ಕ್ಯಾನ್ಸರ್ ನಿಂದ ಬಳಲುತ್ತಿರುವ ಸಹ ಸ್ಪರ್ಧಿಯ ಕೈಹಿಡಿದು ರೇಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳು : ನೆಟ್ಟಿಗರಿಂದ ಮೆಚ್ಚುಗೆ!

ಕ್ಯಾನ್ಸರ್ ಪೀಡಿತ ಸಹ ಸ್ಪರ್ಧಿಯ ಕೈಹಿಡಿದುಕೊಂಡು ವಿದ್ಯಾರ್ಥಿಗಳು ರೇಸ್ ಪೂರ್ಣಗೊಳಿಸಿದ ಹೃದಯ ಸ್ಪರ್ಶಿ ಘಟನೆ ನಡೆದಿದೆ.

ನ್ಯೂಯಾರ್ಕ್‌ನ ಕ್ಯಾಪಿಟಲ್ ಜಿಲ್ಲೆಯಲ್ಲಿ ಟ್ರ್ಯಾಕ್-ಅಂಡ್-ಫೀಲ್ಡ್ ರೇಸ್‌ನಲ್ಲಿ ಮೂರು ಶಾಲಾ ವಿದ್ಯಾರ್ಥಿಗಳು ತಮ್ಮ ಸಹ ಸ್ಪರ್ಧಿ ಕೈ ಹಿಡಿದುಕೊಂಡು ರೇಸ್ ಪೂರ್ಣಗೊಳಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅಮೆರಿಕದ ಮಾಜಿ ವೃತ್ತಿಪರ ಬ್ಯಾಸ್ಕೆಟ್‌ಬಾಲ್ ಆಟಗಾರ ರೆಕ್ಸ್ ಚಾಪ್ಮನ್ ಅವರು ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಮೂವರು ವಿದ್ಯಾರ್ಥಿಗಳು ತಮ್ಮ ತಂಡದ ಆಟಗಾರ್ತಿ ಯೆವಾ ಕ್ಲಿಂಗ್‌ಬೀಲ್ ಅವರ ಕೈಗಳನ್ನು ಹಿಡಿದುಕೊಂಡು ರೇಸ್ ಪೂರ್ಣಗೊಳಿಸಲು ಸಹಾಯ ಮಾಡಿದ್ದಾರೆ.

https://twitter.com/RexChapman/status/1397035425458384901?ref_src=twsrc%5Etfw%7Ctwcamp%5Etweetembed%7Ctwterm%5E1397035425458384901%7Ctwgr%5E%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fwatch-school-girls-help-teammate-recovering-from-cancer-complete-race-2449037

ಶೆನೆನ್ಡೆಹೊವಾ ಪ್ರೌಢಶಾಲೆಯ ನಿದ್ಯಾರ್ಥಿನಿಯರು ಫಿನಿಶಿಂಗ್ ಲೈನ್ ಕ್ರಾಸ್ ಮಾಡುತ್ತಲೇ ಅಲ್ಲಿ ನೆರೆದಿದ್ದ ಪ್ರೇಕ್ಷಕರು ಹಾಗೂ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಂದ ಭಾರೀ ಮೆಚ್ಚುಗೆಯ ಕರತಾಡನ ಮೂಡಿ ಬಂದಿದ್ದಲ್ಲದೇ, ಈ ವಿದ್ಯಾರ್ಥಿನಿಯರ ಸ್ಪೂರ್ತಿಯುತ ನಡೆಗೆ, ಅವರ ಹೆಸರುಗಳನ್ನು ಜೋರಾಗಿ ಕೂಗಿ ಪ್ರೋತ್ಸಾಹಿಸಲಾಗಿದೆ.

ಈ ವೀಡಿಯೊ ವೈರಲ್ ಆಗಿದ್ದು ಸುಮಾರು 90,000 ವೀಕ್ಷಣೆಗಳನ್ನು ಪಡೆದಿದೆ.

https://twitter.com/RexChapman/status/1397035425458384901?ref_src=twsrc%5Etfw%7Ctwcamp%5Etweetembed%7Ctwterm%5E1397035425458384901%7Ctwgr%5E%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fwatch-school-girls-help-teammate-recovering-from-cancer-complete-race-2449037

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights