ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ : ಹೊಸ ದರ ಹೀಗಿದೆ…!

ಪೆಟ್ರೋಲ್, ಡೀಸೆಲ್ ದರಗಳು ಮತ್ತೆ ಏರಿಕೆಯಾಗಿ ಹೊಸ ದಾಖಲೆ ಸೃಷ್ಟಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದೇಶಾದ್ಯಂತ ಕ್ರಮವಾಗಿ 25 ಪೈಸೆ ಮತ್ತು 30 ಪೈಸೆ ಏರಿಕೆ ಮಾಡಲಾಗಿದೆ.

ಸರ್ಕಾರಿ ಸ್ವಾಮ್ಯದ ಇಂಧನ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 102.14 ರೂ ಮತ್ತು ಮುಂಬೈನಲ್ಲಿ 108.19 ರೂ. ಆಗಿದೆ. ಡೀಸೆಲ್ ದರಗಳು ಕೂಡ ದೆಹಲಿಯಲ್ಲಿ ರೂ. 90.47 ಮತ್ತು ಮುಂಬೈನಲ್ಲಿ ರೂ. 98.16 ರ ಗರಿಷ್ಠ ದಾಖಲೆಯನ್ನು ಮುಟ್ಟಿದೆ. ಸ್ಥಳೀಯ ತೆರಿಗೆಗಳ ಸಂಭವವನ್ನು ಅವಲಂಬಿಸಿ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ.

ಭಾರತ ಆಮದು ಮಾಡಿಕೊಳ್ಳುವ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 78 ಡಾಲರ್ ಆಗಿದೆ. ಈ ವಾರ ಅದರ ದರಗಳಲ್ಲಿನ ನಾಲ್ಕನೇ ಹೆಚ್ಚಳವು ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಬೆಲೆಯನ್ನು 100 ರೂ.ಗಿಂತ ಹೆಚ್ಚಿಗೆ ಮಾಡಿದೆ.

ಅಂತೆಯೇ, ಒಂಬತ್ತು ದಿನಗಳಲ್ಲಿ ಏಳನೇ ಬಾರಿಗೆ ಬೆಲೆ ಏರಿಕೆಯಿಂದ ಮಧ್ಯಪ್ರದೇಶ, ರಾಜಸ್ಥಾನ, ಒಡಿಶಾ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಹಲವು ನಗರಗಳಲ್ಲಿ ಡೀಸೆಲ್ ದರ 100 ರೂ.ಗಿಂತ ಹೆಚ್ಚಾಗಿದೆ.

ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪ್ (IOC), ಭಾರತ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್ (HPCL)  ಅಂತಾರಾಷ್ಟ್ರೀಯ ತೈಲ ಬೆಲೆಯನ್ನು ಮೂರು ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದ ನಂತರ ಸೆಪ್ಟೆಂಬರ್ 24 ರಂದು ದೈನಂದಿನ ಬೆಲೆ ಪರಿಷ್ಕರಣೆಯನ್ನು ಪುನರಾರಂಭಿಸಿವೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights