“ಸಾಕು ಕೂತ್ಕೋಳೋ, ನೀನ್ ಯಾವನೋ ಹೇಳೋಕೆ” ಸಿದ್ದು ವಿರುದ್ಧ ಮುನಿದ ಮುನಿಯಪ್ಪ…!

ಉಪಚುನಾವಣೆಗೆ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಗೆ ಆಯಾ ಪಕ್ಷಗಳು ಸಿದ್ದತೆ ನಡೆಸಿರುವ ಬೆನ್ನಲ್ಲೆ ಇಂದು ಕಾಂಗ್ರೆಸ್ ಚುನಾವಣೆ ಸಭೆಯನ್ನು ಕೆಎಚ್ ಮುನಿಯಪ್ಪ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದಾರೆ.

ಚುನಾವಣೆಯಲ್ಲಿ ಬೇಕಾದವರಿಗೆ ಟಿಕೇಟ್ ಕೊಟ್ಟಿದ್ದೀರಿ. ಈ ಬಗ್ಗೆ ಯಾರೊಂದಿಗೆ ಚರ್ಚೆ ಮಾಡಿಲ್ಲ. ಒಂದು ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಸೋತರೆ ಯಾರು ನೈತಿಕ ಹೊಣೆ ಹೋರುತ್ತೀರಿ..? ಎಂದು ಖಡಕ್ ಆಗಿ ಮುನಿಯಪ್ಪ ಪ್ರಶ್ನಿಸಿದ್ದಾರೆ.

ಈ ವೇಳೆ  “ಕಳ್ಳರನ್ನ ಪಕ್ಕದಲ್ಲಿ ಕೂರಿಸಿಕೊಳ್ಳುವ ನೀನ್ಯಾವ ಯಾವ ಸೀಮೆ ನಾಯಕ” ಎಂದು ಸಿದ್ದರಾಮಯ್ಯ ನವರಿಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಗರಂ ಆದ ಸಿದ್ದರಾಮಯ್ಯ ‘ಸರಿಯಾಗಿ ಮಾತನಾಡು, ಗೆಲ್ಲಲು ಆಗದಿದ್ದರೂ ಮಾತಿಗೇನು ಕಡಿಮೆ ಇಲ್ಲ” ಎಂದ ಬಳಿಕ ಮಾಜಿ ಸಂಸದ ರೊಚ್ಚಿಗೆದ್ದು “ಸಾಕು ಕೂತ್ಕೋಳೋ, ನೀನ್ ಯಾವನೋ ಹೇಳೋಕೆ. ಎಲ್ಲಿಂದಲೋ ಬಂದು ನನ್ ಎದುರೇ ಮಾತಾಡ್ತಿಯಾ. ನನ್ನನ್ನು ಸೋಲಿಸಿದ್ದು ನೀನೇ, ಕಳ್ಳಾಟ ಆಡುತ್ತೀಯಾ” ಎಂದು ಏಕವಚನದಲ್ಲೇ ಕಿತ್ತಾಡಿದ್ದಾರೆ.

ಇಂದು ನಡೆದ ಸಭೆಯಲ್ಲಿ ಈಶ್ವರ್ ಖಂಡ್ರೆ, ಮುನಿಯಪ್ಪ, ಬಿ.ಕೆ.ಹರಿಪ್ರಸಾದ್, ಎಐಸಿಸಿ ಕಾರ್ಯದರ್ಶಿಗಳಾದ ವಿಷ್ಣು ನಾಥನ್, ಸಾಕೇಜ್ ಶೈಲಜನಾಥನ್, ಕೆ.ಜೆ.ಜಾರ್ಜ್, ಜಮೀರ್ ಅಹಮ್ಮದ್ ಉಪಸ್ಥಿತರಿದ್ದರು. ಆದರೆ ಸಭೆ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಬಗ್ಗೆ ಉತ್ತಮ ಜನಾಭಿಪ್ರಾಯವಿಲ್ಲ. ಬಿಜೆಪಿಯಲ್ಲಿ ಅಸಮಾಧಾನ ಗೊಂದಲಗಳು ಇರುವುದು ಬಿಜೆಪಿಯಲ್ಲಿ ನಮ್ಮಲ್ಲಿ ಅಲ್ಲ ಎಂದು ಹೇಳಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights