ಹಿಂಸಾಚಾರಕ್ಕೆ ಅಮಿತ್‌ ಶಾ ಹೊಣೆ; ರೈತರು ಒಂದಿಂಚೂ ಕದಲಬೇಡಿ – ನಿಮ್ಮೊಂದಿಗೆ ನಾವಿದ್ದೇವೆ: ರಾಹುಲ್‌ಗಾಂಧಿ

ಗಣರಾಜ್ಯೋತ್ಸವ ದಿನದಂದು ನಡೆದ ಘಟನೆಯನ್ನು ನೆಪವಾಗಿಟ್ಟುಕೊಂಡು ಉತ್ತರ ಪ್ರದೇಶ ಸರ್ಕಾರ, ಗಾಝಿಯಾಪುರ ಗಡಿಯಲ್ಲಿರುವ ರೈತರನ್ನು ತೆರವುಗೊಳಿಸಲು ಯತ್ನಿಸುತ್ತಿದೆ. ಸರ್ಕಾರದ ನಡೆಗೆ ವಿರೋಧ ವ್ಯಕ್ತಪಡಿಸಿದರು ಕಾಂಗ್ರೆಸ್‌ ಮುಖಂಡ ರಾಹುಲ್‌ಗಾಂಧಿ, ರೈತರು ಒಂದಿಂಚೂ ಕದಲ ಬೇಡಿ, ನಿಮ್ಮ ಜೊತೆಗೆ ನಾವಿದ್ದೇವೆ ಎಂದು ರೈತರಿಗೆ ತಿಳಿಸಿದ್ದಾರೆ.

ಸರ್ಕಾರದ ಧೋರಣೆಗಳನ್ನು ಪ್ರಶ್ನಿಸಿರುವ ರಾಹುಲ್‌ಗಾಂಧಿ, ಗಣರಾಜೋತ್ಸವ ದಿನ ಕೆಂಪುಕೋಟೆ ಪ್ರವೇಶಿಸಲು ಜನರಿಗೆ ಏಕೆ ಅವಕಾಶ ನೀಡಲಾಯಿತು? ಗೃಹ ಸಚಿವರು ಅದನ್ನು ಏಕೆ ತಡೆಯಲಿಲ್ಲ? ಕೆಂಪುಕೋಟೆಗೆ ನುಗ್ಗಲು ಹೊರಗಿನವರನ್ನು ಅನುಮತಿಸಿದ್ದು ಯಾರೆಂದು ಗೃಹ ಸಚಿವರೇ ಸ್ಪಷ್ಟಪಡಿಸಬೇಕಾಗಿದೆ. ಇದಕ್ಕೆ ಅವರೇ ಉತ್ತರಿಸಿಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ರೈತರ ಮೇಲೆ ದಾಳಿಗಳು ನಡೆಯುವುತ್ತಿವೆ. ಅವರನ್ನು ತೆರವುಗೊಳಿಸುವ ಯತ್ನ ನಡೆದಿದೆ. ರೈತರು ಯಾವುದೇ ಕಾರಣಕ್ಕೂ ಪ್ರತಿಭಟನಾ ಸ್ಥಳದಿಂದ ಕಲದಬೇಕು. ನಿಮ್ಮ ಜೊತೆಗೆ ನಾವಿದ್ದೇವೆ ಎಂದು ರಾಹುಲ್‌ಗಾಂಧಿ ಭರವಸೆ ನೀಡಿದ್ದಾರೆ.

ಕೃಷಿ ಕಾಯ್ದೆಗಳು ರೈತ ವಿರೋಧಿಯಾಗಿರುವುದರಿಂದಲೇ ಲಕ್ಷಾಂತರ ಜನರು ಬಂದು ಪ್ರತಿಭಟನೆ ಮಾಡುತ್ತಿದ್ದಾರೆ. ಕಾರಣವಿಲ್ಲದೆ ಈ ಪ್ರಮಾಣದ ಸಂಖ್ಯೆಯಲ್ಲಿ ಬಂದು ಪ್ರತಿಭಟನೆ ಮಾಡುವುದಿಲ್ಲ. ಕೃಷಿ ಕಾಯ್ದೆಯನ್ನು ಹಿಂದೆಗೆದುಕೊಳ್ಳಬೇಕು. ಕೃಷಿ ನೀತಿಗಳನ್ನು ಕಸದ ಬುಟ್ಟಿಗೆ ಎಸೆಯಬೇಕು. ಆಗಲೇ ಈ ಗೊಂದಲಗಳಿಗೆ ಪರಿಹಾರ ಸಿಗುವುದು ಎಂದು ಅವರುಹೇಳಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಹಿಂಸಾಚಾರ ಮಾಡಿದವರು, ವೇಷ ಮರೆಸಿದ್ದ BJPಗರು: ರಾಕೇಶ್ ಟಿಕಾಯತ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights