ಕೆಲ ಹೊತ್ತಿನಲ್ಲೇ ಉಪಚುನಾವಣೆಯ ಅಂತಿಮ ಫಲಿತಾಂಶ : ಸಂಭ್ರಮಿಸದಿರಲು ಡಿಕೆಶಿ ಮನವಿ!

ಕೊರೊನಾ ಮಧ್ಯೆ ರಾಜ್ಯದಲ್ಲಿಂದು ಉಪಚುನಾವಣೆ ಮತ ಏಣಿಕೆ ನಡೆಯುತ್ತಿದ್ದು ಕೆಲ ಸಮಯದಲ್ಲೇ ಅಭ್ಯರ್ಥಿಗಳ ಹಣೆ ಬರಹ ತಿಳಿಯಲಿದೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೊರೊನಾ ಬಿಕ್ಕಟ್ಟಿನಲ್ಲಿ ಗೆಲುವನ್ನು ಸಂಭ್ರಮಿಸದಿರಲು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

ಈಗಾಗಲೇ ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಬಸವಕಲ್ಯಾಣದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಇನ್ನೂ ಬೆಳಗಾವಿಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪೈಪೋಟಿ ಜೋರಾಗಿದೆ. ಮಾಧ್ಯಮಕ್ಕೆ ಮಾತನಾಡಿದ ಅವರು,” ಮತದಾರರ ತೀರ್ಪನ್ನು ಸಾವು ಸ್ವಾಗತಿಸಬೇಕು. ಸ್ವಾಗತಿಸುತ್ತೇವೆ. ಸೋಲು ಗೆಲುವು ಎರಡನ್ನು ಒಪ್ಪಿಕೊಳ್ಳುತ್ತೇವೆ. ಮಸ್ಕಿಯಲ್ಲಿ ನಾವು ಗೆದ್ದಿದ್ದೇವೆ. ಹೀಗಾಗಿ ಕಾರ್ಯಕರ್ತರು ಗೆಲುವನ್ನು ಸಂಭ್ರಮಿಸಬಾರದು. ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕೆಪಿಸಿಸಿ ಕಚೇರಿ ಎದುರು ವಿಜಯೋತ್ಸವಕ್ಕೆ ಅವಕಾಶವಿಲ್ಲ. ಫಲಿತಾಂಶ ಮುಖ್ಯ ಅಲ್ಲ. ಜನರ ಜೀವ ಮುಖ್ಯ.  ಒಂದು ಜೀವ ಉಳಿದ್ರೂ ಅದೇ ನಮಗೆ ಸೆಲಬ್ರೇಷನ್ ” ಎಂದು ಹೇಳಿದ್ದಾರೆ.

ಜೊತೆಗೆ “ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಹಿನ್ನೆಡೆಯಾದ ವಿಚಾರವಾಗಿ, 8 ಹಂತಗಳಲ್ಲಿ ಚುನಾವಣೆ ನಡೆಸಿ ಹೆಣ್ಣು ಮಗಳಿಗೆ ಕೊಡಬಾರದ ಕಾಟ ಕೊಟ್ಟರು. ಅದಕ್ಕೆ ಪಶ್ಚಿಮ ಬಂಗಾಳದ ಜನ ಉತ್ತರ ಕೊಟ್ಟಿದ್ದಾರೆ. ಆ ಮತದಾರರಿಗೆ ನಾನು ಕೈ ಮುಗಿದು ನಮಸ್ಕರಿಸುತ್ತೇನೆಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋತಿದೆ ಅಂತಾನೂ ವಿಜಯೋತ್ಸವ ಬೇಡ. ತಮಿಳುನಾಡಿನಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿ ಗೆದ್ದಿರುವುದಕ್ಕೂ ಸೆಲೆಬ್ರೇಷನ್ ಬೇಡ” ಎಂದು ಡಿಕೆಶಿ ಎಲ್ಲಾ ಕಾರ್ಯಕರ್ತರಲ್ಲೂ ಮನವಿ ಮಾಡಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights