ಒಲಂಪಿಕ್‌ ತರಬೇತಿಗೆ ಹಣವಿಲ್ಲದೆ ಬಿಎಂಡಬ್ಲ್ಯೂ ಕಾರು ಮಾರಲಿದ್ದಾರೆ ಭಾರತೀಯ ಓಟಗಾರ್ತಿ ದ್ಯುತ್‌ ಚಾಂದ್‌!

ಕೊರೊನಾ ವೈರಸ್‌ನ ಬಿಡಿ ಕ್ರೀಡಾ ಕ್ಷೇತ್ರಕ್ಕೂ ತಟ್ಟಿದೆ. ಕಳದ ಮಾರ್ಚ್‌ ಅಂತ್ಯದಿಂದ ಇಲ್ಲಿಯವರೆಗೆ ಎಲ್ಲಾ ರೀತಿಯ ಕ್ರೀಡೆಗಳಿಗೂ ರೆಡ್‌ ಸಿಗ್ನಲ್‌ ನೀಡಲಾಗಿದೆ. ಈ ಮಧ್ಯೆ, ಭಾರತದ ಅಥ್ಲೆಟಿಕ್‌ ಓಟಗಾರ್ತಿ ದ್ಯುತಿ ಚಾಂದ್‌ ತಮ್ಮ ತರಬೇತಿಗೆ ಹಣವಿಲ್ಲದೆ. ತಮ್ಮ ಬಿಎಂಡಬ್ಲ್ಯೂ ಕಾರನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.

ಕೊರೊನಾ ಸೋಂಕು ಎಲ್ಲೆಡೆ ವ್ಯಾಪಿಸಿರುವುದರಿಂದಾಗಿ ಪ್ರಾಯೋಜಕರು ಸಿಗುತ್ತಿಲ್ಲ. ಆದ್ದರಿಂದ ತನ್ನ ತರಬೇತಿಗೆ ಸಾಕಷ್ಟು ಹಣಬೇಕಾಗಿದೆ. ಆದರೆ, ತಮ್ಮ ಬಳಿ ಅಷ್ಟು ಹಣವಿಲ್ಲದ ಕಾರಣ ಕಾರನ್ನು ಮಾರಾಟ ಮಾಡಲು ಮುಂದಾಗಿರುವುದಾಗಿ ದ್ಯುತಿ ಚಾಂದ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದಾರೆ.

ಟೋಕಿಯೋದಲ್ಲಿ ನಡೆಯುತ್ತಿರುವ ಒಲಂಪಿಕ್ಸ್‌ಗೆ ಅಭ್ಯಾಸ ನಡೆಸುತ್ತಿರುವ ದ್ಯುತಿ ಚಾಂದ್‌, ಅವರ ತರಬೇತಿ ಮತ್ತು ಆಹಾರ ವೆಚ್ಚಗಳನ್ನು ಪೂರೈಸಲು ಹಣದ ಅಗತ್ಯವಿದ್ದು, ಅದಕ್ಕಾಗಿ 2015ರಲ್ಲಿ ಅವರು ಖರೀಸಿದ್ದ 30 ಲಕ್ಷ ಬೆಲೆಯ ಬಿಎಂಡಬ್ಲ್ಯೂ-3 ಕಾರನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ.

ದ್ಯುತಿ ಚಾಂದ್‌ 2015ರ ಏಷ್ಯನ್‌ ಕ್ರೀಡಾಕೂಟದಲ್ಲಿ ಗಳಿಸಿದ ಸಾಧನೆಗಾಗಿ ಒಡಿಶಾ ಮುಖ್ಯಮಂತ್ರಿ ನವೀಶ್‌ ಪಟ್ನಾಯಕ್‌ ಅವರಿಗೆ 3 ಕೋಟಿ ರೂಗಳ ನಗದು ಬಹುಮಾನ ನೀಡಿದ್ದರು. ಆ ಹಣದಲ್ಲಿ ಮನೆ ನಿರ್ಮಿಸಿದ್ದ ದ್ಯುತಿ ಚಾಂದ್‌ ಬಿಎಂಡಬ್ಲ್ಯೂ ಕಾರನ್ನೂ ಖರೀಸಿದ್ದರು.

Indian Sprinter Dutee Chand to sell her BMW to continue training ...

ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ಸ್‌ಗೆ ತರಬೇತಿ ಪಡೆಯಲು ಸರ್ಕಾರ ಅವರಿಗೆ 50 ಲಕ್ಷ ರೂ.ಗಳನ್ನು ಮಂಜೂರು ಮಾಡಿತ್ತು, ಆದರೆ ತರಬೇತುದಾರ, ದೈಹಿಕ ಚಿಕಿತ್ಸಕರು, ಆಹಾರ ತಜ್ಞರು ಮತ್ತು ಇತರರ ವೇತನಕ್ಕಾಗಿ ಅವರಿಗೆ ತಿಂಗಳಿಗೆ 5 ಲಕ್ಷ ರೂ ವೆಚ್ಚ ತಗುಲುತ್ತಿದ್ದು, 50 ಲಕ್ಷ ರೂಗಳು ಸಾಕಾಗುತ್ತಿಲ್ಲವಾಗಿದ್ದು, ಉಳಿದ ಹಣಕ್ಕಾಗಿ ಕಾರನ್ನು ಮಾರಲು ನಿರ್ಧರಿಸಿದ್ದಾರೆ.

ಇದರ ಮಧ್ಯೆ, ಕೊರೊನಾ ಸೋಂಕಿನ ಕಾರಣಕ್ಕಾಗಿ ಕ್ರೀಡಾಕೂಟವನ್ನು ಜುಲೈ 2021 ಕ್ಕೆ ಮುಂದೂಡಲಾಗಿದೆ. “ನನ್ನ ಫಿಟ್ನೆಸ್ ವೆಚ್ಚ ಮತ್ತು ಜರ್ಮನಿಯಲ್ಲಿ ತರಬೇತಿಗಾಗಿ ನನಗೆ ಹಣ ಬೇಕಾಗಿದ್ದು, ಪ್ರಯೋಜಕರು ಸಿಗದ ಕಾರಣ, ನನ್ನ ಐಷಾರಾಮಿ ಕಾರನ್ನು ಮಾರಾಟ ಮಾಡಲು ನಾನು ನಿರ್ಧರಿಸಿದೆ” ಎಂದು ಅವರು ಹೇಳಿದ್ದಾರೆ.

ಅವರ ಕೆಲವು ಅಭಿಮಾನಿಗಳು ಸರ್ಕಾರದ ನೆರವು ಕೇಳಲು ಸೂಚಿಸಿದ್ದು, ಆ ವಕಾಶವನ್ನೂ ಅವರು ಎದುರು ನೋಡುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights