“ಪಕ್ಷದಲ್ಲಿನ ಅತ್ಯಾಚಾರಿಗಳಿಗೆ ಟಿಕೆಟ್ ನೀಡಲಾಗಿದೆ” ಎಂದ ಕಾಂಗ್ರೆಸ್ ಕಾರ್ಯಕರ್ತೆಗೆ ಥಳಿತ…!

ಆಂತರಿಕ ಸಭೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಡಿಯೋರಿಯಾದಿಂದ ನಾಮನಿರ್ದೇಶನ ಮಾಡಲು ಆಕ್ಷೇಪಿಸಿ ಅವರು ಅತ್ಯಾಚಾರ ಪ್ರಕರಣದ ಆರೋಪಿ ಎಂದು ಹೇಳಿದ ಉತ್ತರ ಪ್ರದೇಶದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯನ್ನು ಥಳಿಸಲಾಗಿದೆ.

“ಒಂದು ಕಡೆ, ನಮ್ಮ ಪಕ್ಷದ ನಾಯಕರು ಹತ್ರಾಸ್ ಮಹಿಳೆಗೆ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ, ಮತ್ತೊಂದೆಡೆ, ಅತ್ಯಾಚಾರಿಗಳಿಗೆ ಪಕ್ಷದ ಟಿಕೆಟ್ ನೀಡಲಾಗುತ್ತಿದೆ. ಇದು ತಪ್ಪು ನಿರ್ಧಾರ. ಇದು ನಮ್ಮ ಪಕ್ಷದ ಚಿತ್ರಣವನ್ನು ಕೆಡಿಸುತ್ತದೆ” ಎಂದು ಕಾಂಗ್ರೆಸ್ ಕಾರ್ಯಕರ್ತೆ ತಾರಾ ದೇವಿ ಯಾದವ್ ದೂರಿದ್ದಾರೆ.

ವ್ಯಾಪಕವಾಗಿ ಪ್ರಸಾರವಾಗುತ್ತಿರುವ ಸೆಲ್ ಫೋನ್ ವೀಡಿಯೊಗಳಲ್ಲಿ ತಾರಾ ದೇವಿಯನ್ನು ಪುರುಷರ ಗುಂಪಿನಿಂದ ಹೊಡೆದು ತಳ್ಳಲಾಗಿದೆ ಎಂದು ತೋರಿಸುತ್ತದೆ. ಕೊನೆಗೆ ಅವಳನ್ನು ಇಬ್ಬರು ಕರೆದೊಯ್ದು ರಕ್ಷಿಸಿದ್ದಾರೆ. ಪೊಲೀಸರಿಗೆ ನೀಡಿದ ದೂರಿನಲ್ಲಿ, ತಾರಾ ದೇವಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮೇಂದ್ರ ಸಿಂಗ್, ಉಪಾಧ್ಯಕ್ಷ ಅಜಯ್ ಸಿಂಗ್ ಮತ್ತು ಇತರ ಇಬ್ಬರನ್ನು ದಾಳಿಗೆ ಹೆಸರಿಸಿದ್ದಾರೆ. ಅವರು ತಮ್ಮನ್ನು ನಿಂದಿಸಿದ್ದಾರೆ ಮತ್ತು ಕಿರುಕುಳ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಉಪಚುನಾವಣೆ ಸಭೆ ಟೌನ್‌ಹಾಲ್ ಡಿಯೋರಿಯಾದಲ್ಲಿ ನಡೆಯುವ ವೇಳೆ ಈ ಘಟನೆ ನಡೆದಿದೆ. ಅಲ್ಲಿ ಬಿಜೆಪಿ ಶಾಸಕ ಜನ್ಮೇಜಯ್ ಸಿಂಗ್ ಅವರ ನಿಧನದ ನಂತರ ಖಾಲಿ ಉಳಿದಿದ್ದ ಸ್ಥಾನಕ್ಕೆ ಕಾಂಗ್ರೆಸ್ ಮುಕುಂದ್ ಭಾಸ್ಕರ್ ಅವರನ್ನು ಅಭ್ಯರ್ಥಿಯಾಗಿ ಹೆಸರಿಸಲಾಯಿತು.

ಈ ವೇಳೆ ಸಭೆಗೆ ಆಗಮಿಸಿದ ತಾರಾ ದೇವಿ ರಾಷ್ಟ್ರೀಯ ಕಾರ್ಯದರ್ಶಿ ಸಚಿನ್ ನಾಯಕ್ ಅವರ ಮೇಲೆ ಪುಷ್ಪಗುಚ್ ಎಸೆದಿದ್ದಾರೆ ಎಂಬ ಆರೋಪಗಳು ಕೇಳಿಬಂದವು. ಶೀಘ್ರದಲ್ಲೇ ಜಗಳ ಪ್ರಾರಂಭವಾಯಿತು, ಆ ಸಮಯದಲ್ಲಿ ಮಹಿಳೆಗೆ ಹೊಡೆಯಲಾಗಿದೆ.

“ಪಕ್ಷವು ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕೆಂದು ನಾವು ಬಯಸಿದ್ದೇವೆ” ಎಂದು ತಾರಾ ದೇವಿ ಮಾದ್ಯಮಕ್ಕೆ ಹೇಳಿದ್ದಾರೆ. “ನಾನು ಸಚಿನ್ ನಾಯಕ್ ಅವರನ್ನು ಹೊಡೆಯಲಿಲ್ಲ. ಮುಕುಂದ್ ಭಾಸ್ಕರ್ ಟಿಕೆಟ್ ಏಕೆ ನೀಡಲಾಯಿತು ಎಂದು ಕೇಳಲು ನಾನು ಬಯಸಿದ್ದೆ ಮತ್ತು ನಂತರ ನನ್ನನ್ನು ಥಳಿಸಲಾಯಿತು.” ಎಂದು ಆರೋಪಿಸಿ ದೂರು ನೀಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights