ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ 25,000 ಪರಿಹಾರ: ಸಿಎಂ ಯಡಿಯೂರಪ್ಪ

 

ಕಳೆದ ಹಲವು ದಿನಗಳಿಂದ ಬೆಂಗಳೂರು ನಗರದಲ್ಲಿ ಭಾರೀ ಮೆಳೆಯಾಗುತ್ತಿದ್ದು, ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡವರಿಗೆ, ಮನೆ ಕಳೆದುಕೊಂಡವರಿಗೆ ಪರಿಹಾರ ಹಾಗೂ ಆಹಾರ ಪದಾರ್ಥಗಳ ವಿತರಣೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಮಳೆಯಿಂದ ಹಾನಿಗೊಳಗಾದ ಪ್ರತೀ ಕುಟುಂಬಕ್ಕೆ ತಲಾ 25 ಸಾವಿರ ನೀಡುವುದಾಗಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ‌ನಿನ್ನೆ ಸುರಿದ ಭಾರಿ ಮಳೆಯ ಹಿನ್ನಲೆ, ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಅವರೊಂದಿಗೆ ಸಭೆ ನಡೆಸಿದ್ದು, ನೀರು ನುಗ್ಗಿದ ಪ್ರದೇಶಗಳಿಗೆ ಭೇಟಿ ಮಾಡಿ ಪರಿಸ್ಥಿತಿ ಅವಲೋಕಿಸಬೇಕು. ಸ್ಥಳದಲ್ಲಿಯೇ ಹಾನಿಗೊಳಗಾದವರಿಗೆ 25 ಸಾವಿರ ಚೆಕ್‌ ನೀಡಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.

ಎಲ್ಲೆಲ್ಲಿ ಮಳೆ ಸುರಿದಿದೆ, ಅಲ್ಲಿ ಮಳೆಯಿಂದ ಯಾವ ರೀತಿ ಅವಾಂತರ ಸೃಷ್ಟಿ ಯಾಗಿದೆ, ಮಳೆಯಿಂದ ಹಾನಿಯಾಗಿರುವ ಪ್ರಮಾಣ, ನಿರಾಶ್ರಿತರ ಪರಿಸ್ಥಿತಿ, ನಿರಾಶ್ರಿತರಿಗೆ ಒದಗಿಸುವ ಸೌಲಭ್ಯ ಹಾಗೂ ಮುಂದೆ ಏನು ಕ್ರಮ ಮಾಡಬೇಕು ಎಂಬುದರ ಬಗ್ಗೆ ಸಿಎಂ ಅಧಿಕಾರಿಗಳು ಮತ್ತು ಸಚಿವರ ಜೊತೆ ಸಿಎಂ ಚರ್ಚೆ ನಡೆಸಿದ್ದಾರೆ.

ಸಭೆಯಲ್ಲಿ ಕಂದಾಯ ಸಚಿವ ಆರ್ ಅಶೋಕ್, ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಭಾಗಿಯಾಗಿದ್ದರು.


ಇದನ್ನೂ ಓದಿ: ನನ್ನ ಹೋರಾಟ ನಿತೀಶ್ ವಿರುದ್ಧವಷ್ಟೇ; ಕೊನೆ ಉಸಿರಿರುವವರೆಗೂ ಮೋದಿ ಜೊತೆಗಿರುತ್ತೇನೆ: ಚಿರಾಗ್ ಪಾಸ್ವಾನ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights