Fact check:ಪಾಕಿಸ್ತಾನದ ಸಂಸತ್‌ನಲ್ಲಿ ‘ಮೋದಿ ಜಿಂದಾಬಾದ್‌’ ಎಂದು ಘೋಷಣೆ ಕೂಗಿಲ್ಲ

ಭಾರತದ ಯಶಸ್ಸು ಮತ್ತು ಉಕ್ರೇನ್‌ನಿಂದ ದೇಶದ ನಾಗರಿಕರನ್ನು ಸ್ಥಳಾಂತರಿಸುವಲ್ಲಿ ಭಾರತ ಉತ್ತಮ ಸಾಧನೆ ಮತ್ತು
ಜವಬ್ದಾರಿಯಿಂದ ನಡೆದುಕೊಂಡಿದೆ ಹಾಗೂ ಪಾಕಿಸ್ತಾನದ ತನ್ನ ಪ್ರಜೆಗಳನ್ನು ಸ್ಥಳಾಂತರಿಸುವಲ್ಲಿ ವಿಫಲವಾಗಿದೆ ಎಂದು
ಹೇಳುತ್ತ ಭಾರತದ ಈ ಸಾಧನೆಯನ್ನು ಮೆಚ್ಚಿ ಪಾಕಿಸ್ತಾನ ಸಂಸತ್ತಿನಲ್ಲಿ “ಮೋದಿ ಜಿಂದಾಬಾದ್” ಎಂದು ಘೋಷಣೆಗಳನ್ನು
ಘೋಷಣೆಯನ್ನು ಕೂಗಲಾಗಿದೆ ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ
ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಪಾಕಿಸ್ತಾನದಲ್ಲಿ ಮೋದಿ ಪರ ಘೋಷಣೆಗಳನ್ನು ನಿಜವಾಗಿಯೂ ಕೂಗಲಾಗಿದೆಯೇ ಎಂದು
ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್: 

ವೈರಲ್‌ ಆಗುತ್ತಿರುವ ಪೋಸ್ಟ್ ನ ವೀಡಿಯೊವನ್ನು ಗೂಗಲ್‌ ಸರ್ಚ್‌ ಮಾಡಲಾಗಿದ್ದು, ವೀಡಿಯೊದ ವಿಸ್ತೃತ ಆವೃತ್ತಿಯು
2020 ರ ಅಕ್ಟೋಬರ್‌ನಲ್ಲಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಿರುವುದು ಕಂಡುಬಂದಿದೆ.

“ಶಾ ಮೆಹಮೂದ್ ಖುರೇಷಿ ಫ್ರಾನ್ಸ್ ಇಸ್ಲಾಮೋಫೋಬಿಯಾ ಕುರಿತು ಕಠಿಣ ಭಾಷಣ” ಎಂಬ ಶೀರ್ಷಿಕೆಯೊಂದಿಗೆ YouTube
ವೀಡಿಯೊದಲ್ಲಿ ಖುರೇಷಿಯವರು ಪಾಕಿಸ್ತಾನದ ಸಂಸತ್‌ ನಲ್ಲಿ ಸುದೀರ್ಘವಾಗಿ ಮಾತನಾಡಿರುವ ವಿಡಿಯೊ ಇದಾಗಿದೆ. ಆದರೆ
ವೈರಲ್ ಪೋಸ್ಟ್‌ ನಲ್ಲಿ ಮಾಡಿದ ವೀಡಿಯೊ ಕ್ಲಿಪ್ ಅನ್ನು 35 ಸೆಕೆಂಡುಗಳ ಅವಧಿಯಲ್ಲಿ ನೋಡಬಹುದು. ಹಾಗಾಗಿ,
ಉಕ್ರೇನ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳ ಪ್ರಸ್ತುತ ಸ್ಥಳಾಂತರಿಸುವ ಪ್ರಯತ್ನಗಳಿಗೆ ಹಳೆಯ ವೀಡಿಯೊವನ್ನು
ಎಡಿಟ್‌ ಮಾಡುವ ಮೂಲಕ ತಪ್ಪಾಗಿ ಲಿಂಕ್ ಮಾಡಲಾಗುತ್ತಿದೆ.

ಅಲ್ಲದೆ, ವೀಡಿಯೊದಲ್ಲಿರುವ ಜನರು ‘ಮೋದಿ ಜಿಂದಾಬಾದ್’ಎಂದು ಘೋಷಣೆ ಕೂಗಿಲ್ಲ ಬದಲಿಗೆ ಅಲ್ಲ,
‘ಮತದಾನ.. ಮತದಾನ ಎಂದು ಕೂಗುತ್ತಿದ್ದರು. ‘ಡಾನ್ ಲೇಖನದಲ್ಲಿ ಇದನ್ನು ಓದಬಹುದು – “ವಿರೋಧ ಪಕ್ಷದ
ಸದಸ್ಯರೊಂದಿಗೆ “ಮತದಾನ! ಮತದಾನ!  ಆಸಿಫ್ ಮಂಡಿಸಿದ ನಿರ್ಣಯಕ್ಕಾಗಿ, ಪ್ರತಿಪಕ್ಷಗಳು ಸೂಕ್ಷ್ಮ ವಿಷಯದ ಬಗ್ಗೆ ರಾಜಕೀಯ
ಮಾಡುತ್ತಿವೆಎಂದು ಖುರೇಷಿ ಆರೋಪಿಸಿದರು. ಖುರೇಷಿಯವರು ಮಾತನಾಡುವ ವೇಳೆ ಆಸೀಫ್‌ ಎಂದು ಹೇಳುವ ವಿಡಿಯೋ
ಅವಧಿಯನ್ನುಎಡಿಟ್‌ ಮಾಡಿ ಭಾರತದ ಪ್ರಧಾನಿ ನರೇಂದ್ರ ಮೋದಿ ಎಂದು ತಿರುಚಿದ್ದಾರೆ.

ಮತದಾನ ಎಂದು ಘೋಷಣೆ ಕೂಗುತ್ತಿದ ವಿರೋಧ ಪಕ್ಷದ ಸದಸ್ಯರಿಗೆ ಸ್ಪೀಕರ್ ಅವರು ಸಮಾಧಾನ ಪಡಿಸುತ್ತಿರುವುದನ್ನು ಪೂರ್ಣ
ವೀಡಿಯೊದಲ್ಲಿ ಗಮನಿಬಹುದು. ಮತದಾನ.. ಸಬ್ ಕುಚ್ ಹೋಗಾ.. ಸಬರ್ ರಖೇ ಆಪ್ (ಅನುವಾದ –
ಮತದಾನ.. ಎಲ್ಲವೂ ನಡೆಯುತ್ತದೆ.. ತಾಳ್ಮೆಯಿಂದಿರಿ ಎಂದು ಹೇಳುವುದನ್ನು ಕಾಣಬಹುದು. ಪೋಸ್ಟ್ ಮಾಡಿದ ವೀಡಿಯೊದ
ಕುರಿತು ಹೆಚ್ಚಿನ ಮಾಹಿತಿಗಾಗಿ, ರಾಷ್ಟ್ರೀಯ ಅಸೆಂಬ್ಲಿಯ (26 ಅಕ್ಟೋಬರ್ 2020) ಚರ್ಚೆಯ ದಾಖಲೆಯನ್ನು
ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಉಕ್ರೇನ್‌ನಲ್ಲಿ ಭಾರತದ ತೆರವು ಪ್ರಯತ್ನಗಳನ್ನು ಶ್ಲಾಘಿಸಿ ಪಾಕಿಸ್ತಾನ ಸಂಸತ್ತಿನಲ್ಲಿ ‘ಮೋದಿ
ಜಿಂದಾಬಾದ್’ ಎಂಬ ಘೋಷಣೆಗಳನ್ನು ಕೂಗಿಲ್ಲ, ಈ ಹಿಂದೆಯೂ ಇದೇ ವೀಡಿಯೋ ಬೇರೆ ಬೇರೆ ಹೇಳಿಕೆಗಳೊಂದಿಗೆ ವೈರಲ್ ಮಾಡಲಾಗಿತ್ತು. ಅದನ್ನು ಕೂಡ  ensuddi.com  ಫ್ಯಾಕ್ಟ್‌ಚೆಕ್ ಮಾಟಡುವ ಮೂಲಕ ಬಯಲು ಮಾಡಿತ್ತು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯು ತಪ್ಪಾಗಿದೆ.

ಇದನ್ನು ಓದಿರಿ: Fact check: ಸಿಖ್ಖ್ ವ್ಯಕ್ತಿಯನ್ನು ಸಾಯುವಂತೆ ಥಳಿಸುತ್ತಿರುವ ವಿಡಿಯೊ ಪಾಕಿಸ್ತಾನದಲ್ಲ, ಭಾರತದ್ದು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights