ನಕಲಿ ಖಾತೆ ಮೂಲಕ ಚಿರಂಜೀವಿ ಜೊತೆ ಡ್ಯಾನ್ಸ್ ವೀಡಿಯೋ ವೈರಲ್ ಮಾಡಿದ್ದವರಿಗೆ ಸುಮಲತಾ ಟಾಂಗ್….

ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಭಾರೀ ಬಹುಮತದ ಮೂಲಕ ಜಯ ಸಾಧಿಸುತ್ತಿದ್ದಂತೆ ವಿರೋಧಿಗಳು ತೇಜೋವಧೆ ಮಾಡಲು ಕಾಯುತ್ತಿದ್ದಂತೆ ಕಾಣುತ್ತಿದೆ.

ಯಾಕೆಂದರೆ ಇತ್ತೀಚೆಗೆ ರಾಜ್ಯದ ಜನ ಮಳೆಗೆ ತತ್ತರಿಸಿ ಹೋಗಿದ್ದರೆ ಇತ್ತ ಸುಮಲತಾ ಹಾಗೂ ಚಿರಂಜೀವಿ ಜೊತೆ ಡ್ಯಾನ್ಸ್ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ ಎಂದು ವಿಡಿಯೋವೊಂದನ್ನ ವೈರಲ್ ಮಾಡಲಾಗಿತ್ತು. ಹೀಗೆ ನಕಲಿ ಖಾತೆ ಮೂಲಕ ಚಿರಂಜೀವಿ ಜೊತೆ ಡ್ಯಾನ್ಸ್ ಮಾಡಿದ್ದ ವೀಡಿಯೋ ವೈರಲ್ ಮಾಡಿದ್ದವರಿಗೆ ಸುಮಲತಾ ಟಾಂಗ್ ಕೊಟ್ಟಿದ್ದಾರೆ.

ನಟ ಚಿರಂಜೀವಿ ಜೊತೆ ಸಂಸದೆ ಸುಮಲತಾ ಅಂಬರೀಶ್ ಡ್ಯಾನ್ಸ್ ಮಾಡಿದ್ದ ವೀಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಅದು ಹಳೆ ಫೋಟೋ ಎಂದು ಸುಮಲತಾ ಸ್ಪಷ್ಟನೆ ಕೊಟ್ಟಿದ್ದಾರೆ. ಪ್ರಕರಣಕ್ಕೆ ಸುಮಲತಾ ಸ್ವತಃ ಫೇಸ್ ಬುಕ್ ನ ತಮ್ಮ ಅಕೌಂಟ್ ನಲ್ಲಿ ತೆರೆ ಎಳೆದಿದ್ದಾರೆ.

 

 

 

ನಾಲ್ಕು ವರ್ಷಗಳ ಹಿಂದೆ ತೆಲುಗು ನಟ ಚಿರಂಜೀವಿ ಮಗಳ ಮದುವೆಯಲ್ಲಿ ಭಾಗವಹಿಸಿದ್ದ ವೀಡಿಯೋ ಹಾಗೂ ಫೋಟೋ ಎಂದು ಸುಮಲತಾ ಸ್ಪಷ್ಟನೆ ನೀಡಿದ್ದು, ಅದಕ್ಕೆ ಸಾಕ್ಷಿ ಎಂಬಂತೆ ಕೆಲವು ಫೋಟೋಗಳನ್ನ ಶೇರ್ ಮಾಡಿದ್ದಾರೆ.ಚಿರಂಜೀವಿ ಕುಟುಂಬ ಹಾಗೂ ಸುಮಲತಾ ಜೊತೆ ಸ್ವತಃ ಪತಿ ಅಂಬರೀಶ್ ಇರುವ ಫೋಟೋ ವನ್ನು ತಮ್ಮ FB ಖಾತೆಗೆ ಹಾಕಿರುವ ಸುಮಲತಾ, ಹಳೆಯ ನೆನಪನ್ನು ಮರಳಿ ತಂದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights