ಮೋದಿ ಸರ್ಕಾರಕ್ಕೆ ಅಮೆಜಾನ್ ಕಂಪನಿ 8,450 ಕೋಟಿ ರೂ ಲಂಚ ನೀಡಿದೆ: ಕಾಂಗ್ರೆಸ್‌ ನಾಯಕಿ ಆರೋಪ

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕೇಂದ್ರ ಸರ್ಕಾರಕ್ಕೆ ಅಮೇಜಾನ್ ಕಂಪೆನಿಯು 8,546 ಕೋಟಿ ರೂಪಾಯಿ ಲಂಚ ನೀಡಿದೆ ಎಂದು ಎಐಸಿಸಿ ವಕ್ತಾರೆ, ರಾಜ್ಯ ಸಭೆ ಸದಸ್ಯೆ ಡಾ.ಅಮೀ ಯಜ್ನಿಕ್ ಆರೋಪಿಸಿದ್ದಾರೆ.

ಕಾನೂನು ಶುಲ್ಕದ (ಲೀಗಲ್ ಫೀಸ್) ಹೆಸರಿನಲ್ಲಿ ಅಮೇಜಾನ್ ಕಂಪೆನಿಯು ಕೇಂದ್ರ ಸರ್ಕಾರಕ್ಕೆ ದೊಡ್ಡ ಪ್ರಮಾಣದ ಹಣ ನೀಡಿದೆ. ಆದರೆ ಹಣ ಯಾರಿಗೆ ಸಂದಾಯವಾಗಿದೆ? ಹೇಗೆ ಸಂದಾಯವಾಗಿದೆ? ಎಂಬುದನ್ನು ಸರ್ಕಾರ ತಿಳಿಸಿಲ್ಲ. ಈ ಹಣದ ವಹಿವಾಟಿನ ಬಗ್ಗೆ ಕೇಂದ್ರ ಸರ್ಕಾರ ಇದುವರೆಗೂ ದಾಖಲೆಗಳನ್ನು ನೀಡಿಲ್ಲ. ಅಮೇಜಾನ್ ಕಂಪೆನಿ ತಮ್ಮ ಪರ ಕಾನೂನು ರೂಪಿಸಲು ಕೇಂದ್ರಕ್ಕೆ ನೀಡಿದ ಲಂಚ ನೀಡಿದೆ” ಎಂದು ಅವರು ಆರೋಪಿಸಿದ್ದಾರೆ.

ಅಮೆರಿಕಾ ಮೂಲದ ಅಮೇಜಾನ್ ಕಂಪೆನಿ ಇಷ್ಟು ದೊಡ್ಡ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ನೀಡಿರುವುದು ಯಾಕೆ? ಸರ್ಕಾರದ ಕಾನೂನುಗಳನ್ನು ತಮ್ಮ ಪರವಾಗಿ ಬದಲಾಯಿಸುವುದಕ್ಕಾ? ಡಿಜಿಟಲ್ ಇಂಡಿಯಾದ ಹೆಸರಿನಲ್ಲಿ ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸವಾಗುತ್ತಿದೆ. ಅಮೇಜಾನ್ ಕಂಪೆನಿಯಿಂದ ಸಣ್ಣ ವ್ಯಾಪಾರಿಗಳಿಗೆ ತೊಂದರೆಯಾಗಿದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರವಿದ್ದಾಗ ದೇಶದಲ್ಲಿ ಕಚ್ಚಾ ವಸ್ತುಗಳ ಬೆಲೆ ಜಾಸ್ತಿಯಾಗಿತ್ತು. ದೇಶದಲ್ಲೇ ಸಿದ್ದ ವಸ್ತುಗಳನ್ನು ಉತ್ಪಾದನೆ ಮಾಡಲಾಗುತ್ತಿತ್ತು. ಇಲ್ಲಿನ ಜನರಿಂದಲೇ ಮಾರಾಟ ಕೊಳ್ಳುವಿಕೆ ನಡೆಯುತಿತ್ತು. ಅದರೆ ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ಎಲ್ಲವನ್ನೂ ವಿದೇಶಿ ಕಂಪೆನಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಮೋದಿ ಸರ್ಕಾರ ಬಡಜನರನ್ನು ಕಡೆಗಣಿಸಿ, ಶ್ರೀಮಂತ ವರ್ಗಕ್ಕೆ ಮಾನ್ಯತೆ ನೀಡುತ್ತಿದೆ. ಇ-ಕಾಮರ್ಸ್ ಕಂಪೆನಿಗಳಿಂದ ಕಿರಾಣಿ ಅಂಗಡಿಯವರಿಗೆ ಹೊಡೆತ ಬೀಳುತ್ತಿದೆ ಎಂದು ಅವರು ಆರೋಪಿಸಿದ್ಧಾರೆ.

ಅಮೆಜಾನ್ ಕಂಪೆನಿ ಕೊಟ್ಟ ಹಣ ಯಾರ ಕಿಸೆ ಸೇರಿದೆ ಎಂಬುವುದರ ಬಗ್ಗೆ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ವಿಚಾರಣೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ರೈತರ ವಿರುದ್ದ ದೊಣ್ಣೆ ಎತ್ತಿಕೊಳ್ಳಲು ಕಾರ್ಯಕರ್ತರಿಗೆ ಕರೆ; ಹರ್ಯಾಣ ಸಿಎಂ ವಿಡಿಯೋ ವೈರಲ್!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights