಸಿಬ್ಬಂದಿಗಳ ಪ್ರಾಣ ಸ್ವಲ್ಪದರಲ್ಲೇ ಪಾರಾಗಿದೆ. ಜೀಪ್ ನುಗ್ಗಿದ ರಭಸಕ್ಕೆ ಮಲಗಿದವರು ಎದ್ದು ಬಿದ್ದು ಓಡಿದ್ದಾರೆ.
ಕಡೂರಿನಿಂದ ಬಂದ ಜೀಪ್ ಏಕಾಏಕಿ ನುಗ್ಗಿದ ಪರಿಣಾಮ ಲಾಡ್ಜ್ ನ ಗ್ಲಾಸ್ ಸಂಪೂರ್ಣ ಪುಡಿ ಪುಡಿಯಾಗಿದೆ. ಲಾಡ್ಜ್ ನ ರಿಸಷ್ಪನಿಸ್ಟ್ ನ ಹತ್ತಿರ ನುಗ್ಗಿದ ಜೀಪ್ ಕಂಡು ಅಲ್ಲೇ ಮಲಗಿದ್ದ ಲಾಡ್ಜ್ ಸಿಬ್ಬಂದಿಗಳು ಕಕ್ಕಾಬಿಕ್ಕಿಯಾಗಿ ಓಡಿದ್ದಾರೆ.
ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.