FACT CHECK | ಯೋಗಿ ವಿರುದ್ದ ತಿರುಗಿಬಿದ್ರಾ ಯತಿ ನರಸಿಂಹಾನಂದ?

ಹಿಂದೂ ರಕ್ಷಣಾ ದಳದ ಅಧ್ಯಕ್ಷ ಭೂಪೇಂದ್ರ ತೋಮರ್ ಅಲಿಯಾಸ್ ಪಿಂಕಿ ಚೌಧರಿ ವಿರುದ್ಧ ಗೂಂಡಾ ಕಾಯ್ದೆ ವಿರುದ್ಧ ಗಾಜಿಯಾಬಾದ್‌ನ ಡಿಎಂ ಕಚೇರಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಇಲ್ಲಿ ಪಿಂಕಿ ಚೌಧರಿ ಅವರನ್ನು ಬೆಂಬಲಿಸಲು ದಸ್ನಾದೇವಿ ದೇವಸ್ಥಾನದಿಂದ ಡಿಎಂ ಕಚೇರಿಗೆ ಹೋಗುತ್ತಿದ್ದ ಮಹಾಮಂಡಲೇಶ್ವರ ಯತಿ ನರಸಿಂಹಾನಂದ ಗಿರಿ ಅವರನ್ನು ಪೊಲೀಸರು ತಡೆದಿದ್ದಾರೆ. ಹೀಗಾಗಿಯೇ ಅವರು ಯೋಗಿ ಆದಿತ್ಯನಾಥ್‌ ಅವರ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

ಉತ್ತರ ಪ್ರದೇಶದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ ಎಂದು ಹಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಬಿಜೆಪಿಯ ಅಂಗಸಂಸ್ಥೆಗಳೇ ಈಗ ಯೋಗಿ ಆದಿತ್ಯನಾಥ್‌ ಅವರ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿವೆ ಎಂದು ಪ್ರತಿಪಾದಿಸಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌ 

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶೀಲಿಸಲು ಕೀವರ್ಡ್ ಬಳಸಿ ಗೂಗಲ್ ಸರ್ಚ್ ಮಾಡಿದಾಗ, 11 ಅಕ್ಟೋಬರ್‌ 2023ರಂದು ಎಬಿಪಿ ನ್ಯೂಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಲಾದ ವಿಡಿಯೋವೊಂದು ಲಭ್ಯವಾಗಿದೆ. ಈ ವಿಡಿಯೋದಲ್ಲಿ ವೈರಲ್‌ ವಿಡಿಯೋದಲ್ಲಿ ಹೇಳಿದಂತೆ ಯೇತಿ ನರಸಿಂಹಾನಂದರು ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಅವರನ್ನು ಟೀಕಿಸಿರುವುದು ನಿಜ ಆದರೆ ಅದು ಇತ್ತೀಚೆಗೆ ಎಂಬುದು ಸುಳ್ಳು.

ಈ ಘಟನೆ ಬಗ್ಗೆ ತಿಳಿಯಲು ಮತ್ತಷ್ಟು ಸರ್ಚ್ ಮಾಡಿದಾಗ, 11 ಅಕ್ಟೋಬರ್‌ 2023ರಂದು ಇದೇ ಮಾಹಿತಿಯೊಂದಿಗೆ IANS ಎಂಬ ಯೂಟ್ಯುಬ್‌ ಚಾನಲ್‌ ವಿಡಿಯೋ ಅಪ್‌ಲೋಡ್‌ ಆಗಿರುವುದು ಕಂಡು ಬಂದಿದೆ. ಇದರಲ್ಲಿ ಎಬಿಪಿ ನ್ಯೂಸ್‌ನಲ್ಲಿ ಉಲ್ಲೇಖಿಸಿರುವ ಅಂಶಗಳು ಕಂಡು ಬಂದಿದೆ. ಕೇವಲ ಇಷ್ಟು ಮಾತ್ರವಲ್ಲದೆ ಅದೇ ದಿನ ಇಂಡಿಯಾ ಟಿವಿ ಕೂಡ ತನ್ನ ವೆಬ್‌ತಾಣದಲ್ಲಿ ಇದೇ ಮಾಹಿತಿಯ ವರದಿಯನ್ನು ಪ್ರಕಟಿಸಿರುವುದು ಕೂಡ ಕಂಡು ಬಂದಿದೆ. ಇನ್ನು ಇಲ್ಲಿ ವೈರಲ್‌ ವಿಡಿಯೋದ ಟಿಪ್ಪಣಿಗಳಲ್ಲಿ ಉಲ್ಲೇಖಿಸಿರುವಂತೆ ಯಾವುದೇ ರಾಜಕೀಯ ಆಯಾಮಗಳ ಕುರಿತ ಮಾಹಿತಿ ಕಂಡು ಬಂದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, 2023ರಲ್ಲಿ ಹಿಂದೂ ರಕ್ಷಣಾ ದಳದ ಅಧ್ಯಕ್ಷ ಭೂಪೇಂದ್ರ ತೋಮರ್ ಅಲಿಯಾಸ್ ಪಿಂಕಿ ಚೌಧರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ್ ವಿರುದ್ಧ ಯತಿ ನರಸಿಂಹಾನಂದರು ಟೀಕಿಸಿರುವ ಸಂದರ್ಭವನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪಾಕಿಸ್ತಾನದ 2021ರ ಹಳೆಯ ಘಟನೆಯನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights