FACT CHECK | ವಿಮಾನದಲ್ಲಿ ಹಿಂದೂ ಪ್ರಯಾಣಿಕನ ಮೇಲೆ ಮುಸ್ಲಿಂ ಜಿಹಾದಿಗಳಿಂದ ಹಲ್ಲೆ ನಡೆದಿದ್ದು ನಿಜವೇ?

ವಿಮಾನದಲ್ಲಿ ಮುಸ್ಲಿಂ ಜಿಹಾದಿಗಳು ಹಿಂದೂ ಯುವಕನ ಮೇಲೆ ಸಣ್ಣ ವಿಷಯಕ್ಕೆ ಅಟ್ಟಹಾಸ ಮೆರೆದಿದ್ದಾರೆ. ವಿಮಾನ ಮುಂಬೈ ಯಿಂದ ಹೊರಟಿತ್ತು. ಎಲ್ಲಾ ಮುಸಲ್ಮಾನ್ ಜಿಹಾದಿಗಳ ಬಂಧನ ವಾಗಿದೆ” ಇಲ್ಲಿ ಪ್ರಶ್ನೆ ಉದ್ಭವವಾಗೋದು ವಿಮಾನದಲ್ಲಿನ  ಮಿಕ್ಕ ಹಿಂದೂಗಳು ಮೂಕ ಪ್ರೇಕ್ಷಕ ಎಂಬ ಕೋಮು ದ್ವೇಷದ ಹಿನ್ನಲೆಯಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ

Fact Check: ವಿಮಾನದಲ್ಲಿ ಮುಸ್ಲಿಂ ಜಿಹಾದಿಗಳು ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದ ಈ ವೀಡಿಯೋ ಹಿಂದಿನ ಸತ್ಯವೇನು?

0.44 ಸೆಕೆಂಡ್ ಗಳ ವೈರಲ್ ವಿಡಿಯೋದಲ್ಲಿ, ವಿಮಾನದಲ್ಲಿ ಯುವಕನೊಬ್ಬನನ್ನು ಮತ್ತೊಬ್ಬ ಮತ್ತು ಆತನ ಜೊತೆಯಲ್ಲಿದ್ದ ಕೆಲವರು ಹೊಡೆಯುವುದನ್ನು ನೋಡಬಹುದು. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಪ್ರತಿಪಾದಿಸಿದಂತೆ ಈ ಘಟನೆಗೆ ಕೋಮು ಹಿನ್ನಲೆ ಇದೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್  ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಈ ಘಟನೆ ಬ್ಯಾಂಕಾಕ್-ಕೋಲ್ಕತಾ ವಿಮಾನದಲ್ಲಿ ನಡೆದ ಪ್ರಯಾಣಿಕರ ಜಗಳ ಎಂದು ತಿಳಿದುಬಂದಿದೆ.

ಡಿಸೆಂಬರ್ 29, 2022ರ ಬ್ಯುಸಿನೆಸ್‌ ಸ್ಟಾಂಡರ್ಡ್ ವರದಿಯ ಪ್ರಕಾರ, “ಈ ವಾರದ ಆರಂಭದಲ್ಲಿ ಬ್ಯಾಂಕಾಕ್‌ನಿಂದ ಕೋಲ್ಕತ್ತಾಗೆ ಥಾಯ್ ಸ್ಮೈಲ್ ಏರ್‌ವೇಸ್ ವಿಮಾನದಲ್ಲಿದ್ದ ಕೆಲವು ಪ್ರಯಾಣಿಕರು ಗಲಾಟೆಯಲ್ಲಿ ತೊಡಗಿದ್ದರು ಎಂದು ವರದಿಯಾಗಿದೆ. ವಿಮಾನದೊಳಗಿನ ಜಗಳದ ವಿಡಿಯೋ ತುಣುಕನ್ನು ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಕ್ಲಿಪ್‌ನಲ್ಲಿ, ಒಬ್ಬ ವ್ಯಕ್ತಿಗೆ ಕೆಲವು ಸಹ-ಪ್ರಯಾಣಿಕರು ಅನೇಕ ಬಾರಿ ಕಪಾಳಕ್ಕೆ ಹೊಡೆಯುವುದನ್ನು ಕಾಣಬಹುದು. ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರ ಪ್ರಕಾರ, ಡಿಸೆಂಬರ್ 26 ರಂದು ವಿಮಾನವು ಟೇಕಾಫ್‌ಗಾಗಿ ರನ್‌ವೇಗೆ ಬರುವ ಮೊದಲು ಈ ಘಟನೆ ಸಂಭವಿಸಿದೆ. ಅವರು ತಮ್ಮ ತಾಯಿಯೊಂದಿಗೆ ಕೋಲ್ಕತ್ತಾಗೆ ಪ್ರಯಾಣಿಸುತ್ತಿದ್ದರು. ಕೋಲ್ಕತ್ತಾ ಮೂಲದ ಆ ಪ್ರಯಾಣಿಕರು ತಮ್ಮ ಅನಾಮಧೇಯತೆಯ ಷರತ್ತಿನ ಮೇರೆಗೆ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ” ಎಂದಿದೆ.

Fact Check: ವಿಮಾನದಲ್ಲಿ ಮುಸ್ಲಿಂ ಜಿಹಾದಿಗಳು ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದ ಈ ವೀಡಿಯೋ ಹಿಂದಿನ ಸತ್ಯವೇನು?

ಡಿಸೆಂಬರ್ 30, 2024ರ ದಿ ನ್ಯೂಸ್‌ ಮಿನಿಟ್ ವರದಿಯ ಪ್ರಕಾರ, “ಈ ವಾರದ ಆರಂಭದಲ್ಲಿ ಬ್ಯಾಂಕಾಕ್‌ನಿಂದ ಕೋಲ್ಕತ್ತಾಗೆ ಥಾಯ್ ಸ್ಮೈಲ್ ಏರ್‌ವೇಸ್ ವಿಮಾನದಲ್ಲಿ ಪ್ರಯಾಣಿಕರ ನಡುವಿನ ಜಗಳದ ಬಗ್ಗೆ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ​​​​ಸೆಕ್ಯುರಿಟಿ (ಬಿಸಿಎಎಸ್) ಗುರುವಾರ ಪೊಲೀಸ್ ದೂರು ದಾಖಲಿಸಿದೆ ಮತ್ತು ಅಂತಹ ಪ್ರಯಾಣಿಕರ ವರ್ತನೆ ಸ್ವೀಕಾರಾರ್ಹವಲ್ಲ ಎಂದು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭದ್ರತಾ ನಿರೀಕ್ಷಕರು ತಿಳಿಸಿದ್ದಾರೆ. “ಥಾಯ್‌ ಸ್ಮೈಲ್‌ ಏರ್ ವೇ ವಿಮಾನದಲ್ಲಿ ಪ್ರಯಾಣಿಕರ ನಡುವೆ ನಡೆದ ಗಲಾಟೆಗೆ ಸಂಬಂಧಿಸಿದಂತೆ, ಭಾಗಿಯಾಗಿರುವವರ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದೆ. ಅಂತಹ ವರ್ತನೆ ಸ್ವೀಕಾರಾರ್ಹವಲ್ಲ” ಎಂದು ಸಿಂಧಿಯಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.” ಎಂದಿದೆ. ಇದರೊಂದಿಗೆ, “ಮೂಲಗಳ ಪ್ರಕಾರ, ನಾಗರಿಕ ವಿಮಾನಯಾನ ನಿಯಂತ್ರಣ ಪ್ರಾಧಿಕಾರ ​​(ಡಿಜಿಸಿಎ) ಗೆ ಸಲ್ಲಿಸಿದ ವರದಿಯಲ್ಲಿ ವಿಮಾನಯಾನ ಸಂಸ್ಥೆಯು ಕ್ಯಾಬಿನ್ ಸಿಬ್ಬಂದಿಯ ಮನವಿಯ ಹೊರತಾಗಿಯೂ ಪ್ರಯಾಣಿಕರು ತನ್ನ ಬಿಡಿಸಿದ ಆಸನವನ್ನು ನೇರವಾಗಿ ಮಾಡಲು ನಿರಾಕರಿಸಿದ ನಂತರ ಜಗಳ ಪ್ರಾರಂಭವಾಯಿತು ಎಂದು ಹೇಳಿದೆ. ಯಾವುದೇ ಪ್ರಯಾಣಿಕರಿಗೆ ಗಂಭೀರ ಗಾಯವಾಗಿಲ್ಲ.” ಎಂದಿದೆ.

Fact Check: ವಿಮಾನದಲ್ಲಿ ಮುಸ್ಲಿಂ ಜಿಹಾದಿಗಳು ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದ ಈ ವೀಡಿಯೋ ಹಿಂದಿನ ಸತ್ಯವೇನು?

ಜನವರಿ 14, 2022ರ ಟೈಮ್ಸ್ ಆಫ್‌ ಇಂಡಿಯಾ ವರದಿಯ ಪ್ರಕಾರ, “ಟೇಕಾಫ್‌ ವೇಳೆ ಕ್ಯಾಬಿನ್‌ ಸಿಬ್ಬಂದಿ ಅವರ ಸುರಕ್ಷತಾ ಮಾನದಂಡಗಳನ್ನು ಪಾಲಿಸದ ಪ್ರಯಾಣಿಕರೊಬ್ಬರು ತಮ್ಮ ಸೀಟನ್ನು ಮುಂಬದಿಗೆ ಬರುವಂತೆ ಮಾಡಿರಲಿಲ್ಲ. ತಾವು ಬೆನ್ನು ನೋವಿನಿಂದ ಬಳಲುತ್ತಿರುವುದಾಗಿ ಹೇಳಿದ್ದರು. ಇದು ಸಿಬ್ಬಂದಿಯೊಂದಿಗೆ ಮಾತಿಗೆ ಕಾರಣವಾಗಿದ್ದು, ಈ ವೇಳೆ ಇತರ ಪ್ರಯಾಣಿಕರು ಅವರ ಮೇಲೆ ದಾಳಿ ಮಾಡಿದ್ದಾರೆ. ವೀಡಿಯೋದಲ್ಲಿ ಹಿಂದಿನ ಸೀಟಿನ ಪ್ರಯಾಣಿಕರು ಮುಂದಿನ ಸೀಟಿನ ವ್ಯಕ್ತಿಯೊಂದಿಗೆ ವಾದಿಸಿ ಅವರಿಗೆ ಹೊಡೆಯುವುದು ಮತ್ತು ಅವರ ಕನ್ನಡಕ ತೆಗೆದು ಪದೇ ಪದೇ ಮುಖಕ್ಕೆ ಹೊಡೆಯುವುದು ಈ ವೇಳೆ ಆ ವ್ಯಕ್ತಿ ಅಸಹಾಯಕರಾಗಿ ಮುಖವನ್ನು ಮುಚ್ಚಿಕೊಳ್ಳುವುದು ಕಾಣಿಸುತ್ತದೆ” ಎಂದಿದೆ.

Fact Check: ವಿಮಾನದಲ್ಲಿ ಮುಸ್ಲಿಂ ಜಿಹಾದಿಗಳು ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದ ಈ ವೀಡಿಯೋ ಹಿಂದಿನ ಸತ್ಯವೇನು?

ಡಿಸೆಂಬರ್ 30, 2022ರ ಹಿಂದೂಸ್ತಾನ್‌ ಟೈಮ್ಸ್ ವರದಿಯಲ್ಲಿ “ಸೋಮವಾರ, ಥಾಯ್ ಸ್ಮೈಲ್ ಫ್ಲೈಟ್‌ನಲ್ಲಿ ಒಬ್ಬ ವ್ಯಕ್ತಿ ವಿಮಾನ ನಿರ್ಗಮನದ ಮೊದಲು ಸಿಬ್ಬಂದಿಯಿಂದ ಸುರಕ್ಷತಾ ನಿರ್ದೇಶನಗಳನ್ನು ಗಮನಿಸಲು ನಿರಾಕರಿಸಿದ ನಂತರ ಪ್ರಯಾಣಿಕರ ಗುಂಪೊಂದು ಆ ವ್ಯಕ್ತಿ ಮೇಲೆ ಹಲ್ಲೆ ನಡೆಸಿತು. ಮಾತಿನ ಚಕಮಕಿಯ ನಂತರ ಈ ಘಟನೆ ನಡೆದಿರುವುದನ್ನು ವಿಮಾನದಲ್ಲಿದ್ದ ಇನ್ನೊಬ್ಬರು ವ್ಯಕ್ತಿಯೊಬ್ಬರು ಮಾಡಿದ ವೀಡಿಯೋದಲ್ಲಿ ಕಾಣಿಸುತ್ತದೆ. ಒಬ್ಬ ವ್ಯಕ್ತಿ ನಂತರ ಇನ್ನೊಬ್ಬನ ಮೇಲೆ ಕಪಾಳಮೋಕ್ಷ ಮಾಡುವುದು ಮತ್ತು ಗುದ್ದುವುದು ಇದರಲ್ಲಿ ಕಾಣಿಸುತ್ತದೆ” ಎಂದಿದೆ.

ಇದೇ ವರದಿಯಲ್ಲಿ “ಸುರಕ್ಷತಾ ನಿಯಮಗಳನ್ನು ಪಾಲಿಸಲು ನಿರಾಕರಿಸಿದ ವ್ಯಕ್ತಿ ಮತ್ತು ಇನ್ನೊಬ್ಬ ಪ್ರಯಾಣಿಕರಿಂದ ಹಲ್ಲೆಗೊಳಗಾದ ವ್ಯಕ್ತಿಯನ್ನು 37ಸಿ ಸೀಟಿನ ಸಂಖ್ಯೆಯಲ್ಲಿದ್ದ ಮೊಹಮ್ಮದ್‌ ಹುಸೇನ್‌ ಎಂದು ಗುರುತಿಸಲಾಗಿದೆ.” ಇನ್ನು “41ಸಿ ಸೀಟಿನಲ್ಲಿದ್ದ ವ್ಯಕ್ತಿ ಸುರಕ್ಷತಾ ನಿಯಮಗಳನ್ನು ಪಾಲಿಸದ ವ್ಯಕ್ತಿಯೊಂದಿಗೆ ವಾದವನ್ನು ಮಾಡುತ್ತ, ಕೊನೆಗೆ ಹಲ್ಲೆ ಮಾಡಿದ್ದಾರೆ, ಈ ವ್ಯಕ್ತಿಯ ಗುರುತು ತಿಳಿದುಬಂದಿಲ್ಲ” ಎಂದಿದೆ.

Fact Check: ವಿಮಾನದಲ್ಲಿ ಮುಸ್ಲಿಂ ಜಿಹಾದಿಗಳು ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದ ಈ ವೀಡಿಯೋ ಹಿಂದಿನ ಸತ್ಯವೇನು?

ಪ್ರಕರಣದ ಬಗ್ಗೆ ನಾವು ಇನ್ನಷ್ಟು ಶೋಧ ನಡೆಸಿದಾಗ, ಪ್ರಯಾಣಿಕರ ನಡುವೆ ಹೊಡೆದಾಟ ನಡೆದ ಬಳಿಕ ಡಿಸೆಂಬರ್ 29, 2022ರಂದು ಥಾಯ್‌ ಸ್ಮೈಲ್‌ ಇಂಡಿಯಾ ಏರ್ ಲೈನ್ ಈ ಕುರಿತು ಕ್ಷಮೆ ಕೇಳಿರುವುದು ಗೊತ್ತಾಗಿದೆ. ಈ ಕುರಿತಾಗಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು ಅದು ಇಲ್ಲಿದೆ.

ಈ ಪ್ರಕರಣದ ಕುರಿತ ಮಾಧ್ಯಮ ವರದಿಗಳನ್ನು ಇಲ್ಲಿಇಲ್ಲಿ, ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಬ್ಯಾಂಕಾಂಕ್ ನಿಂದ ಕೋಲ್ಕತಾಕ್ಕೆ ಹೊರಟಿದ್ದ ವಿಮಾನದಲ್ಲಿ ಸುರಕ್ಷತಾ ನಿಯಮ ಪಾಲನೆ ಕುರಿತಾಗಿ ಪ್ರಯಾಣಿಕರ ನಡುವೆ ನಡೆದ 2022ರ ಹಳೆಯ ಗಲಾಟೆಯನ್ನು ಹಿಂದೂ ಮುಸ್ಲಿಂ ಎಂಬ ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಷರಿಯಾ ಕಾನೂನಿನಂತೆ ಅತ್ಯಾಚಾರಕ್ಕೆ ಒಳಗಾದ ಮಹಿಳೆಯನ್ನು ಥಳಿಸಲಾಗಿದೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights