Fact check: ಸಿಖ್ಖ್ ವ್ಯಕ್ತಿಯನ್ನು ಸಾಯುವಂತೆ ಥಳಿಸುತ್ತಿರುವ ವಿಡಿಯೊ ಪಾಕಿಸ್ತಾನದಲ್ಲ, ಭಾರತದ್ದು!

ಪಾಕಿಸ್ತಾನದಲ್ಲಿರುವ ಸಿಖ್ಖರ ಧಾರುಣ ಸ್ಥಿತಿ ಎಂದು ಪ್ರತಿಪಾದಿಸಿ ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೀಡಿಯೊದಲ್ಲಿ ಒಬ್ಬ ವ್ಯಕ್ತಿಯೊಬ್ಬ ಇನ್ನೊಬ್ಬ ವ್ಯಕ್ತಿಗೆ ರಕ್ತ ಬರುವಂತೆ ಹೊಡೆಯುವ ದೃಶ್ಯಾವಳಿಗಳನ್ನು ಕಾಣಬಹುದು. ಈ ವೀಡಿಯೋದಲ್ಲಿ ಥಳಿಸುತ್ತಿರುವ ವ್ಯಕ್ತಿಯನ್ನು ಮುಸ್ಲಿಂ ಎಂದು ಮತ್ತು ಹಲ್ಲೆಗೊಳಗಾದ ವ್ಯಕ್ತಿಯು ಸಿಖ್ಖ್ ಧರ್ಮೀಯನೆಂದು ಹೇಳಲಾಗಿದೆ.

 

ಇದರ ಜೊತೆಗೆ ಪೋಸ್ಟ್‌ನಲ್ಲಿ, “ಇದು ಪಾಕಿಸ್ತಾನದ ಸರ್ದಾರ್ ಸ್ಥಿತಿಯಾಗಿದೆ, ಆದರೆ  ಇಲ್ಲಿನ (ಭಾರತದ) ಸರ್ದಾರ್‌ಗಳು ಮುಸ್ಲಿಮರೊಂದಿಗೆ ಸೇರಿ ಖಲಿಸ್ತಾನ ಆಗಬೇಕೆಂದು ಕನಸು ಕಾಣುತ್ತಿದ್ದಾರೆ” ಎಂದು ಬರೆಯಲಾಗಿದೆ. ಹಾಗಿದ್ದರೆ  ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು  ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಘಟನೆಗೆ ಸಂಬಂದಿಸಿದ ಕೀವರ್ಡ್‌ಗಳೊಂದಿಗೆ ಗೂಗಲ್ ಸರ್ಚ್‌ನಲ್ಲಿ ಹುಡುಕಿದಾಗ ಅದೇ ರೀತಿ ವಿಡಿಯೊವೊಂದು ಲಭ್ಯವಾಗಿದೆ.  ಇದು ಲೂಧಿಯಾನದ (ಪಂಜಾಬ್) ಟಿಬ್ಬಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಎಂದು ವಿಡಿಯೋದಲ್ಲಿ ಉಲ್ಲೇಖಿಸಲಾಗಿದೆ.

‘ಸಿಖ್ ಸಂಗತ್ ಉತ್ತರಾಖಂಡ್’ ಎಂಬ ಫೇಸ್‌ಬುಕ್ ಪೇಜ್‌ವೊಂದರಲ್ಲಿ ಘಟನೆಯ ಕುರಿತು 05 ಮಾರ್ಚ್ 2022 ರಂದು ಲೈವ್ ವೀಡಿಯೊವನ್ನು ಪೋಸ್ಟ್ ಮಾಡಿದೆ. ವೀಡಿಯೊದಲ್ಲಿ ಪಂಜಾಬ್ ಪೊಲೀಸರು ‘ಈ ಘಟನೆಯು 01 ಮಾರ್ಚ್ 2022 ರಂದು ಟಿಬ್ಬಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ’ ಎಂದು ಹೇಳಿದ್ದಾರೆ. ಘಟನೆಯ ಕುರಿತು ದಾಖಲಾಗಿರುವ ಎಫ್‌ಐಆರ್ ಅನ್ನು ಇಲ್ಲಿ ನೋಡಬಹುದು. ವಿಡಿಯೋದಲ್ಲಿ ಹಲ್ಲೆಗೊಳಗಾದ ವ್ಯಕ್ತಿ ಫೋನ್ ಕದಿಯಲು ಯತ್ನಿಸಿದ್ದ ಎನ್ನಲಾಗಿದೆ.

ವೈರಲ್ ವಿಡಿಯೋದಲ್ಲಿ ಸಿಖ್ ವ್ಯಕ್ತಿಯನ್ನು ನಿರ್ದಯವಾಗಿ ಥಳಿಸುತ್ತಿರುವ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳುವಂತೆ ಕೆಲವು ಸಿಖ್ಖರು ಒತ್ತಾಯಿಸುತ್ತಿದ್ದಾರೆ. ಆ ವಿನಂತಿಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ ಈ ಘಟನೆ ನಡೆದಿರುವುದು ಪಾಕಿಸ್ತಾನ ಅಲ್ಲ, ಈ ಘಟನೆ ಭಾರತದ ಪಂಜಾಬ್‌ನಲ್ಲಿ ನಡೆದಿದ್ದು ಮೊಬೈಲ್ ಕದ್ದ ಆರೋಪಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ರಕ್ತ ಬರುವಂತೆ ಹಲ್ಲೆ ಮಾಡಿದ್ದಾನೆ. ಆತನನ್ನು ಬಂಧಿಸುವಂತೆ ಸಿಖ್ ಬಾಂಧವರು ಬತ್ತಾಯಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯು ತಪ್ಪಾಗಿದ್ದು, ಕೋಮು ಹಿಂಸಾಚಾರವನ್ನು ಪ್ರಚೋದಿಸುವಂತಿದೆ.

ಕೃಪೆ: ಫ್ಯಾಕ್ಟ್‌ಲಿ


ಇದನ್ನು ಓದಿರಿ: Fact check: ಛತ್ರಪತಿ ಶಿವಾಜಿ ಪಾತ್ರದಲ್ಲಿ ರಾಕಿಂಗ್‌ ಸ್ಟಾರ್ ಯಶ್ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights