FACT CHECK | BBC ಸರ್ವೆಯಲ್ಲಿ ಇಂಡಿಯಾ ಮೈತ್ರಿ ಕೂಟಕ್ಕೆ ಬಹುಮತ ! ವಾಸ್ತವವೇನು?

ಬಿಬಿಸಿ ಸಂಸ್ಥೆ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳ ಇಂಡಿಯಾ ಮೈತ್ರಿ ಕೂಟ ಭಾರೀ ಬಹುಮತ ಸಾಧಿಸಲಿದೆ ಎಂದು ಹೇಳಲಾಗಿದೆ ಎಂಬ ಬಿಬಿಸಿ ಸ್ಕ್ರೀನ್‌ಶಾಟ್‌ವೊಂದನ್ನು ಪೋಸ್ಟ್‌ ಸಾಮಾಜಿಕ  ಪ್ರಸಾರ ಮಾಡಲಾಗುತ್ತಿದೆ.

‘ಲೋಕಸಭಾ ಚುನಾವಣೆಯ 543 ಸ್ಥಾನಗಳ ಪೈಕಿ ಇಂಡಿಯಾ ಮೈತ್ರಿ ಕೂಟ ಬಹುಮತಕ್ಕೆ ಸಮೀಪ ಬರಲಿದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಫೇಸ್‌ಬುಕ್‌ನಲ್ಲಿ ಯೂಟ್ಯೂಬ್ ಲಿಂಕ್ (ಸಂಗ್ರಹ) ಒಂದನ್ನು ಹಂಚಿಕೊಂಡಿರುವ ಸಾಮಾಜಿಕ ಜಾಲತಾಣ ಬಳಕೆದಾರರು 2024ರ ಲೋಕಸಭಾ ಚುನಾವಣೆಗೆ ಬಿಬಿಸಿ ಸರ್ವೆ ಎಂದು ಬರೆದುಕೊಂಡಿದ್ದಾರೆ.

ಇನ್ನು ಸೋಶಿಯಲ್ ಮೀಡಿಯಾ ಬಳಕೆದಾರರು ಹಂಚಿಕೊಂಡಿರುವ ಸ್ಕ್ರೀನ್ ಶಾಟ್ ಫೋಟೋದಲ್ಲಿ ಟಿವಿ ಪತ್ರಕರ್ತ ರವೀಶ್ ಕುಮಾರ್ ಅವರ ಫೋಟೋ ಮತ್ತು ಬಿಬಿಸಿ ಇಂಡಿಯಾ ಲೋಗೋ ವನ್ನು ಒಳಗೊಂಡಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಪ್ರತಿಪಾದಿಸದಂತೆ ಬಿಬಿಸಿ ಇಂಡಿಯಾ ನಿಜವಾಗಿಯೂ 2024ರ ಲೋಕಸಭಾ ಚುನಾವಣೆಯ  (ಚುನಾವಣಾ ಪೂರ್ವ) ಸಮೀಕ್ಷೆಯನ್ನು ನಡೆಸಿದೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯಂತೆ  2024ರ ಲೋಕಸಭಾ ಚುನಾವಣೆ ಸಂಬಂಧ ಬಿಬಿಸಿ ಯಾವುದಾದರೂ ವರದಿ ಮಾಡಿದೆಯೇ ಎಂದು ಸರ್ಚ್ ಮಾಡಿದಾಗಗ, ಅಂತಹ ಯಾವುದೇ ವರದಿ ಲಭ್ಯವಾಗಿಲ್ಲ. ಇನ್ನು ರವೀಶ್ ಕುಮಾರ್ ಅವರ ಯೂಟ್ಯೂಬ್ ಚಾನಲ್‌ನಲ್ಲೂ ಬಿಬಿಸಿ ಚುನಾವಣಾ ಪೂರ್ವ ಸಮೀಕ್ಷೆ ಕುರಿತಾದ ವಿಡಿಯೋ ಲಭ್ಯವಿಲ್ಲ.

ವೈರಲ್ ಸಮೀಕ್ಷೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಮಾಡಿದಾಗ, ‘ಬಿಬಿಸಿ ಹೆಸರಲ್ಲಿ ವೈರಲ್ ಆಗಿರುವ ಸರ್ವೆ ಕುರಿತ ವಾಸ್ತವೇನು? ಎಂಬ ಮಾಹಿತಿ ಲಭ್ಯವಾಯಿತು. ಈ ವರದಿಯಲ್ಲಿ ಬಿಬಿಸಿ ತಾವು ಆ ರೀತಿಯ ಯಾವುದೇ ಚುನಾವಣಾ ಸರ್ವೆ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿದೆ. ನಾವು ಯಾವುದೇ ರೀತಿಯ ಚುನಾವಣಾ ಸರ್ವೆ ನಡೆಸಿಲ್ಲ. ಇದು ಬಿಬಿಸಿ ಹೆಸರಲ್ಲಿ ಹರಡಿರುವ ಸುಳ್ಳು ಸುದ್ದಿ ಎಂದು ನಾವು ಖಚಿತಪಡಿಸುತ್ತಿದ್ದೇವೆ’ ಎಂದು ಬಿಬಿಸಿ ಈ ವರದಿಯಲ್ಲಿ ಮಾಹಿತಿ ನೀಡಿದೆ.

ಬಿಬಿಸಿಯು ಯಾವುದೇ ರೀತಿಯ ಚುನಾವಣಾ ಪೂರ್ವ ಸಮೀಕ್ಷೆ ಮಾಡುವುದಿಲ್ಲ ಇದನ್ನು ನಾವು ಹಲವು ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದೇವೆ. ಅಷ್ಟೇ ಅಲ್ಲ ನಾವು ಜನಾಭಿಪ್ರಾಯ ಸಂಗ್ರಹ ಅಥವಾ ಮತಗಟ್ಟೆ ಸಮೀಕ್ಷೆ ಕೂಡಾ ನಡೆಸೋದಿಲ್ಲ. ಈ ಬಾರಿಯೂ ನಾವು ಆ ರೀತಿಯ ಯಾವುದೇ ಸಮೀಕ್ಷೆ ನಡೆಸಿಲ್ಲ’ ಎಂದು ಬಿಬಿಸಿ ಹೇಳಿದೆ.

ಕಲೆಕ್ಟೀವ್ ನ್ಯೂಸ ರೂಂನ ಸಹ ಸಂಸ್ಥಾಪಕರು ಹಾಗೂ ಸಿಇಒ ಆಗಿರುವ ರೂಪಾ ಝಾ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಬಿಬಿಸಿ ನ್ಯೂಸ್ ಭಾರತೀಯ ಭಾಷೆಗಳ ಪ್ರಕಾಶಕರೂ ಆಗಿರುವ ಅವರು, ಇದೊಂದು ನಕಲಿ ಸರ್ವೆ ಎಂದು ಖಚಿತಪಡಿಸಿದ್ದಾರೆ. ‘ಇದೊಂದು ನಕಲಿ ಸರ್ವೆ, ಬಿಬಿಸಿ ಆ ರೀತಿಯ ಯಾವುದೇ ಸರ್ವೆ ನಡೆಸಿಲ್ಲ, ನಡೆಸೋದಿಲ್ಲ’ ಎಂದು ಅವರು ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಿಬಿಸಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಇಂಡಿಯಾ ಮೈತ್ರಿಕೂಟ ಭಾರೀ ಬಹುಮತ ಸಾಧಿಸಲಿದೆ ಎಂದು ಹೇಳಲಾಗಿದೆ ಎಂದು ಸುಳ್ಳು ಸುದ್ದಿಯನ್ನು ಹಂಚಿಕೊಂಡಿರುವುದು ಸ್ಪಷ್ಟವಾಗಿದೆ. ಇಂತಹ ಯಾವುದೇ ಸಮೀಕ್ಷೆಯನ್ನು ಬಿಬಿಸಿ ನಡೆಸುವುದಿಲ್ಲ ಎಂದು ಬಿಬಿಸಿ ಸ್ಪಷ್ಟಪಡಿಸಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ‘ಅರವಿಂದ್ ಕೇಜ್ರಿವಾಲ್ ಮೇಲೆ ಹಲ್ಲೆ’ ಎಂದು 2019 ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights