ಸಿನಿಮಾಕ್ಕಾಗಿ ಬಿಟ್ಟ ಕೂದಲನ್ನು ಒಂದೊಳ್ಳೆ ಕೆಲಸಕ್ಕಾಗಿ ಕತ್ತರಿಸಿದ ಆ್ಯಕ್ಷನ್ ಪ್ರಿನ್ಸ್…
ಪೊಗರು ಸಿನಿಮಾಕ್ಕಾಗಿ ಆ್ಯಕ್ಷನ್ ಪ್ರಿನ್ಸ್ ಬಿಟ್ಟ ಉದ್ದ ಕೂದಲು ಒಂದೊಳ್ಳೆ ಕೆಲಸಕ್ಕೆ ಬಳಸಿರುವುದು ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ. ಹುಡಿಗಿಯರ ಗಮನ ಸೆಳೆದಿದ್ದ ಧ್ರುವ ಕೂದಲಿಗೆ ಸದ್ಯ ಕತ್ತರಿ ಬಿದ್ದಿದೆ. ಮಾತ್ರವಲ್ಲದೇ ಆ್ಯಕ್ಷನ್ ಪ್ರಿನ್ಸ್ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಧ್ರುವಾ ಸರ್ಜಾ ಕೂದಲಿಗೆ ಕತ್ತರಿ ಹಾಕಿರುವ ಕಾರಣ ಕೇಳಿ ಅವರ ಅಭಿಮಾನಿಗಳು ದಿಲ್ ಖುಷ್ ಆಗಿದೆ.
ಕ್ಯಾನ್ಸರ್ ನಿಂದ ಬಳಲುತ್ತಿರುವ 15 ವರ್ಷ ಒಳಗಿರುವ ಮಕ್ಕಳಿಗೆ ಧ್ರುವ ತಮ್ಮ ಕೂದಲನ್ನು ದಾನ ಮಾಡಿದ್ದಾರೆ. ಸಾಮಾನ್ಯವಾಗಿ ಕ್ಯಾನ್ಸರ್ ರೋಗಿಗಳಿಗೆ ಕೂದಲು ಉದುರುತ್ತವೆ. ಅಂಥವರು ವಿಗ್ ಹಾಕಿಕೊಳ್ಳುತ್ತಾರೆ. ಹೀಗೆ ವಿಗ್ ತಯಾರಿಸಲೆಂದು ಧ್ರುವ ಕೂದಲು ಕೊಟ್ಟಿದ್ದಾರೆ. ಈ ಬಗ್ಗೆ ತಾವೇ ಹೇಳಿಕೊಂಡಿರುವ ಧ್ರುವ ಹೊಸ ಲುಕ್ ಬಗ್ಗೆ ರಿವೀಲ್ ಮಾಡಿದ್ದಾರೆ.
ನಂದಕಿಶೋರ್ ಬರೆದಿರುವ ಪೊಗರು ಸಿನಿಮಾದ ಬಾಸು ಕರಾಬು ಸಾಂಗ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಡೈಲಾಗ್ ಕೂಡ ಸಖತ್ ಸದ್ದು ಮಾಡುತ್ತಿದೆ.ಇವರ ಲುಕ್ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಡೈಲಾಗ್ ನಲ್ಲಿ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಫೆವರೇಟ್ ಆದ ಧ್ರುವ ಯೂಟ್ಯೂಬ್ ನಲ್ಲಿ ಚಿತ್ರದ ಟ್ರೈಲರ್ ರಿಲೀಸ್ ಗೂ ಮೊದಲೇ ಧೂಳೆಬ್ಬಿಸಿದ್ದೂ ಎರಡೂವರೆ ಕೋಟಿಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.