ಮೊಹರಂ ಆಚರಣೆ ವೇಳೆ ವಿದ್ಯುತ್ ಸ್ಪರ್ಶ : ಇಬ್ಬರು ಸಾವು – ಓರ್ವನಿಗೆ ಗಾಯ!
ಮೊಹರಂ ಹಬ್ಬದ ಆಚರಣೆ ವೇಳೆ ವಿದ್ಯುತ್ ಅವಘಡ ಸಂಭವಿಸಿ ಇಬ್ಬರು ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿ ನಡೆದಿದೆ.
ಇಂದು ಬೆಳಗಿನ ಜಾವ ಸುಮಾರು 5.30ಕ್ಕೆ ಈ ಘಟನೆ ನಡೆದಿದೆ. ದೇವರನ್ನು ಹಿಡಿದ ಹಸನ್ ಮುಲ್ಲಾ (55) ಮತ್ತು ದೇವರ ದರ್ಶನಕ್ಕೆ ಬಂದಿದ್ದ ಹುಲಿಗೆಮ್ಮ(25) ಎನ್ನುವ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಬೆಳಗಿನ ಜಾವ ದೇವರನ್ನು ದಾದನ್ ದೊಡ್ಡಿ ಗುರ್ಗಾಕ್ಕೆ ಕರೆದೊಯ್ಯುವ ವೇಳೆ ದೇವರು ವಿದ್ಯುತ್ ತಂತಿಗೆ ತಾಗಿ ವಿದ್ಯುತ್ ಹರಿದಿದೆ. ಪರಿಣಾಮ ದೇವರನ್ನು ಹಿಡಿದ ಹುಸೇನ್ ಪಾಶಾ ಮೃತಪಟ್ಟಿದ್ದಾನೆ. ಜೊತೆ ಕೋವಿಡ್ ನಿರ್ಬಂಧಗಳ ನಡೆವೆಯೂ ಗ್ರಾಮಸ್ಥರು ಮೊಹರಂ ಆಚರಣೆ ಮಾಡಿದ್ದಾರೆ.
ಘಟನೆಯಲ್ಲಿ ಓರ್ವ ವ್ಯಕ್ತಿಗೆ ಗಾಯಗಳಾಗಿದ್ದು ಆತನನ್ನು ಲಿಂಗಸೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಸ್ಕಿ ಪೊಲೀಸ್ ಠಾಣೆಯಲ್ಲಿ ಘಟನೆ ದಾಖಲಾಗಿದೆ.