ರಸ್ತೆ ಬದಿಯಲ್ಲಿ ಮೊಟ್ಟೆ ಕದ್ದ ಆರೋಪ; ಪೊಲೀಸ್‌ ಪೇದೆ ಅಮಾನತು!

ರಸ್ತೆ ಬದಿಯಲ್ಲಿ ನಿಂತಿದ್ದ ಮೊಟ್ಟೆಗಳನ್ನು ತುಂಬಿದ ಗಾಡಿಯಿಂದ ಮೊಟ್ಟೆಗಳನ್ನು ಕದ್ದ ಆರೋಪದಲ್ಲಿ ಪೊಲೀಸ್‌ ಪೇದೆಯೊಬ್ಬರನ್ನು ಅಮಾನತು ಮಾಡಿರುವ ಘಟನೆ ಪಂಜಾಬ್‌ನಲ್ಲಿ ನಡೆದಿದೆ.

ಹಲವಾರು ವಾಹನಗಳು ಸಂಚರಿಸುತ್ತಿದ್ದ ರಸ್ತೆಯ ಬದಿಯಲ್ಲಿ ಮೊಟ್ಟೆ ತುಂಬಿದ ಗಾಡಿ ನಿಂತಿತ್ತು. ಆ ಗಾಡಿಯಿಂದ ಸಮವಸ್ತ್ರದಲ್ಲಿದ್ದ ಪೊಲೀಸ್‌ ಪೇದೆಯೊಬ್ಬರು ಮೊಟ್ಟೆಗಳನ್ನು ಕದಿಯುತ್ತಿದ್ದಾರೆ ಎಂದು ಆರೋಪಿಸಿ ವಿಡಿಯೋವೊಂದು ವೈರಲ್‌ ಆಗಿತ್ತು. ಈ ಹಿನ್ನಲೆಯಲ್ಲಿ ಪೇದೆಯನ್ನು ಅಮಾನತು ಮಾಡಲಾಗಿದೆ.

ಅಮಾನತುಗೊಂಡಿರುವ ಪೇದೆ ಪ್ರಿತ್‌ಪಾಲ್ ಸಿಂಗ್ ಎಂದು ತಿಳಿದು ಬಂದಿದೆ. ಆತ ಮೊಟ್ಟೆಗಳನ್ನು ಕದಿಯುತ್ತಿದ್ದಾರೆ ಎಂದು ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದ ವಿಡಿಯೋ ವೈರಲ್‌ ಆಗಿತ್ತು. ವಿಡಿಯೋದಲ್ಲಿ, ಗಾಡಿಯ ಮಾಲೀಕ ಗಾಡಿಯ ಸಮೀಪಕ್ಕೆ ಬರುತ್ತಿದ್ದಂತೆ ಗಡಿಬಿಡಿಯಿಂದ ಪೊಲೀಸ್ ಪೇದೆ ರಸ್ತೆಯ ಇನ್ನೊಂದು ಬದಿಗೆ ದಾಟುತ್ತಿರುವುದು ಕಂಡುಬಂದಿದೆ. ಬಳಿಕ ಪೊಲೀಸ್, ಆಟೊರಿಕ್ಷಾವೊಂದನ್ನು ತಡೆದು ನಿಲ್ಲಿಸಿ ಮೊಟ್ಟೆಯೊಂದಿಗೆ ಪರಾರಿಯಾಗಿದ್ದ.

ಪ್ರಿತ್‌ಪಾಲ್ ಸಿಂಗ್ ಅವರು ಫತೇಘರ್ ಸಾಹಿಬ್ ಠಾಣೆಯ ಪೇದೆಯಾಗಿದ್ದು, ಆತನನ್ನು ಅಮಾನತು ಮಾಡಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಪಂಜಾಬ್ ಪೊಲೀಸ್ ಇಲಾಖೆ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಸಂಸದ ತೇಜಸ್ವಿ ಸೂರ್ಯ ವಿರುದ್ದ ಪಿಐಎಲ್‌; ವಿಚಾರಣೆ ನಡೆಸಲು ಹೈಕೋರ್ಟ್‌ ನಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights