ಮನೆಗೆ ಮರಳುತ್ತಿರುವ ಸಂತೋಷಕ್ಕಿಂತ ಭವಿಷ್ಯ ಮಂಕಾಗಿ ಕಾಣುತ್ತಿದೆ: ವಲಸೆ ಕಾರ್ಮಿಕರ ಅಂತರಾಳದ ಗೋಳು

ಗೋವಾದಿಂದ ಮಧ್ಯಪ್ರದೇಶದ ಗ್ವಾಲಿಯರ್‌ಗೆ ವಿಶೇಷ ರೈಲಿನಲ್ಲಿ ವಲಸೆ ಕಾರ್ಮಿಕರು ತೆರಳಿದ್ದಾರೆ. ಅವರಿಗೆ ತಿವಿಮ್ ನಿಲ್ದಾಣದಲ್ಲಿ ರೈಲು ಟಿಕೆಟ್ ಪರೀಕ್ಷಕರು ಮತ್ತು ಗೋವಾ ಸರ್ಕಾರಿ ಅಧಿಕಾರಿಗಳು ಚಪ್ಪಾಳೆ ತಟ್ಟಿ ಬೀಳ್ಕೊಟ್ಟಿದ್ದಾರೆ. ಈ ರೈಲಿನಲ್ಲಿ 1196 ಕಾರ್ಮಿಕರು ಪ್ರಯಾಣವನ್ನು ಬೆಳೆಸಿದ್ದಾರೆ.

ರೈಲಿನಲ್ಲಿ ಹೊರಟವರು ಗ್ವಾಲಿಯರ್‌f ಸುತ್ತಮುತ್ತಲ 08 ಜಿಲ್ಲೆಯವರು. ಅವರ ಡೇಟಾಗಳನ್ನು ಪಡೆದು ಮರ್ಧಯಪ್ರದೇಶ ಸರ್ಕಾರದೊಂದಿಗೆ ಹಂಚಿಕೊಂಡು ರೈಲುವ್ಯವಸ್ಥೆ ಮಾಡಲಾಗಿದೆ. ಕೊರೊನಾ ಸಂಬಂಧಿ ಪರೀಕ್ಷೆಗಳನ್ನು ಮಾಡಿ, ಊಟದ ಪ್ಯಾಕೇಟ್‌ಗಳನ್ನು ನೀಡಿ ವಲಸೆ ಕಾರ್ಮಿಕರನ್ನು ಕಳುಹಿಸಲಾಗಿದೆ.

ಇವರಲ್ಲಿ ಕೆಲಸ ಕಳೆದುಕೊಂಡವರು, ಲಾಕ್‌ಡೌನ್‌ ಮುಗಿದ ನಂತರ ಕೆಲಸ ಮುಂದುವೆರೆಸಬಹುದಾದವರು, ಮತ್ತೆ ಕೆಲಸ ಹುಡುಕ ಅಲೆದಾಡಬೇಕಾದವರು. ಹೀಗೆ ಹಲವು ರೀತಿಯ ಜನರಿದ್ದಾರೆ. ಆ ಪ್ರಯಾಣಿಕರಲ್ಲಿ ಕೆಲಸ ಕಳೆದುಕೊಂಡು ಮುಂದೇನು ಎಂಬುದು ತೋಚದೆ ತನ್ನೂರಿಗೆ ಪ್ರಯಾಣ ಬೆಳೆಸಿರುವ ಸತ್ನಾ ಮೂಲಕ ಕಿಶನ್‌ ಕುಮಾರ್‌ ಕೂಡ ಒಬ್ಬರು.

“ಮನೆಗೆ ಮರಳುವುದು ಒಳ್ಳೆಯದು, ಆದರೆ ಭವಿಷ್ಯವು ಮಂಕಾಗಿ ಕಾಣುತ್ತಿದೆ. ಕೃಷಿ ಒಂದು ಆಯ್ಕೆಯಾಗಿದೆ. ಆದರೆ, ಪರಿಸ್ಥಿತಿಗಳು ಮನೆಗೆ ಹಿಂದುರುಗುವಷ್ಟು ಸುಲಭವಾಗಿಲ್ಲ” ಎಂದು ಕಿಶನ್ ಹೇಳಿದ್ದಾರೆ.

ಈ ಮಾತು ಬಹುಶಃ ದೇಶದ ವಿವಿಧ ಭಾಗಗಳಿಗೆ ವಲಸೆ ಹೋಗಿದ್ದ ಬಹುಸಂಖ್ಯಾತ ಅಂತರಾಳದಲ್ಲಿರುವ ದುಗುಡವನ್ನು ನಮ್ಮೆದುರಿಗೆ ತಂದು ನಿಲ್ಲಿಸಿದೆ. ಇದ್ದ ಸ್ಥಳಗಳಲ್ಲಿ ಉದ್ಯೋಗವೂ ಇಲ್ಲದೆ, ಆಹಾರವೂ ಇಲ್ಲದೆ, ಇರಲು ಸಣ್ಣ ಸೂರು ಇಲ್ಲದೆ. ವ್ಯವಸ್ಥೆಯ ಮೇಲಿನ ನಂಬಿಕೆಯನ್ನೂ, ಭರವಸೆಯನ್ನೂ ಕಳೆದುಕೊಂಡು ಊರಿನ ಹಾದಿ ಹಿಡಿದಿರುವವರೇ ಹೆಚ್ಚು.

ಮೊನ್ನೆ, ಕರ್ನಾಟಕದಿಂದ ಬಿಹಾರಕ್ಕೆ ಹೊರಟಿದ್ದ ನೂರಾನು ಕಾರ್ಮಿಕರು ಹೇಳಿದ್ದೂ ಇದನ್ನೇ, ಕರ್ನಾಟಕದಲ್ಲಿ ಬಿಲ್ಡರ್‌ಗಳ ಲಾಬಿಗೆ ಮಣಿದ ಸರ್ಕಾರ ರೈಲುಗಳನ್ನು ರದ್ದುಗೊಳಿಸಿತ್ತು. ಇದರಿಂದ ನೊಂದ ಕಾರ್ಮಿಕರು ನಡೆದೇ ಪ್ರಯಾಣ ಆಂರಭಿಸಿದ್ದರು. ಹೈದರಾಬಾದ್‌ನಿಂದ ರೈಲು ಇದೆಯಂತೆ, ಅಲ್ಲಿಗೆ ನಡೆದುಕೊಂಡೇ ಹೋಗಿ ಅಲ್ಲಿಂದ ರೈಲಿನಲ್ಲಿ ಹೋಗುತ್ತೇವೆ ಎಂದು ಅವರು ಹೇಳಿದ್ದರು. ಇದು ಕರ್ನಾಟಕದ ಸರ್ಕಾರದ ಮೇಲಿನ ಅಪನಂಬಿಕೆಯೂ, ಸರ್ಆರ ಹೊಣೆಗೇಡಿತನವನ್ನೂ ಸೂಚಿಸಿತ್ತು. ಅವರು ಯಾವುದೇ ಮಾತಿಗೂ ಕರಗದೆ ತಮ್ಮ ಪಣದ ಹಾದಿ ಹಿಡಿದಿದ್ದರು.

ಗೋವಾದಿಂದ ಹೊರಟಿದ್ದ ಅದೇ ರೈಲಿನಲ್ಲಿದ್ದ 25 ವರ್ಷದ ಸೌರವ್ ಪಟೇಲ್, “ನನ್ನ ಸಹೋದರ ದೆಹಲಿಯಲ್ಲಿ ಸಿಲುಕಿಕೊಂಡಿದ್ದಾನೆ. ಗ್ವಾಲಿಯರ್‌ನಲ್ಲಿ ನಮ್ಮ ಕುಟುಂಬವಿದೆ. ತಂದೆ ತೀರಿಕೊಂಡ ನಂತರ ಕುಟುಂಬದ ಹೊಣೆಹೊತ್ತಿದ್ದೇನೆ. ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಹೋಟೆಲ್‌ಗೆ ಅತಿಥಿಗಳಿಲ್ಲದ್ದರಿಂದ ನೀನು ಹೊರಡುವುದೇ ಉತ್ತಮ ಎಂದು ಮಾಲೀಕ ಹೇಳಿದರು. ಬೇರೆ ದಾರಿಕಾಣದೆ ಹೊರಟು ಬಂದೆ” ಎಂದು ಹೇಳಿದರು.

ಕೆಲವರು ಸಾಮಾನು ಸರಂಜಾಮುಗಳಿಲ್ಲದೆ ಹೊರಟು ಹೋದರು. ಕೆಲವರು ಬಟ್ಟೆ ಮತ್ತು ಪಾತ್ರೆಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಿರುವುದು ಕಂಡುಬಂತು.

ಸಹಾಯಕನಾಗಿ ಕೆಲಸ ಮಾಡುವ 60 ವರ್ಷದ ಮಲಿಕ್ ಖಾನ್, “ಜೋರು ಮಳೆ-ಗಳಿಯಿಂದಾಗಿ ನಮ್ಮ ಗುಡಿಸಲುಗಳನ್ನು ಹಾಳಾಗಿವೆ ಎಂದು ನಮ್ಮಲ್ಲಿ ಕೆಲವರಿಗೆ ಕರೆಗಳು ಬಂದವು. ನಿಮ್ಮ ಕುಟುಂಬವು ಚಾವಣಿಮ ಇಲ್ಲದೆ ಹೆಣಗಾಡುತ್ತಿದ್ದಾರೆ ಎಂದು ಅವರು ತಿಳಿಸಿದರು. ಇಂತಹ ಸಂದರ್ಭದಲ್ಲಿ ನಾನ ಸರ್ಕಾರಿ ಆಶ್ರಯದಲ್ಲಿ ಉಚಿತ ಆಹಾರವನ್ನು ಸೇವಿಸುವುದು ಕಷ್ಟವೆನಿಸಿತು. ನಮ್ಮ ಉದ್ಯೋಗಗಳು ಹೇಗಿದ್ದರೂ ಹೋಗುತ್ತವೆ. ನನ್ನ ಕುಟುಂಬಕ್ಕೆ ನಾನು ಸಹಾಯ ಮಾಡಲು ಊರಿಗೆ ಹೋಗುತ್ತಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.

ಇಂತಹ ಕಷ್ಟದ ಬದುಕು ಸಾಗಿಸುತ್ತಿರುವ ದೇಶದ ಬಹುಸಂಖ್ಯಾತರ ಮೇಲೆ ನಮ್ಮ ಸರ್ಕಾರಗಳು ಸವಾರಿ ಮಾಡುತ್ತಿವೆ. ಕರ್ನಾಟಕ ಸರ್ಕಾರ ಬಿಲ್ಡರ್‌ಗಳ ಲಾಬಿಗೆ ಮಣಿದು ರೈಲುಗಳನ್ನು ರದ್ದುಗೊಳಿಸಿತು. ಬಸ್‌ಗಳಲ್ಲಿ ದುಪ್ಪಟ್ಟು ಪ್ರಯಾಣದರವನ್ನು ವಿಧಿಸಿ ಮೊದಲೆರಡು ದಿನ ಸುಲಿಗೆ ಮಾಡಿತು. ಕೇಂದ್ರ ಸರ್ಕಾರ ಕಾರ್ಪೊರೇಟ್‌ಗಳ ಹಿತಕ್ಕಾಗಿ 08 ಗಂಟೆಯ ದುಡಿಮೆ ಅವಧಿಯನ್ನು 12 ಗಂಟೆಗೆ ಏರಿಸಲು ಮುಂದಾಗಿದೆ.

ಇದೆಲ್ಲವೂ ಕಾರ್ಮಿಕರಿಗೆ ಸರ್ಕಾರ, ವ್ಯವಸ್ಥೆ, ಸಮಾಜದ ಮೇಲಿನ ಭರವಸೆಯನ್ನು ಹುಸಿಯಾಗಿದೆ. ಕಾರ್ಮಿಕರ ಬೆವರಿನ ರಕ್ತ ಹೀರಲು ಇಡೀ ವ್ಯವಸ್ಥೆಯೇ ಸಂಚು ಹೋಡಿ ನಿಂತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights