Heatwave : ಕರೋನಾ ಆಯ್ತು, ಇಗ ಬಿಸಿಲಿನ ಕಂಟಕ ಸುಡುತ್ತಿದೆ ಉತ್ತರ ಕರ್ನಾಟಕ…!

ಕೊರೋನಾ ಬೆನ್ನಿಗೇ  ಉತ್ತರ ಕರ್ನಾಟಕ ಜನರಿಗೆ ರಣ ಬಿಸಿಲಿನ ಕಂಟಕ ಶುರುವಾಗಿದೆ… ಉತ್ತರ ಕರ್ನಾಟಕ ಅಕ್ಷರ ಸಹ ಸುಡುತ್ತಿದೆ .. ಸರಾಸರಿಗಿಂತ 3 ಡಿಗ್ರಿ ತಾಪಮಾನ ಏರಿಕೆಯಾಗಿದ್ದು ಈ ಭಾಗದಲ್ಲಿ ಜನ ಹೈರಾನಾಗಿದ್ದಾರೆ.

ಕೊರೋನಾ ಆತಂಕ, ಮುಂಗಾರು ವಿಳಂಬದ ನಡುವೆಯೇ ಕರ್ನಾಟಕಕ್ಕೆ ಬಿಸಿಲಿನ ಕಂಟಕ ಎದುರಾಗಿದೆ. ಬಿಸಿಲಿನ ಝಳ ದಿನೇದಿನೆ ಏರುತ್ತಿದ್ದು ರಾಜ್ಯ ಅಕ್ಷರಶಃ ಸುಡುತ್ತಿದೆ. ಅದರಲ್ಲಿರೂ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಬಿಸಿಲಿನ ತಾಪ ಮೇರೆ ಮೀರಿದೆ.

ದಕ್ಷಿಣ ಒಳನಾಡು, ಮಲೆನಾಡಿನ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ರಾಜ್ಯದಲ್ಲಿ ಬಿಸಿಲಿನ ತಾಪ ತೀವ್ರ ಪ್ರಮಾಣದಲ್ಲಿ ಏರಿಕೆ ಕಂಡಿದ್ದು ಜನರ ಬವಣೆಯನ್ನು ಹೆಚ್ಚಿಸಿದೆ. ಇನ್ನು ಕಲಬುರ್ಗಿ, ರಾಯಚೂರು, ಕೊಪ್ಪಳ, ಬೀದರ್, ಯಾದಗಿರಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಬೆಳಗಾವಿ ಮುಂತಾದ ಜಿಲ್ಲೆಗಳಲ್ಲಿ ಬಿಸಿಲಿನ ತಾಂಡವ ಅಂಕೆ ಮೀರಿದೆ.

ಸದ್ಯದ ಪರಿಸ್ಥಿತಿಯಲ್ಲಿ ಮಳೆಯಾಗುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಹವಾಮಾನ ಇಲಾಖೆಯು ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ದಿನ ಜನ ಬಿಸಿಲಿನ ಅಟಾಟೋಪವನ್ನು ಸಹಿಸಿಕೊಳ್ಳಲೇ ಬೇಕಾಗಿದೆ. ಇದೇ ರೀತಿಯಲ್ಲಿ ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರಗಳಲ್ಲಿ ಸಹ ಬಿಸಿಲಿನ ರಣ ಕೇಕೆ ಜೋರಾಗಿದ್ದು ಜನರ ಬದುಕು ಹೈರಾಣಾಗಿದೆ.

ಹವಾಮಾನ ಇಲಾಖೆಯ ಹೇಳೀಕೆಯ ಪ್ರಕಾರ ಕೇವಲ ಒಂದು ವಾರದ ಅವಧಿಯಲ್ಲಿ ರಾಜ್ಯದಲ್ಲಿ ತಾಪಮಾನ ಸರಾಸರಿಗಿಂತ ಸುಮಾರು 3 ಡಿಗ್ರಿಯಷ್ಟು ಹೆಚ್ಚಳವಾಗಿದೆ. ಈ ಜಿಲ್ಲೆಗಳಲ್ಲಿ ಬಹುತೇಕ ಕಡೆ ಈ ಬಾರಿ ಬಿಸಲಿನ ತಾಪ ಕಳೆದ ಕೆಲವು ವರ್ಷಗಳ ದಾಖಲೆಯನ್ನು ಅಳಿಸಿಹಾಕಿದೆ. ಅದರಲ್ಲಿಯೂ ವಿಜಯಪುರದಲ್ಲಂತೂ ತಾಪಮಾನ 45 ಡಿಗ್ರಿ ದಾಟಿದೆ.

ಮುಂದಿನ ಕೆಲವು ದಿನಗಳ ಮಟ್ಟಿಗೆ ಬಿಸಿಲಿನ ತಾಪ ಕಡಿಮೆಯಾಗುವ ಯಾವುದೇ ಲಕ್ಷಣಗಳು ಇಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಈಗಾಗಲೇ ಉಷ್ಣ ಮಾರುತ ಬೀಸುತ್ತಿದ್ದು ತೀವ್ರ ಕಟ್ಟೆಚ್ಚರ ಘೋಷಿಸಲಾಗಿದೆ. ರಾಜಾಸ್ಥಾನ, ಉತ್ತರ ಪ್ರದೇಶ, ತೆಲಂಗಾಣ, ಹರ್‍ಯಾಣ, ಮಧ್ಯ ಪ್ರದೇಶದ ಹಲವೆಡೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಈ ಮಧ್ಯೆ ಜೂನ್ ಮುಂಗಾರು ಪ್ರವೇಶ ನಾಲ್ಕೈದು ದಿನ ತಡವಾಗಲಿದ್ದು, ಇದು ತಾಪಮಾನದ ಮೇಲೂ ಪರಿಣಾಮ ಬೀರುತ್ತದೆ. ಈ ಬಾರಿ ಮುಂಗಾರು ಸಾಧಾರಣವಾಗಿ ಇರಲಿದೆ ಎಂದು ಹವಾಮಾನ ಇಲಾಖೆಯು ನಿರೀಕ್ಷಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights