FACT CHECK | ದೇವೇಂದ್ರ ಫಡ್ನವೀಸ್ ಗನ್ ಹಿಡಿದ ಹಳೆಯ ಪೋಸ್ಟರ್‌ಅನ್ನು ಬಾಬಾ ಸಿದ್ದಿಕಿ ಹತ್ಯೆಗೆ ಲಿಂಕ್ ಮಾಡಿ ತಪ್ಪಾಗಿ ಹಂಚಿಕೆ

ಗ್ಯಾಂಗ್‌ಸ್ಟಾರ್ ಲಾರೆನ್ಸ್ ಬಿಷ್ಣೋಯ್ ಅವರ ಆದೇಶದ ಮೇರೆಗೆ ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಹಿರಿಯ ಎನ್‌ಸಿಪಿ ಮುಖಂಡ ಬಾಬಾ ಸಿದ್ದಿಕಿ ಅವರನ್ನು ಕಳೆದ ವಾರ ಅಕ್ಟೋಬರ್ 12 ರಂದು ಮುಂಬೈನ ಅವರ ಮಗನ ಕಚೇರಿಯ ಹೊರಗೆ ಗುಂಡಿಕ್ಕಿ ಕೊಂದ ನಂತರ, ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು ರಾಜ್ಯದ ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವ ದೇವೇಂದ್ರ ಫಡ್ನವೀಸ್ ಅವರನ್ನು ಒಳಗೊಂಡ ಪೋಸ್ಟರ್‌ವೊಂದನ್ನು ಹಂಚಿಕೊಳ್ಳುತ್ತಿದ್ದಾರೆ.

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಗನ್ ಹಿಡಿದಿಡುವ ಪೋಸ್ಟರ್‌ನ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಅದರಲ್ಲಿ ಹಿಂದಿಯಲ್ಲಿ ‘ಬದ್ಲಾ ಪುರ’ (ಸೇಡು ತೀರಿತು) ಎಂದು ಬರೆಯಲಾಗಿದೆ. ಇತ್ತೀಚೆಗೆ ನಡೆದ ಎನ್‌ಸಿಪಿ ಮುಖಂಡ ಬಾಬಾ ಸಿದ್ದೀಕಿ ಅವರ ಹತ್ಯೆಯೊಂದಿಗೆ ಪೋಸ್ಟರ್‌ಗಳಿಗೆ ಸಂಬಂಧ ಕಲ್ಪಿಸುವ ಮೂಲಕ ಪೋಸ್ಟರ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ.

ಇದರರ್ಥ ಫಡ್ನವೀಸ್ ಈ ಕೊಲೆಯನ್ನು ಮಾಡಿದ್ದಾರೆ ಎಂದರ್ಥವೇ? ಗೃಹ ಸಚಿವರು ಮತ್ತು ಉಪಮುಖ್ಯಮಂತ್ರಿಯ ಇಂತಹ ಪೋಸ್ಟರ್ ಗಳನ್ನು ಅವರ ಅನುಮತಿಯಿಲ್ಲದೆ ನಗರದಾದ್ಯಂತ ಹಾಕಬಹುದೇ? ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ದೇವರು ಈಗ ಈ ದೇಶವನ್ನು ರಕ್ಷಿಸಲಿ” ಎಂದು ಎಎಪಿ ನಾಯಕ ನರೇಶ್ ಬಲ್ಯಾನ್ ಅವರು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂಧು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಲಾಗುತ್ತಿರುವ ಪ್ರತಿಪಾದನೆಯನ್ನು ಪರಿಶೀಲಿಸಲು  ಪೋಸ್ಟರ್ ಅನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್‌ ಮಾಡಿದಾಗ, ಸೆಪ್ಟೆಂಬರ್ 26, 2024ರಂದು ‘ಹಿಂದೂಸ್ಥಾನ್ ಟೈಮ್ಸ್‌’ನಲ್ಲಿ  ಪ್ರಕಟವಾದ ಸುದ್ದಿಯ ಜತೆಗೆ ಇದೇ ಫೋಟೊ ಪ್ರಕಟವಾಗಿರುವುದು ಕಂಡುಬಂದಿದೆ.

‘ಬದ್ಲಾಪುರ ಲೈಂಗಿಕ ದೌರ್ಜನ್ಯ ಘಟನೆಯ ಆರೋಪಿ ಅಕ್ಷಯ್ ಶಿಂದೆ ಎನ್‌ಕೌಂಟರ್‌ನಲ್ಲಿ ಹತನಾಗಿದ್ದು, ಅಪರಿಚಿತರು ಮುಂಬೈನಲ್ಲಿ ದೇವೇಂದ್ರ ಫಡಣವೀಸ್ ಅವರ ಪೋಸ್ಟರ್‌ಗಳನ್ನು ಅಳವಡಿಸಿದ್ದಾರೆ. ಸೇಡು ತೀರಿತು ಎಂದು ಅದರಲ್ಲಿ ಬರೆಯಲಾಗಿದೆ’ ಎಂದು ಫೋಟೊ ಜತೆಗೆ ವಿವರಣೆ ನೀಡಲಾಗಿತ್ತು. ಬಾಬಾ ಸಿದ್ದೀಕಿ ಹತ್ಯೆ ನಡೆದಿರುವುದು ಅಕ್ಟೋಬರ್ 12ರಂದು. ಫಡಣವೀಸ್ ಪೋಸ್ಟರ್‌ಗಳು ಬದ್ಲಾಪುರ ಎನ್‌ಕೌಂಟರ್‌ಗೆ ಸಂಬಂಧಿಸಿದ್ದು ಎಂಬ ಮಾಹಿತಿ ಲಭ್ಯವಾಗಿದೆ.

ಬದ್ಲಾಪುರ ಆರೋಪಿಗಳ ‘ಎನ್ಕೌಂಟರ್’ ಹತ್ಯೆ

ಮಹಾರಾಷ್ಟ್ರದ ಬದ್ಲಾಪುರದ ಶಾಲೆಯೊಂದರಲ್ಲಿ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿದ್ದ ಅಕ್ಷಯ್ ಶಿಂಧೆ ಎಂಬಾತನನ್ನು ಥಾಣೆ ಪೊಲೀಸರು ಹತ್ಯೆ ಮಾಡಿದ್ದಾರೆ. ಪೊಲೀಸರು ಸೆಪ್ಟೆಂಬರ್ 23 ರಂದು ಅವರನ್ನು ತಲೋಜಾ ಜೈಲಿನಿಂದ ಬದ್ಲಾಪುರಕ್ಕೆ ಕರೆದೊಯ್ಯುತ್ತಿದ್ದರು.

ರಾಜಕೀಯ ವಿವಾದವನ್ನು ಹುಟ್ಟುಹಾಕಿದ ವಿವಾದಾತ್ಮಕ ಪೋಸ್ಟರ್ ಬಗ್ಗೆ ಇದೇ ರೀತಿಯ ವರದಿಗಳನ್ನು  ಇಲ್ಲಿಇಲ್ಲಿ  ಮತ್ತು ಇಲ್ಲಿ ನೋಡಬಹುದು, ಇದು ಸಿದ್ದೀಕ್ ಅವರ ಹತ್ಯೆಗೆ ಮುಂಚಿನದು ಎಂದು ದೃಢಪಡಿಸುತ್ತದೆ. ಬಾಬಾ ಸಿದ್ದೀಕಿ ಹತ್ಯೆ ನಡೆಯುವುದಕ್ಕೆ ಮುಂಚೆಯೆ ಅವನ್ನು ಅಂಟಿಸಲಾಗಿತ್ತು, ಈ ಪೋಸ್ಟರ್‌ಗೂ ಬಾಬಾ ಸಿದ್ದೀಕಿ ಹತ್ಯೆಗೂ ಯಾವುದೇ ಸಂಬಂಧ ಇಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಬದ್ಲಾಪುರ ಶಾಲಾ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗಳನ್ನು ಎನ್ಕೌಂಟರ್ ಮಾಡಿದ ನಂತರ ಹಾಕಲಾದ ದೇವೇಂದ್ರ ಫಡ್ನವೀಸ್ ಬಂದೂಕು ಹಿಡಿದಿರುವ ಹಳೆಯ ಪೋಸ್ಟರ್‌ಗಳನ್ನು ಎನ್‌ಸಿಪಿ ಮುಖಂಡ ಬಾಬಾ ಸಿದ್ದಿಕಿ ಅವರ ಹತ್ಯೆಗೆ ಸಂಬಂಧಿಸಿವೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಗಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಅಯೋಧ್ಯೆಯಲ್ಲಿ ಇಬ್ಬರು ಸನ್ಯಾಸಿಗಳು ಹುಡುಗಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights