ಮೋದಿ ಉದ್ಯೋಗ ಕೊಡಿ; ಇಲ್ಲ ಜಾಗ ಖಾಲಿ ಮಾಡಿ: ಕೇಂದ್ರ ಸರ್ಕಾರದ ವಿರುದ್ದ ಟ್ವಿಟರ್‌ ಅಭಿಯಾನ‌!

ದೇಶದಲ್ಲಿ ನಿರುದ್ಯೋಗದ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಲೇ. ಅದರಲ್ಲೂ ಲಾಕ್‌ಡೌನ್‌ ನಂತರ ಭಾರೀ ಪ್ರಮಾಣದ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಲಾಕ್‌ಡೌನ್‌ ಮುಗಿದು ಹಲವಾರು ತಿಂಗಳುಗಳೇ ಕಳೆದರೂ ಉದ್ಯೋಗದ ಬಾಗಿಲುಗಳು ಮುಚ್ಚಿವೆ. ಹೀಗಾಗಿ ಭಾರತದ ಯುವಜನರು ನಿರುದ್ಯೋಗದ ವಿರುದ್ಧ ದನಿ ಎತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ಟ್ವಿಟರ್‌ ದಾಳಿ ನಡೆಸಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ಮೋದಿ ಉದ್ಯೋಗ ಕೊಡಿ (#modi_job_do, #modi_rojgar_do) ಎಂಬ ಹ್ಯಾಷ್‌ ಟ್ಯಾಗ್‌ ಟ್ರೆಂಡ್‌ ಆಗುತ್ತಿದೆ. ಇದೂವರೆಗೆ 60 ಲಕ್ಷಕ್ಕೂ ಹೆಚ್ಚು ಟ್ವೀಟ್‌ಗಳನ್ನು ಮಾಡಲಾಗಿದ್ದು, ಈ ಹ್ಯಾಷ್‌ ಟ್ಯಾಗ್ ಭಾರತದಲ್ಲಿ ನಂಬರ್‌ ಒನ್‌ ಟ್ರೆಂಡಿಂಗ್‌ನಲ್ಲಿದ್ದರೆ, ವಿಶ್ವಮಟ್ಟದಲ್ಲಿ ಎರಡನೇ ಸ್ಥಾನದಲ್ಲಿ ಟ್ರೆಂಡ್‌ ಆಗುತ್ತಿದೆ.

ಎಸ್‌ಎಸ್‌ಸಿ ಪರೀಕ್ಷೆಯನ್ನು ಸಮಯಕ್ಕೆ ಸರಿಯಾಗಿ ಪಾರದರ್ಶಕವಾಗಿ ನಡೆಸಬೇಕು ಮತ್ತು ಯುವಜನರಿಗೆ ಉದ್ಯೋಗ ಕಲ್ಪಿಸಬೇಕು ಎಂಬ ಹಿನ್ನೆಲೆಯಲ್ಲಿ ಈ ಟ್ವಿಟರ್ ಟ್ರೆಂಡ್ ಆರಂಭವಾಗಿದೆ.

ನರೇಂದ್ರ ಮೋದಿಯವರು 2014ರಲ್ಲಿ ಪ್ರಧಾನಿಯಾಗುವ ಮೊದಲು ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ಪ್ರಧಾನಿಯಾದ ನಂತರ ಉದ್ಯೋಗ ಸೃಷ್ಟಿಯಾಗುವುದು ಇರಲಿ, ಇರುವ ಉದ್ಯೋಗಗಳೇ ಕಾಣೆಯಾಗುತ್ತಿವೆ. ಹಲವು ಸರ್ಕಾರೀ ಸಂಸ್ಥೆಗಳು ಖಾಸಗಿಯವರ ಪಾಲಾಗುತ್ತಾ ಬೃಹತ್ ಉದ್ಯೋಗ ನಷ್ಟ ಸಂಭವಿಸುತ್ತಿದ್ದು, ಇದಕ್ಕೆ ಮೋದಿಯವರ ಕೆಟ್ಟ ನೀತಿಗಳೇ ಕಾರಣ ಎಂದು ಯುವಜನರು ದೂರಿದ್ದಾರೆ.

ವರ್ಷಕ್ಕೆ ಕೋಟಿ ಉದ್ಯೋಗಗಳು ಇಲ್ಲ,
15 ಲಕ್ಷ ಇಲ್ಲ,
100 ಸ್ಮಾರ್ಟ್ ಸಿಟೀಸ್ ಇಲ್ಲ,
ಬುಲೆಟ್ ರೈಲು ಇಲ್ಲ,
ರೈತರ ಆದಾಯ ಡಬಲ್ ಇಲ್ಲ,
ಭಯೋತ್ಪಾದನೆಯನ್ನು ತೆಗೆದುಹಾಕುವುದು ಇಲ್ಲ,
ಆದರೆ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಮಾತ್ರ ಆಗಿದೆ ಎಂದು ಗೌರವ್ ಪಾಂಡಿ ವ್ಯಂಗ್ಯವಾಡಿದ್ದಾರೆ.

ಮೋದಿ ಸರ್ಕಾರ ನಮ್ಮ ರಾಷ್ಟ್ರದ ಆರ್ಥಿಕ ಬೆಳವಣಿಗೆಯನ್ನು ನಾಶಪಡಿಸಿದೆ. ಲಕ್ಷಾಂತರ ಯುವಜನರು ನಿರುದ್ಯೋಗಿಗಳಾಗಿದ್ದಾರೆ. ಮೋದಿಯವರು 2 ಕೋಟಿ ಉದ್ಯೋಗಗಳ ಭರವಸೆ ನೀಡಿದ್ದರು. ಆದರೆ ಉದ್ಯೋಗಗಳು ಎಲ್ಲಿವೆ? ಎಂದು ಮಹಮ್ಮದ್ ಕಬೀರ್ ಅಹ್ಮದ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಈ 45 ವರ್ಷಗಳಲ್ಲೆ ಕಂಡು ಕೇಳರಿಯದಂತಹ ನಿರುದ್ಯೋಗ ಭಾರತದಲ್ಲಿ ಇಂದು ತಲೆಎತ್ತಿದೆ. ಈ ಕುರಿತು ಗಂಭೀರವಾಗಿ ಯೋಚಿಸಬೇಕಾದ ಮೋದಿಯವರು ಖಾಸಗಿಯವರನ್ನು ಉತ್ತೇಜಿಸುವ ಮಾತುಗಳನ್ನಾಡುತ್ತಿದ್ದಾರೆ. ಅಲ್ಲದೇ ಕೆಲಸಕ್ಕೆ ಬಾರದ ಚರ್ಚೆಯಲ್ಲಿ ಮುಳುಗಿದ್ದಾರೆ ಎಂದು ಯುವಜನರು ಕಿಡಿಕಾರಿದ್ದಾರೆ.

ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಉದ್ಯೋಗಬೇಕು, ಕೌಶಲ್ಯಬೇಕು ಎಂದು ಆಗ್ರಹಿಸಿ ಟ್ವೀಟ್ ಮಾಡಿರುವುದನ್ನು ನೆನಪಿಸಿರುವ ಯುವಜನರು ಹೀಗೇಕೆ ಉದ್ಯೋಗ ಕೊಡುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಮೋದಿಗೆ ವಿದೇಶ ಸುತ್ತಲು ಸಮಯವಿದೆ; ರೈತರ ಭೇಟಿ ಮಾಡಲು ಸಮಯವಿಲ್ಲ: ಪ್ರಿಯಾಂಕಾ ಗಾಂಧಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಮೋದಿ ಉದ್ಯೋಗ ಕೊಡಿ; ಇಲ್ಲ ಜಾಗ ಖಾಲಿ ಮಾಡಿ: ಕೇಂದ್ರ ಸರ್ಕಾರದ ವಿರುದ್ದ ಟ್ವಿಟರ್‌ ಅಭಿಯಾನ‌!

  • February 25, 2021 at 3:16 pm
    Permalink

    ಹುಟ್ಟಿಸಿದಅಪ್ಪಪ್ಪನನ್ನ ಕೇಳುವುದು ಬಿಟ್ಟು ಇದೇನಿದು ವಿಚಿತ್ರ.

    Reply

Leave a Reply

Your email address will not be published.

Verified by MonsterInsights