FACT CHECK | ಚಿರತೆ ಮೊಸಳೆಯನ್ನು ಭೇಟೆಯಾಡಿದ ದೃಶ್ಯ ಬಂಟ್ವಾಳದಲ್ಲ

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, 1.53 ನಿಮಿಷದ ಈ ವಿಡಿಯೋದಲ್ಲಿ ಚಿರತೆ ರೀತಿಯ ಪ್ರಾಣಿಯೊಂದು ಮೊಸಳೆಯನ್ನು ಹಿಡಿಯುವ ದೃಶ್ಯವನ್ನು ಕಾಣಬಹುದು. ಫೇಸ್‌ಬುಕ್‌ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಬಂಟ್ವಾಳ ನದಿಯಲ್ಲಿ ಕಂಡು ಬಂದ ದೃಶ್ಯ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗಿದೆ.

Fact Check: ಬಂಟ್ವಾಳ ನದಿಯಲ್ಲಿ ಚಿರತೆ ಮೊಸಳೆ ಹಿಡಿದ ದೃಶ್ಯ ಎಂದ ವೈರಲ್ ವೀಡಿಯೋ ದಕ್ಷಿಣ ಅಮೆರಿಕದ್ದು!

“ಬಂಟ್ವಾಳ ನದಿಯಲ್ಲಿ ಕಂಡು ಬಂದ ದ್ರಶ್ಯ ಎಂದು ಸೋಶಿಯಲ್ ಮೀಡಿಯಾ ದಲ್ಲಿ ಹರಿದಾಡುತ್ತಿರುವ ವೈರಲ್ ವಿಡಿಯೋ. ಊರು ಯಾವುದು ಎಂಬುದು ಗೊತ್ತಿಲ್ಲ. ಆದ್ರೆ ನದಿ ಕಡೆ ಹೋಗುವವರು ಸ್ವಲ್ಪ ಜಾಗ್ರತೆ ವಹಿಸುವುದು ಮುಖ್ಯ.  ವಿಡಿಯೋವನ್ನು ನದಿ ಬದಿ ವಾಸಿಸುವವರು ಒಮ್ಮೆ ನೋಡಿ” ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಇದೆ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೆ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಚಿರತೆಯೊಂದು ನದಿ ದಡದಲ್ಲಿ ಹೊಂಚುಹಾಕಿ ಮೊಸಳೆಯನ್ನು ಭೇಟೆಯಾಡಿದ ದೃಶ್ಯವು ಉತ್ತರ ಕನ್ನಡ ಜಿಲ್ಲೆಯ ಬಂಟ್ವಾಳದ್ದು ಎಂದು ಪ್ರತಿಪಾದಿಸಿ ಹಂಚಿಕೊಂಡ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 29 ಮೇ  2024ರಂದು Guainía Cultural ಫೇಸ್‌ಬುಕ್‌ ಪೇಜ್‌ನಲ್ಲಿ ವೈರಲ್‌ ವಿಡಿಯೋವನ್ನು ಹೋಲುವ ವಿಡಿಯೋವೊಂದು ಲಭ್ಯವಾಗಿದೆ, ಈ ವಿಡಿಯೋದಲ್ಲಿ “ಅಮೆಜಾನ್‌ ಕಾಡಿನ ರಾಜ” ಎಂದು ಬರೆದಿರುವುದನ್ನು ನೋಡಬಹುದು.

9 ಜೂನ್ , 2024ರಂದು Gancet World ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ಇದೇ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, “jaguar hunting caiman” ಎಂಬ ಶೀರ್ಷಿಕೆ ನೀಡಲಾಗಿದೆ.

ಇವುಗಳ ಆಧಾರದಲ್ಲಿ ನಾವು ಇನ್ನಷ್ಟು ಶೋಧ ನಡೆಸಿದ್ದು, ಪ್ರೀಮಿಯರ್ ಅಪಾಗಿನಾ ಹೆಸರಿನ ವೆಬ್‌ಸೈಟ್ ನಲ್ಲಿ ಮೇ 28, 2024ರಂದು ಮಾಡಿದ ಪೋಸ್ಟ್ ಲಭ್ಯವಾಗಿದ್ದು ಜಾಗ್ವಾರ್ ಕೂಯ್ಬಾ  ನದಿಯಲ್ಲಿ ಮೊಸಳೆಯನ್ನು ಹಿಡಿದಿರುವುದು ಎಂದಿದೆ. (ಅನುವಾದಿಸಲಾಗಿದೆ) ಈ ಪೋಸ್ಟ್ ನಲ್ಲೂ ವೈರಲ್ ವಿಡಿಯೋವನ್ನು ಅಪ್‌ಲೋಡ್‌ ಮಾಡಿರುವುದನ್ನು ನೋಡಬಹುದು. ಕೂಯ್ಬಾ ನದಿಯು ದಕ್ಷಿಣ ಅಮೆರಿಕದ ಬ್ರೆಜಿಲ್‌ ನಲ್ಲಿದೆ ಎಂಬುದು ಗಮನಾರ್ಹ. ಚಿರತೆ ಮೊಸಳೆಯನ್ನು ಬೇಟಿಯಾಡಿದ ದೃಶ್ಯವು ಬಂಟ್ವಾಳದಲ್ಲಿ ನಡೆದಿದ್ದಲ್ಲ ಎಂಬುದು ಸ್ಪಷ್ಟವಾಗಿದೆ.

Fact Check: ಬಂಟ್ವಾಳ ನದಿಯಲ್ಲಿ ಚಿರತೆ ಮೊಸಳೆ ಹಿಡಿದ ದೃಶ್ಯ ಎಂದ ವೈರಲ್ ವೀಡಿಯೋ ದಕ್ಷಿಣ ಅಮೆರಿಕದ್ದು!

ಈ ಸಾಕ್ಷ್ಯಾಧಾರಗಳ ಪ್ರಕಾರ, ಚಿರತೆ ರೀತಿಯ ಪ್ರಾಣಿಯೊಂದು ಮೊಸಳೆಯನ್ನು ಹಿಡಿಯುವ ದೃಶ್ಯ ಬಂಟ್ವಾಳದ್ದಲ್ಲ, ಅದು ದಕ್ಷಿಣ ಅಮೆರಿಕ ಮೂಲದ್ದು ಎಂದು ಕಂಡುಕೊಂಡಿದ್ದೇವೆ.

ಒಟ್ಟಾರೆಯಾಗಿ ಹೇಳುವುದಾದರೆ, ದಕ್ಷಿಣ ಅಮೆರಿಕಾದಲ್ಲಿ ಚಿತರೆಯೊಂದು ಮೊಸಳೆಯನ್ನು ಭೇಟೆಯಾಡಿದ ದೃಶ್ಯವನ್ನು, ಉತ್ತರ ಕನ್ನಡದ ಬಂಟ್ವಾಳದ ದೃಶ್ಯ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ತನ್ನ ಸ್ವಂತ ಮಗನನ್ನೆ ಮದುವೆಯಾದ ಹಿಂದೂ ಮಹಿಳೆ ಎಂದು ಸಂಬಂಧವಿಲ್ಲದ ಫೋಟೊ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “FACT CHECK | ಚಿರತೆ ಮೊಸಳೆಯನ್ನು ಭೇಟೆಯಾಡಿದ ದೃಶ್ಯ ಬಂಟ್ವಾಳದಲ್ಲ

  • July 3, 2024 at 3:25 pm
    Permalink

    ಅದಿರಲಿ..,,
    ಉತ್ತರಕನ್ನಡ ಜಿಲ್ಲೆಯಲ್ಲಿ ಬಂಟ್ವಾಳ ಎಂಬ ಊರು ನನಗೆ ಗೊತ್ತಿರುವಂತೆ ಎಲ್ಲೂ ಇಲ್ಲ. ಅದು ಕೂಡಾ ಫೇಕ್ ಕ್ಲೇಮ್.

    Reply

Leave a Reply

Your email address will not be published.

Verified by MonsterInsights