FACT CHECK | ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಬಾಂಗ್ಲಾದಲ್ಲಿ ಕರೆ ನೀಡಲಾಗಿದೆ ಎಂಬುದು ಹಳೆಯ ಸುದ್ದಿ

ವ್ಯಕ್ತಿಯೊಬ್ಬ ದಿನಸಿ ಅಂಗಡಿಗಳಿಗೆ ಭೇಟಿ ನೀಡಿ ಭಾರತೀಯ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಅಂಗಡಿ ಮಾಲೀಕರನ್ನು ಒತ್ತಾಯಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ. ವ್ಯಕ್ತಿಯೊಬ್ಬ ಕರಪತ್ರಗಳನ್ನು ಹಂಚುತ್ತಾ, ಬಂಗಾಳಿ ಭಾಷೆಯಲ್ಲಿ “ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಿ” ಎಂದು ಅಭಿಯಾನ ನಡೆಸುತ್ತಿದ್ದಾರೆ, ಎನ್ನಲಾಗುತ್ತಿದೆ.

ಬಾಂಗ್ಲಾದೇಶದಲ್ಲಿ ಹೊಸ ಸರ್ಕಾರ ರಚನೆಯಾದ ನಂತರ, ಭಾರತೀಯ ಸರಕುಗಳನ್ನು ಬಹಿಷ್ಕರಿಸಲು ಮತ್ತು ಮಾರಾಟ ಮಾಡುವುದನ್ನು ನಿಲ್ಲಿಸಲು ಮುಸ್ಲಿಂ ವ್ಯಾಪಾರಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳುತ್ತಿದ್ದಾರೆ.

ಅಂತೆಯೇ, ಫೇಸ್‌ಬುಕ್‌ನ ಬಳಕೆದಾರರೊಬ್ಬರು, “ಬಾಂಗ್ಲಾದೇಶದಲ್ಲಿ ಹೊಸ ಸರ್ಕಾರ ರಚನೆಯಾದ ತಕ್ಷಣ, ನಿಮ್ಮ ಅಂಗಡಿಯಲ್ಲಿ ಯಾವುದೇ ಭಾರತೀಯ ಉತ್ಪನ್ನವಿದ್ದರೆ, ಅದನ್ನು ನಾಶಪಡಿಸಿ ಅಥವಾ ಅದು ಅಂಗಡಿಯಲ್ಲಿ ಎಲ್ಲಿಯೂ ಕಾಣಬಾರದು ಎಂದು ಎಲ್ಲಾ ಮುಸ್ಲಿಂ ಅಂಗಡಿಯವರಿಗೆ ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಲಾಗುತ್ತಿದೆ. ಇದು ಹಿಂದೂಗಳನ್ನು ತುಂಬಾ ದ್ವೇಷಿಸುವ ಮುಸ್ಲಿಂ ದೇಶ ಮತ್ತು ಅವರಿಗಿಂತ ಹೆಚ್ಚಿನ ಮುಸ್ಲಿಮರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಜಾತ್ಯತೀತ ಜನರು ಈಗ ಇದು ಸರಿ ಎಂದು ಹೇಳಬೇಕು. ಭಾಯಿಜಾನ್ ಏನು ಹೇಳುತ್ತಾನೆ?” ಎಂದು ಹಂಚಿಕೊಂಡಿದ್ದಾರೆ. ಆರ್ಕೈವ್ ಲಿಂಕ್  ಲಿಂಕ್. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್:

ಸಾಮಾಜಿಕ ಮಾಧ್ಮಗಳಲ್ಲಿ ಹಂಚಿಕೊಳ್ಳಲಾ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ತಮನ್ನಾ ಫಿರ್ದೌಸ್ ಶಿಖಾ ಎಂಬ ಫೇಸ್ಬುಕ್ ಬಳಕೆದಾರರು ಫೆಬ್ರವರಿ 22, 2024 ರಂದು ಹಂಚಿಕೊಂಡ ವಿಡಿಯೋ ಲಭ್ಯವಾಗದೆ.

ಭಾರತೀಯ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಅಂಗಡಿಯವರಿಗೆ ಮನವಿ ಮಾಡುವುದನ್ನು ವೀಡಿಯೊ ತೋರಿಸುತ್ತದೆ. ಬಂಗಾಳಿ ಭಾಷೆಯಲ್ಲಿನ ಶೀರ್ಷಿಕೆಯನ್ನು ಭಾಷಾಂತರಿಸಿದಾಗ,  “ಭಾರತೀಯ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಯಿತು” ಎಂದು ಅರ್ಥೈಸುತ್ತದೆ.

ಶಿಖಾ ಅವರ ಫೇಸ್‌ಬುಕ್ ಖಾತೆಯಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಅವರು ಗಣ ಅಧಿಕಾರ್ ಪರಿಷತ್ (ಗೋನೊ ಅಧಿಕಾರ್ ಪರಿಷತ್) ಪಕ್ಷದ ನಾಯಕಿ. ಈ ಮಾಹಿತಿಯನ್ನು ಬಳಸಿಕೊಂಡು, ಬಂಗಾಳಿ ಕೀವರ್ಡ್‌ಗಳೊಂದಿಗೆ ಗೂಗಲ್ ಸರ್ಚ್ ನಡೆಸಿದಾಗ ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿಯ ಫೇಸ್‌ಬುಕ್‌ ಖಾತೆ ಲಭ್ಯವಾಗಿದೆ. ಅವರ ಹೆಸರು ಮೊಹಮ್ಮದ್ ತಾರಿಕ್ ರೆಹಮಾನ್, ಮತ್ತು ಅವರು ಗಣ ಅಧಿಕಾರ್ ಪರಿಷತ್‌ನ ಸದಸ್ಯರಾಗಿದ್ದಾರೆ.

ಬಾಂಗ್ಲಾದೇಶದ ಸುದ್ದಿ ಸಂಸ್ಥೆ ನ್ಯೂ ಏಜ್‌ನ ವರದಿಯ ಪ್ರಕಾರ, ಗಣ ಅಧಿಕಾರ್ ಪರಿಷತ್ ಬಾಂಗ್ಲಾದೇಶದ ರಾಜಕೀಯ ಪಕ್ಷವಾಗಿದ್ದು, ಇದನ್ನು ಅಕ್ಟೋಬರ್ 2021 ರಲ್ಲಿ ಸ್ಥಾಪಿಸಲಾಯಿತು. ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ ನಾವು ಮೊಹಮ್ಮದ್ ತಾರಿಕ್ ಅವರನ್ನು ಸಂಪರ್ಕಿಸಿದಾಗ, “ವೀಡಿಯೊದಲ್ಲಿರುವ ವ್ಯಕ್ತಿ ನಾನೇ. ಇದು ಫೆಬ್ರವರಿ 2024 ರಲ್ಲಿ ನಡೆದ ಘಟನೆಯಾಗಿದ್ದು, ಇದು ದೇಶದಲ್ಲಿ ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವ ಅಭಿಯಾನದ ಭಾಗವಾಗಿತ್ತು. ಢಾಕಾ ನ್ಯಾಯಾಧೀಶರ ನ್ಯಾಯಾಲಯಕ್ಕೆ ಹೊಂದಿಕೊಂಡಿರುವ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದೆ” ಎಂದಿದ್ದಾರೆ.

ಇದಲ್ಲದೆ, 2024 ರ ಜನವರಿಯಲ್ಲಿ ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದವು, ಅಲ್ಲಿ ಶೇಖ್ ಹಸೀನಾ ನಾಲ್ಕನೇ ಅವಧಿಗೆ ಗೆದ್ದರು. ಅಲ್ ಜಜೀರಾ ವರದಿಯ ಪ್ರಕಾರ, ಪ್ರತಿಪಕ್ಷಗಳು ಚುನಾವಣೆಗಳನ್ನು ಬಹಿಷ್ಕರಿಸಿದವು ಮತ್ತು ಬಾಂಗ್ಲಾದೇಶದ ರಾಜಕೀಯದಲ್ಲಿ ಭಾರತ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿ ದೊಡ್ಡ “ಇಂಡಿಯಾ ಔಟ್” ಅಭಿಯಾನವನ್ನು ಪ್ರಾರಂಭಿಸಿದವು. #BoycottIndia ಅಭಿಯಾನವು ಜನವರಿ ಮಧ್ಯದಲ್ಲಿ ಪ್ರಾರಂಭವಾಯಿತು. ಈ ಅಭಿಯಾನಕ್ಕೆ ಸಂಬಂಧಿಸಿದ ಅನೇಕ ಫೋಟೋಗಳು ಮತ್ತು ವೀಡಿಯೊಗಳನ್ನು ಮೊಹಮ್ಮದ್ ತಾರಿಕ್ ರೆಹಮಾನ್ ಅವರ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಫೆಬ್ರವರಿ 19, 2024 ರಂದು, ಅವರ ಖಾತೆಯ ಪೋಸ್ಟ್‌ನಲ್ಲಿ ಬಹಿಷ್ಕಾರಕ್ಕೆ ಕರೆ ನೀಡಲಾದ ಭಾರತೀಯ ಉತ್ಪನ್ನಗಳನ್ನು ಪಟ್ಟಿ ಮಾಡಲಾಗಿದೆ.

ಈ ವರ್ಷದ ಫೆಬ್ರವರಿ 21 ರಂದು ಮಾಡಿದ ಪೋಸ್ಟ್‌ನಲ್ಲಿ, ತಾರಿಕ್ ಭಾರತೀಯ ಉತ್ಪನ್ನಗಳನ್ನು ಪಟ್ಟಿ ಮಾಡುವ ಅದೇ ಪೋಸ್ಟರ್ ಅನ್ನು ಹಿಡಿದಿರುವುದನ್ನು ಕಾಣಬಹುದು. ಪೋಸ್ಟ್‌ನಲ್ಲಿ ಬಾಂಗ್ಲಾ ಶೀರ್ಷಿಕೆ ಹೀಗಿದೆ, “ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಿ.”

2024 ರ ಫೆಬ್ರವರಿ-ಮಾರ್ಚ್‌ನಲ್ಲಿ ಗಣ ಅಧಿಕಾರ್ ಪರಿಷತ್ ಪಕ್ಷದ ಸದಸ್ಯರು ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವ ಅಭಿಯಾನದ ವರದಿಗಳನ್ನು ಬಾಂಗ್ಲಾದೇಶದ ಸುದ್ದಿ ಸಂಸ್ಥೆಗಳಾದ ಪ್ರೊಥೋ ಮಾಲೋ ಮತ್ತು ಅಜ್ಕರ್ ಪತ್ರಿಕೆ ಪ್ರಸಾರ ಮಾಡಿದ್ದವು. ಬಾಂಗ್ಲಾದೇಶದ ಆಗಿನ ಪ್ರಧಾನಿ ಶೇಖ್ ಹಸೀನಾ ಅವರು ವಿರೋಧ ಪಕ್ಷಗಳು ನಡೆಸುತ್ತಿರುವ ‘ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಿ’ ಅಭಿಯಾನವನ್ನು ಖಂಡಿಸಿದ್ದರು.

ಫೆಬ್ರವರಿ ಮತ್ತು ಮಾರ್ಚ್ 2024 ರ ನಡುವೆ, ಬಾಂಗ್ಲಾದೇಶದ ಸುದ್ದಿ ಸಂಸ್ಥೆಗಳಾದ ಪ್ರೊಥೊ ಮಾಲೋ ಮತ್ತು ಅಜ್ಕರ್ ಪತ್ರಿಕೆ ಗಣ ಅಧಿಕಾರ್ ಪರಿಷತ್ ಪಕ್ಷವು ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವ ಅಭಿಯಾನವನ್ನು ಮುನ್ನಡೆಸುತ್ತಿದೆ ಎಂದು ವರದಿ ಮಾಡಿದೆ.

ಆ ಸಮಯದಲ್ಲಿ, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ವಿರೋಧ ಪಕ್ಷಗಳ ಈ ಅಭಿಯಾನವನ್ನು ಟೀಕಿಸಿದ್ದರು. ಆದ್ದರಿಂದ “ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವ ಅಭಿಯಾನ” ಇತ್ತೀಚಿನದ್ದಾಗಿರದೇ ಹಳೆಯದಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ  ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಶಾಲಾ ಮಕ್ಕಳು ಕೇಬಲ್ ಕಾರ್ ಬಳಸಿ ನದಿ ದಾಟುವ ಅಪಾಯಕಾರಿ ದೃಶ್ಯ ಭಾರತದ್ದಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights