ಹತಾಶೆಯ ಸಮಯ?: ಗೋಡ್ಸೆ ಬೆಂಬಲಿಗ ಬಾಬುಲಾಲ್ ಕಾಂಗ್ರೆಸ್‌ಗೆ ಸೇರ್ಪಡೆ!

ಮಹಾತ್ಮ ಗಾಂಧಿಯವರ ಹಂತಕ ನಾಥುರಾಮ್ ಗೋಡ್ಸೆ ಬೆಂಬಲಿಗ, ಹಿಂದೂ ಮಹಾಸಭಾ ಮಾಜಿ ಮುನ್ಸಿಪಲ್ ಕಾರ್ಪೋರೇಟರ್ ಬಾಬುಲಾಲ್ ಚೌರಾಸಿಯಾ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್ ನಾಥ್ ಅವರು ಚೌರಾಸಿಯಾ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ್ದಾರೆ.

ಗಾಂಧಿಯವರನ್ನು ಹತ್ಯೆ ಮಾಡಿದ್ದ ಗೋಡ್ಸೆ ನ್ಯಾಯಾಲಯದಲ್ಲಿ ಕೊನೆಯದಾಗಿ ನೀಡಿದ್ದ ಹೇಳಿಯನ್ನು ಒಂದು ಲಕ್ಷ ಜನರಿಗೆ ರವಾನಿವುದಾಗಿ ಘೋಷಿಸಿದ್ದ 15 ತಿಂಗಳ ಹಿಂದೆ ಘೋಷಿಸಿದ್ದ ಚೌರಾಸಿಯಾ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಿರುವುದು ಕಾಂಗ್ರೆಸ್‌ನ ಹತಾಷೆಯ ಸಮಯ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

ಹಲವಾರು ಚುನಾವಣೆಗಳನ್ನು ಸೋತಿರುವ ಕಾಂಗ್ರೆಸ್‌ ಹತಾಶೆಗೊಂಡಿದೆ. ಈ ಹಿನ್ನೆಲೆಯಲ್ಲಿ ಪಕ್ಷವನ್ನು ಮುನ್ನೆಲೆಗೆ ತರುವ ಉದ್ದೇಶದಿಂದ ಸಿದ್ದಾಂತಗಳನ್ನು ಗಾಳಿಗೆ ತೂರಿ ಗೋಡ್ಸೆ ಬೆಂಬಲಿಗರನ್ನೂ ಪಕ್ಷಕ್ಕೆ ಸೇರಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.

ಮಧ್ಯಪ್ರದೇಶ ಕಾಂಗ್ರೆಸ್‌ ಚೌರಾಸಿಯಾ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವುದಾಗಿ ಘೋಷಿಸಿದ್ದು, ಕಮಲ್‌ನಾಥ್‌ ಜೊತೆಗಿನ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಗ್ವಾಲಿಯರ್‌ನ ಹಿಂದೂ ಮಹಾಸಭಾ ಕಚೇರಿಯಲ್ಲಿ ಗೋಡ್ಸೆಗೆ ಮೀಸಲಾಗಿರುವ ಗ್ರಂಥಾಲಯವನ್ನು ಪ್ರಾರಂಭಿಸಿದ್ದರ ಬಗ್ಗೆ ವಾಗ್ದಾಳಿ ನಡೆಸಿದ್ದ ಕಮಲ್‌ನಾಥ್‌, ಇದೀಗ ಗೋಡ್ಸೆ ಬೆಂಬಲಿಗನನ್ನು ಪಕ್ಷಕ್ಕೆ ಸೇರಿಸಿಕೊಂಡಿರುವುದು ಟೀಕೆಗೆ ಕಾರಣವಾಗಿದೆ.

ಇದನ್ನೂ ಓದಿ: ವಿರೋಧಕ್ಕೆ ಮಣಿದ ಹಿಂದೂ ಮಹಾಸಭಾ; ಉದ್ಘಾಟನೆಯಾದ ಒಂದೇ ದಿನಕ್ಕೆ ‘ಗೋಡ್ಸೆ ಜ್ಞಾನ ಶಾಲೆ’ ಬಂದ್‌!

ರಾಜ್ಯದಲ್ಲಿ ಕಾಂಗ್ರೆಸ್‌ ಅಭಿವೃದ್ದಿಯ ಕೆಲಸಗಳನ್ನು ಮಾಡಿದೆ. ನಾನು ಹಿಂದಿನಿಂದಲೂ ಕಾಂಗ್ರೆಸ್‌ ಜೊತೆಗೆ ಒಡನಾಟ ಹೊಂದಿದ್ದೇನೆ. ಹಾಗಾಗಿ ಇಂದು ಕುಟುಂಬಕ್ಕೆ ಮರಳುತ್ತಿರುವಂತಿದೆ. ಗೋಡ್ಸೆ ವಿಚಾರದಲ್ಲಿ ಆಗ ನನಗೆ ಏನೆಂದು ತಿಳಿದಿರಲಿಲ್ಲ. ಅಂತಹ ಸಂದರ್ಭದಲ್ಲಿ, ಆ ವಿಚಾರದಲ್ಲಿ ನನ್ನನ್ನು ಮುಂಚೂಣಿಗೆ ತಳ್ಳಲಾಗಿತ್ತು. ನಾವು ಕಳೆದ ಎರಡು ವರ್ಷಗಳಿಂದ ಬಲಪಂಥೀಯ ಸಿದ್ದಾಂತದಿಂದ ಅಂತಹ ಕಾಯ್ದುಕೊಂಡಿದ್ದೇನೆ ಎಂದು ಚೌರಾಸಿಯಾ ಹೇಳಿದ್ದಾರೆ.

ಆದರೆ, ಚೌರಾಸಿಯಾ ಹೇಳಿಕೆಗಳನ್ನು ಖಂಡಿಸಿ ಅವರ ಹಲವಾರು ಸುದ್ದಿ ವರದಿಗಳು ಟ್ರೋಲ್ ಅಗುತ್ತಿವೆ. ಚೌರಾಸಿಯಾ ಅವರು 2016ರಲ್ಲಿ ಹುತಾತ್ಮ ನಾಥುರಾಮ್‌ ಗೋಡ್ಸೆ ದೇವಲಯವನ್ನು ಕಟ್ಟುವ ಹೇಳಿಕೆಗಳು, 2017ರಲ್ಲಿ ಹಿಂದೂ ಮಹಾಸಭಾ ಕಚೇರಿಯಲ್ಲಿ ಗೋಡ್ಸೆ ಪ್ರತಿಮೆಗೆ ನಮನ ಸಲ್ಲಿಸಿದ ಕಾರ್ಯಕ್ರಮದ ಸುದ್ದಿಗಳು, 2019ರಲ್ಲಿ ಗೋಡ್ಸೆಯನ್ನು ಗಲ್ಲಿಸೇರಿಸಿದ 70ನೇ ವ‍ರ್ಷಾಚರಣೆಯಂದು ಗೋಡ್ಸೆಯ ಕೊನೆ ಹೇಳಿಕೆಯನ್ನು ಜನರಿಗೆ ರವಾನಿಸುವುದಾಗಿ ಘೋಷಿಸಿದ್ದ ಸುದ್ದಿಗಳು ಟ್ವಿಟರ್‌ನಲ್ಲಿ ವೈರಲ್‌ ಆಗಿವೆ.

ಇದನ್ನೂ ಓದಿ: ಗಾಂಧಿಯನ್ನು ಕೊಂದ ಗೋಡ್ಸೆ ಒಬ್ಬ RSS ಭಯೋತ್ಸಾದಕ: ನಟ ಸಿದ್ದಾರ್ಥ್

ಗ್ವಾಲಿಯರ್-ಚಂಬಲ್ ಪ್ರದೇಶದಲ್ಲಿ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ನೀರಸ ಪ್ರದರ್ಶನ ನೀಡಿತ್ತು. ಇದಾದ ನಂತರ, ಚೌರಾಸಿಯಾ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದು, ಮುಂಬರುವ ಮುನ್ಸಿಪಲ್ ಚುನಾವಣೆಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಕಾಂಗ್ರೆಸ್‌ ಪ್ರಯತ್ನಗಳನ್ನು ನಡೆಸುತ್ತಿರುವಂತೆ ಕಂಡುಬರುತ್ತಿದೆ ಎಂದು ಅಭಿಪ್ರಾಯ ಕೇಳಿಬರುತ್ತಿದೆ.

“ನಾಥುರಾಮ್ ಗೋಡ್ಸೆ ಅವರ ರಾಷ್ಟ್ರೀಯತಾವಾದಿ ಸಿದ್ಧಾಂತವನ್ನು ಸಮರ್ಥಿಸುವವರಿಗೆ ಕಾಂಗ್ರೆಸ್ ಸ್ಥಾನವನ್ನು ನೀಡಿದೆ.  “ಕಾಂಗ್ರೆಸ್ ಪಕ್ಷವು ಬದ್ದತೆಯಿಂದ ಕೆಲಸ ಮಾಡುವ ಕಾರ್ಯಕರ್ತರ ಕೊರತೆಯನ್ನು ಎದುರಿಸುತ್ತಿದೆ. ಅದಕ್ಕಾಗಿ ಯಾರನ್ನೂ ಬೇಕಾದರೂ ಪಕ್ಷಕ್ಕೆ ಸೇರಿಸಿಕೊಳ್ಳಲು ಕಾಂಗ್ರಸ್‌ ಸಿದ್ದವಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಚೌರಾಸಿಯಾ ಎರಡು ವರ್ಷಗಳ ಹಿಂದೆ ಹಿಂದೂ ಮಹಾಸಭಾ ಜೊತೆಗಿನ ಸಂಬಂಧವನ್ನು ಕಸಿದುಕೊಂಡಿಲ್ಲ. ಆದಕ್ಕೆ ಸಾಕ್ಷಿಯಾಗಿ ಕಳೆದ ತಿಂಗಳು ಗೋಡ್ಸೆ ಜ್ಞಾನಶಾಲಾ (ಗ್ರಂಥಾಲಯ) ಪ್ರಾರಂಭಿಸುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು” ಎಂದು ಅಖಿಲ ಭಾರತ ಹಿಂದೂ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಜೈವೀರ್ ಭರದ್ವಾಜ್ ಹೇಳಿದ್ದಾರೆ.

ಇದನ್ನೂ ಓದಿ: ಗುಂಪುಗಳ ಮಾರಾಮಾರಿ: RSS ಕಾರ್ಯಕರ್ತನ ಹತ್ಯೆ; 08 ಮಂದಿ SDPI ಕಾರ್ಯಕರ್ತರ ಬಂಧನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights