FACT CHECK | ಲೋಕಸಭಾ ಚುನಾವಣೆ ಬಳಿಕ ಭಾರತದ ಹಿಂದೂಗಳು ದೇಶವನ್ನು ತೊರೆಲಿ ಎಂದು ಮೌಲಾನ ಮದನಿ ಹೇಳಿದ್ದಾರೆ ಎಂಬುದು ಸುಳ್ಳು

“ಈ ವಿಡಿಯೋ ನೋಡಿ ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಜಮೀಯತ್ ಉಲಾನಾ-ಐ-ಹಿಂದ್ ಅಧ್ಯಕ್ಷ ಮೌಲಾನ ಮಹಮೂದ್ ಅಸಾದ್ ಮದನಿ ಅವರು ಈ ದೇಶ ನಮ್ಮದು ಮತ್ತು ನಾವು ದೇಶದ ಬಗ್ಗೆ ನಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತೇವೆ. ನಮ್ಮ ಧರ್ಮ ಉಡುಗೆ-ತೊಡುಗೆ, ಆಚಾರ-ವಿಚಾರ, ಆಹಾರ ಪದ್ಧತಿ ಬೇರೆ ಬೇರೆ ಮತ್ತು ನೀವು ನಮ್ಮ ಧರ್ಮವನ್ನು ಸಹಿಸದಿದ್ದರೆ ಬೇರೆಡೆಗೆ ಹೋಗಿ ಎಂದು ಹೇಳಿದ್ದಾರೆ” ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿಗೆ ವೈರಲ್ ಆಗಿದೆ

 

ಈ ವಿಡಿಯೋ ಜೊತೆಗೆ ಹಲವು ಬರಹಗಳು ಕಂಡುಬಂದಿದ್ದು, ಅದರಲ್ಲಿ ಕೆಲವೊಂದು ಬರಹಗಳು ಈ ವಿಡಿಯೋ ಇತ್ತೀಚಿನ ಲೋಕಸಭೆ ಚುನಾವಣೆಯ ನಂತರದ ಭಾಷಣದ್ದಾಗಿದೆ ಎಂದು ಹಲವರು ಹಂಚಿಕೊಂಡಿದ್ದಾರೆ. ಹೀಗಾಗಿ ಸಾಕಷ್ಟು ಮಂದಿ ಇದು ಇತ್ತೀಚಿನ ಭಾಷಣದ ವಿಡಿಯೋ ಎಂದು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

 

 

 

 

 

 

 

 

 

 

 

 

 

 

 

 

 

 

 

ಫ್ಯಾಕ್ಟ್‌ಚೆಕ್‌ :

ಜಮೀಯತ್ ಉಲಾನಾ-ಐ-ಹಿಂದ್ ಅಧ್ಯಕ್ಷ ಮೌಲಾನ ಮಹಮೂದ್ ಅಸಾದ್ ಮದನಿ ಅವರು ಹೇಳೀದ್ದಾರೆ ಎನ್ನಲಾದ ಹೇಳಿಕೆಯ ಕುರಿತು ಪರಿಶೀಲಿಲನೆ ನಡೆಸಲು ಕೀ ವರ್ಡ್‌ಗಳನ್ನು ಬಳಸಿ ಗೂಗಲ್ ಸರ್ಚ ಮಾಡಿದಾಗ, TV9 ಉತ್ತರಪ್ರದೇಶ ಉತ್ತರಖಂಡಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೋ ಲಭ್ಯವಾಗಿದೆ.

ಆದರೆ ವಿಡಿಯೋದ ವಿಸ್ತೃತ ಆವೃತಿ ಈ ವಿಡಿಯೋದಲ್ಲಿ ಪತ್ತೆಯಾಗಿಲ್ಲ. ಹೀಗಾಗಿ ವಿಸ್ತೃತ ಆವೃತಿಯ ವಿಡಿಯೋಗಾಗಿ ಸರ್ಚ್ ಮಾಡಿದಾಗ, 29 ಮೇ 2022 ರಲ್ಲಿ ಮಿಲ್ಲತ್‌ ಟೈಮ್ಸ್‌ ಎಂಬ ಸುದ್ದಿ ಸಂಸ್ಥೆ “ನಮ್ಮ ಧರ್ಮವನ್ನು ಸಹಿಸದವರು ದೇಶ ಬಿಟ್ಟು ಬೇರೆಡೆಗೆ ಹೋಗಬೇಕು” ಎಂಬ ಶೀರ್ಷಿಕೆಯ ಅಡಿಯಲ್ಲಿ ಮದನಿ ಅವರು ಮಾತನಾಡಿದ ಪೂರ್ಣ ವಿಡಿಯೋವನ್ನು ಅಪ್‌ಲೋಡ್‌ ಮಾಡಿರುವುದು ಲಭ್ಯವಾಗಿದೆ. ಈ ವಿಡಿಯೋದಲ್ಲಿ ವೈರಲ್‌ ಕ್ಲಿಪ್‌ನಲ್ಲಿನ ದೃಶ್ಯವು 2:16 ನಿಮಿಷದ ಟೈಮ್‌ ಸ್ಟ್ಯಾಂಪ್‌ನಲ್ಲಿ ಕಂಡು ಬಂದಿದೆ.

ಇಲ್ಲಿ ಮದನಿ ಅವರು ” ನಾನು ಬೆದರಿಕೆ ಹಾಕುತ್ತಿಲ್ಲ. ಈ ದೇಶವು ನಮ್ಮದೇ ಎಂದು ತಿಳಿಸುತ್ತಿದ್ದೇನೆ, ನಮಗೆ ಅವಕಾಶವಿತ್ತು ಆದರೆ ನಾವು ಪಾಕಿಸ್ತಾನವನ್ನು ತಿರಸ್ಕರಿಸಿದ್ದೇವೆ. ನಾವು ಈ ದೇಶದ ಪ್ರಜೆಗಳು, ವಿದೇಶಿಯರಲ್ಲ. ನಮ್ಮನ್ನು ಇಷ್ಟ ಪಡದವರು ದೇಶ ಬಿಟ್ಟು ಹೋಗಲಿ” ಎಂದು ಹೇಳಿಕೆ ನೀಡಿರುವುದು ಕಂಡು ಬಂದಿದೆ. ಇನ್ನು ಮದನಿ ಅವರ ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿರುವ ಕುರಿತು ಹಿಂದೂಸ್ತಾನ್‌ ಮತ್ತು ಜಾಗರನ್‌ ಮಾಧ್ಯಮಗಳ ವರದಿಗಳು ಕೂಡ ಕಂಡು ಬಂದಿವೆ.

 

 

 

 

 

 

 

 

 

 

 

 

 

 

ಒಟ್ಟಾರೆಯಾಗಿ ಹೇಳುವುದಾದರೆ,ಇತ್ತೀಚಿನ ಲೋಕಸಭೆ ಚುನಾವಣೆಯ ನಂತರ ಮೌಲಾನ ಮಹಮೂದ್ ಅಸಾದ್ ಮದನಿ ಅವರು ಹಿಂದೂಗಳನ್ನು ದೇಶ ಬಿಟ್ಟು ಹೋಗಲು ಹೇಳಿದ್ದಾರೆ ಎಂಬುದು ಸುಳ್ಳು. ಈ ವಿಡಿಯೋ 2022ರದ್ದಾಗಿದ್ದು ಸುಳ್ಳು ಹೇಳಿಕೆಗಳೊಂದಿಗೆ ಹಂಚಿಕೆಯಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಪ್ರತಿ ದಿನ ತಮ್ಮ ಕಚೇರಿಗೆ ಹೋಗಲು ದೆಹಲಿ ಮೆಟ್ರೋವನ್ನೆ ಬಳಸುತ್ತಾರೆ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights